ವೈರಲ್ ನ್ಯೂಸ್ಸುದ್ದಿಗಳು

ಜನರು ಭೂಮಿಯನ್ನೇ ಬಿಟ್ಟು ಹೋಗ್ತಾರೆ ಆದರೆ ಜಾತಿ ಬಿಟ್ಟು ಹೋಗಲ್ಲ..!!! ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

‘ವಧು ಬೇಕಾಗಿದೆ’ ಎಂಬ ಜಾಹಿರಾತು ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ, ಅಲ್ಲಿ ಎಸ್ ಸಿ, ಎಸ್ಟಿಗಳನ್ನು ಅನಾವಶ್ಯಕವಾಗಿ ಎಳೆದುತಂದು ಅವಮಾನಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಾಹೀರಾತಿನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ.

ವಧು ಬೇಕಾಗಿದೆ

38 ವರ್ಷದ ಹಿಂದೂ ಒಕ್ಕಲಿಗ ಹೆಚ್.ಐ.ವಿ.ಬಾದಿತ, ಸದೃಢ ಉತ್ತಮ ಆರ್ಥಿಕವಾಗಿ ಇರುವ ವರನಿಗೆ ಹೆಚ್ ಐವಿ ಬಾದಿತ ವಧು ಬೇಕಾಗಿದೆ, ಸ್ವ ಇಚ್ಛೆಯಿಂದ ಮದುವೆಯಾಗುವ ವಿಧವೆಯರು ಸಂಪರ್ಕಿಸಬಹುದು. (ಎಸ್, ಎಸ್ಟಿ ಜಾತಿಯವರು ಬಿಟ್ಟು)

ಅಂದ ಹಾಗೆ ಈ ಈ ಜಾಹೀರಾತಿನಲ್ಲಿ ಎಸ್ ಸಿ-ಎಸ್ಟಿಗಳ ವಿಚಾರ ಬೇಕಿತ್ತೇ? ಯಾರಾದರೂ ಎಸ್ ಸಿ-ಎಸ್ಟಿಗಳು ನಮ್ಮನ್ನು ಮದುವೆಯಾಗು ಎಂದು ಎಚ್ ಐವಿ ಪೀಡಿತ ಒಕ್ಕಲಿಗ ವರನಿಗೆ ಬೇಡಿಕೊಂಡಿದ್ದಾರಾ? ಅನಾವಶ್ಯಕವಾಗಿ ಎಸ್ ಸಿ, ಎಸ್ಟಿಗಳನ್ನು ಯಾಕೆ ಅವಮಾನಿಸಲಾಗುತ್ತಿದೆ. ಇವೇ ಮೊದಲಾದ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ.

ಹೀಗಾಗಿ ಜನರು ಭೂಮಿಯನ್ನೇ ಬಿಟ್ಟು ಹೋಗ್ತಾರೆ ಆದರೆ ಜಾತಿ ಬಿಟ್ಟು ಹೋಗಲ್ಲ’ ಎಂದು ಈ ಜಾಹಿರಾತಿನ ವಿರುದ್ದ ಮತ್ತು ಇಂತಹ ಜಾಹೀರಾತುಗಳನ್ನು ಪ್ರಕಟಿಸುವ ಪತ್ರಿಕೆಯವರು ಸಹ ಪ್ರಶ್ನಿಸಬಹುದಿತ್ತು ಎಂದು ಜನ ಕಿಡಿಕಾರುತ್ತಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ದೂರಿಯಾಗಿ ನಡೆಯಿತು ಸೀಮಂತ

#Marriage advertisement #viralnews #kannadasuddigalu

Tags