ಸುದ್ದಿಗಳು

ನಾಳೆ ತೆರೆ ಕಾಣಬೇಕಾಗಿದ್ದ ‘ಮಟಾಶ್’ ಚಿತ್ರದ ಬಿಡುಗಡೆ ಮುಂದಕ್ಕೆ..!!!

ತಾಂತ್ರಿಕ ದೋಷದಿಂದ ‘ಮಟಾಶ್’ ರಿಲೀಸ್ ಮುಂದಕ್ಕೆ ಹೋಗಿದೆ

ಬೆಂಗಳೂರು, ಡಿ.6: ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ‘ಮಟಾಶ್’ ಈ ಸಿನಿಮಾ ಈ ವಾರ ತೆರೆಗೆ ಬರಲು ಸಿದ್ದತೆ ನಡೆಸಿತ್ತು. ಆದರೆ ತಾಂತ್ರಿಕ ದೋಷದ ಕಾರಣದಿಂದಾಗಿ ಚಿತ್ರದ ರಿಲೀಸ್ ದಿಢೀರ್ ಅಂತ ಮುಂದಕ್ಕೆ ಹೋಗಿದೆ.

ತಾಂತ್ರಿಕ ದೋಷವೇ ಕಾರಣ

ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ , ಟ್ರೈಲರ್ ಮತ್ತು ಹಾಡುಗಳಿಂದ ಎಲ್ಲರ ಗಮನ ಸೆಳೆದಿದ್ದ ‘ಮಟಾಶ್’ ಚಿತ್ರವನ್ನು ಎಸ್ ಡಿ ಅರವಿಂದ್ ನಿರ್ದೇಶನ ಮಾಡಿದ್ದರು. ಚಿತ್ರವನ್ನು ನೋಟ್ ಬ್ಯಾನ್ ವಿಚಾರಗಳನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿತ್ತು. ಈಗಾಗಲೇ ಗಾಂಧಿನಗರದಲ್ಲಿಲ್ಲೂ ಹೊಸ ಭರವಸೆಯನ್ನೂ ಹುಟ್ಟಿಸಿತ್ತು.

ಸದ್ಯದಲ್ಲಿಯೇ ಬಿಡುಗಡೆಯ ದಿನಾಂಕ ಪ್ರಕಟ

ತಾಂತ್ರಿಕ ದೋಷದಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಹೀಗಾಗಿ ಸದ್ಯದಲ್ಲಿಯೇ ಎಲ್ಲಾ ಸಮಸ್ಯೆಗಳನ್ನು ಬಗಗೆಹರಿಸಿದ ನಂತರ ಚಿತ್ರತಂಡದವರು ಬಿಡುಗಡೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಬಹುತಾರಾಗಣ

ಇನ್ನು ಚಿತ್ರದ ತಾರಾಗಣದಲ್ಲಿ ಸಮರ್ಥ್ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರದ್ವಾಜ್, ರಾಘು ರಾಮನಕೊಪ್ಪ, ನಂದಗೋಪಾಲ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸದಾನಂದಕಾಳಿ, ರವಿಕಿರಣ್ ರಾಜೇಂದ್ರನ್,  ರಂಗುಸ್ವಾಮಿ ಸೇರಿದಂತೆ ಹಲವರು ನಟಿಸಿದ್ದಾರೆ.

Tags