ಸುದ್ದಿಗಳು

ಇದು ಜೆ.ಕೆ. ಕಥೆ ..! ಮೇ-1 ರ ಬಿಡುಗಡೆ ಆಗಸ್ಟ್ 24ರಂದು..!!

ಸಂಕಲನಕಾರ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಅವರು ನಿರ್ದೇಶನ ಮಾಡಿರುವ ‘ಮೇ ಫಸ್ಟ್’ ಚಿತ್ರವು ಇದೇ ತಿಂಗಳ 24 ರಂದುತೆರೆಗೆ ಬರುತ್ತಿದೆ. ಇನ್ನು ಈ ಚಿತ್ರದ ಕಥೆಯನ್ನು ನಾಯಕ ಜೆ.ಕೆ ಬರೆದಿರುವುದು ವಿಶೇಷ.

ಬೆಂಗಳೂರು, ಆ.17: ‘ಜಸ್ಟ್ ಲವ್’ ಚಿತ್ರದ ನಂತರ, ನಟ ಜಯರಾಮ್ ಕಾರ್ತಿಕ್ ಮತ್ತು ನಿರ್ದೇಶಕ ನಾಗೇಂದ್ರ ಅರಸ್ ಮತ್ತೆ ಜೊತೆಯಾಗಿ ‘ಮೇ ಫಸ್ಟ್’ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಒಂದು ಮಟ್ಟದ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಈ ಚಿತ್ರ ಇದೇ ತಿಂಗಳ 24 ರಂದು ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ.

ಭಯಾನಕ ಕಥಾಹಂದರದ ಚಿತ್ರ

ಹೆಸರಿನಿಂದಲೇ ನಿರೀಕ್ಷೆ ಮೂಡಿಸಿರುವ ಈ ಚಿತ್ರವು ಭಯಾನಕ ಕಥಾಹಂದರವನ್ನು ಒಳಗೊಂಡಿದ್ದು, ಅದರೊಂದಿಗೆ ಪ್ರೀತಿ, ಪ್ರೇಮ, ಕೌತುಕ ಸೇರಿದಂತೆ ಎಲ್ಲಾ ಬಗೆಯ ರಸಗಳನ್ನು ಈ ಚಿತ್ರದಲ್ಲಿ ಕಾಣಬಹುದು.

ಚಿತ್ರಕ್ಕೆ ಕಥೆ ಬರೆದ ಜೆ.ಕೆ

ನಾಯಕ ಜೆ.ಕೆ ಅವರು ಈಗಾಗಲೇ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೀಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಮೂಲಕ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡುವ ಮುಖಾಂತರ ನಿರ್ದೇಶನ ವಿಭಾಗಕ್ಕೂ ಹೆಜ್ಜೆ ಕಾಲಿರಿಸಿದ್ದಾರೆ.

ತಾಂತ್ರಿಕ ವರ್ಗ

ಶ್ರೀ ಲಕ್ಷ್ಮೀ ಸಾಯಿ ಕ್ರಿಯೇಷನ್ಸ್ ಸಂಸ್ಥೆಯಡಿ ವಾಣಿ ರಾಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಜೆ.ಕೆ.ಗೆ ಇಬ್ಬರು ನಾಯಕಿಯರಿದ್ದು, ರಕ್ಷಾ ಸೋಮಶೇಖರ್ ಮತ್ತು ಪೂರ್ವಿ ಜೋಷಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ, ಕಿರಣ್ ಸತೀಶ್ ಛಾಯಾಗ್ರಹಣ, ನಾಗೇಂದ್ರ ಅರಸ್ ನಿರ್ದೇಶನವಿದೆ. ನಿಮಗೂ ಮೇ-1ರ  ರೋಮಾಂಚಕತೆಯ ಪರಿಚಯ  ಆಗಬೇಕೇ..?, ಆಗಸ್ಟ್ 24ರ ತನಕ ಕಾಯಲೇಬೇಕು..!

Tags