ಸುದ್ದಿಗಳು

ಏಕಕಾಲಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸುತ್ತಿರುವ ‘ಕೃಷ್ಣಲೀಲಾ’ ಮಯೂರಿ

2019 ಮಯೂರಿ ಪಾಲಿಗೆ ಚಿನ್ನದ ವರ್ಷ

ಬೆಂಗಳೂರು.ಮಾ.15: ಶಶಾಂಕ್ ನಿರ್ದೇಶನದ ‘ಕೃಷ್ಣಲೀಲಾ’ ಚಿತ್ರದ ಮೂಲಕ ಮಯೂರಿ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆನಂತರ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಇನ್ನು 2019 ಅವರ ಪಾಲಿಗೆ ಅವರ ಪಾಲಿಗೆ ಚಿನ್ನದ ವರ್ಷವೆಂದು ಹೇಳಬಹುದು. ಏಕೆಂದರೆ ಏನಿಲ್ಲವೆಂದರೂ ಅವರು ಐದಾರು ಚಿತ್ರಮಂದಿರಗಳಲ್ಲಿ ಬ್ಯುಸಿಯಿದ್ದಾರೆ.

ಹೌದು, ಮಯೂರಿ ಈ ವರ್ಷ ಐದಾರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈ ವರ್ಷಪೂರ್ತಿ ಅವರು ಚಿತ್ರಮಂದಿರದಲ್ಲಿಯೇ ಇರುತ್ತಾರೆ ಎಂದು ಹೇಳಬಹುದು. ಈ ವರ್ಷ ಅವರು ನಟಿಸುತ್ತಿರುವ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಚಿತ್ರವೂ ಇದೆ ಎಂಬುದು ವಿಶೇಷ. ಹೀಗಾಗಿ ನಗುಮುಖ ಮತ್ತು ನಟನೆಯ ಮೂಲಕ ಗಮನ ಸೆಳೆಯುತ್ತಿರುವ ಇವರು, ಬಹುಬೇಡಿಕೆಯ ಕನ್ನಡದ ನಟಿಯಾಗಿದ್ದಾರೆ.

ಸದ್ಯ ಮಯೂರಿ ಶಿವಣ್ಣನೊಂದಿಗೆ ‘ರುಸ್ತುಂ’ ಹಾಗೂ ‘ಪೊಗರು’ ಚಿತ್ರದಲ್ಲಿ ಚಿತ್ರದಲ್ಲಿ ಧ್ರುವ ಸರ್ಜಾರಿಗೆ ಸಹೋದರಿಯಾಗಿ ನಟಿಸುತ್ತಿದ್ದಾರೆ. ಹಾಗೆಯೇ ‘ಮೌನಂ’, ‘ನನ್ನ ಪ್ರಕಾರ’, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಅನಾಧ್ಯಂತ’ ಚಿತ್ರಗಳೊಂದಿಗೆ ಇನ್ನೂ ಹೆಸರಿಡದ ಚಿತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

“ಹೌದು, ಈ ವರ್ಷ ನನಗೆ ಸಿಕ್ಕಾಪಟ್ಟೆ ಅವಕಾಶಗಳು ಅರಸಿ ಬರುತ್ತಿವೆ. ಹೀಗಾಗಿ ಪಾತ್ರ ಮತ್ತು ಕಥೆಯತ್ತ ಗಮನ ಹರಿಸಿ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಇನ್ನು ಈಗ ನಟಿಸುತ್ತಿರುವ ಬಹುತೇಕ ಸಿನಿಮಾಗಳಲ್ಲಿ ನಾನು ಹೊಸ ಬಗೆಯ ಪಾತ್ರ ಮಾಡುತ್ತಿದ್ದೇನೆ. ಈ ಕುರಿತು ನನಗೆ ಹೆಮ್ಮೆಯಿದೆ. ಈಗೀಗ ನನಗೆ ಇಷ್ಟವಾಗುವಂಥ ಪಾತ್ರಗಳೇ ಸಿಗುತ್ತಿವೆ. ಆದ್ದರಿಂದಲೇ ಈ ವರ್ಷ ನನಗೆ ಲಕ್ಕಿ ಯಿಯರ್. ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯ ಸಿನಿಮಾಗಳ ಆಫರ್ ಕೂಡ ಬರುತ್ತಿವೆ. ಸೀರಿಯಲ್ ಮಾಡಲು ಕರೆಯುತ್ತಿದ್ದಾರೆ” ಎನ್ನುತ್ತಾರೆ ಮಯೂರಿ.

ಚೇರ್ ಬಲಿಯಾದ ಶಿಲ್ಪಾ ಶೆಟ್ಟಿ ಮಗ ವಿಯಾನ್…!

#mayuri, #busyin2019, #balkaninews #filmnews, #pogaru, #kannadasuddigalu

Tags