ಸುದ್ದಿಗಳು

ರಘು ದೀಕ್ಷಿತ್ ವಿರುದ್ಧ ಲೈಂಗಿಕ ಆರೋಪ: ಪತ್ನಿ ಮಯೂರಿ ಪ್ರತಿಕ್ರಿಯೆ ಏನು?

ಖ್ಯಾತ ನೃತ್ಯ ನಿರ್ದೇಶಕಿ ಮಯೂರಿ ಉಪಾಧ್ಯ

ಬೆಂಗಳೂರು, ಅ.11: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ #ಮಿಟೂ ಅಭಿಯಾನ ಸ್ಯಾಂಡಲ್‍ವುಡ್‍ ಗೂ ಎಂಟ್ರಿ ಕೊಟ್ಟಿದ್ದು, ಇದಕ್ಕೆ ಗಾಯಕ ರಘು ದೀಕ್ಷಿತ್ ಮೊದಲ ಬಲಿಯಾಗಿದ್ದಾರೆ. ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ರಘು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಈ ಕುರಿತು ರಘು ಪತ್ನಿ ಮಯೂರಿ ಉಪಾಧ್ಯ ಪ್ರತಿಕ್ರಿಯಿಸಿದ್ದಾರೆ.

ಘಟನೆ ಕುರಿತು ಟ್ವೀಟರ್‍ ನಲ್ಲಿ ಹೇಳಿಕೆ ನೀಡಿರುವ ಮಯೂರಿ, ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಮುಕ್ತವಾಗಿ ಅನ್ಯಾಯ ವಿರುದ್ಧ ಹೋರಾಡಬೇಕು. ಅಸಭ್ಯವಾಗಿ, ಅನುಚಿತವಾಗಿ ನಡೆದುಕೊಂಡವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.

ಲೈಂಗಿಕ ಕಿರುಕುಳ ವಿಚಾರವಾಗಿ ಸ್ಪಷ್ಟ ನಿಲುವ ಹೊಂದಿರುವ ಮಯೂರಿ

ಲೈಂಗಿಕ ಕಿರುಕುಳಕ್ಕೊಳಗಾಗಿರುವ ಮಹಿಳೆಯರಿಗೆ ನನ್ನ ಬೆಂಬಲವಿದೆ. ಲೈಂಗಿಕ ದೌರ್ಜನ್ಯವೆಸದವರಿಗೆ ಶಿಕ್ಷೆಯಾಗಬೇಕು. ಈ ಮೂಲಕ ಬೇರೆ ಪುರುಷರಿಗೆ ಇದು ಪಾಠವಾಗಬೇಕು. ಈ ವಿಚಾರದಲ್ಲಿ ನಾನು ದೃಢವಾಗಿದ್ದೇನೆ. ಲೈಂಗಿಕ ಕಿರುಕುಳ ವಿಷಯದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ವಿಚ್ಛೇಧನ ಕುರಿತು ಪ್ರತಿಕ್ರಿಯಿಸಿರುವ ಮಯೂರಿ, ಇಲ್ಲಿ ನನ್ನ ವಿಚ್ಛೇಧನ ವಿಚಾರ ಮುಖ್ಯವಲ್ಲ. ನಾನು ಪತ್ನಿಯಾಗುವ ಮುನ್ನ ಮಹಿಳೆ. ಸೆಲೆಬ್ರಿಟಿಯಾಗಲೀ, ಸಾಮಾನ್ಯ ಮಹಿಳೆಯಾಗಲೀ ಎಲ್ಲರಿಗೂ ತಮ್ಮದೇ ಆದ ಗೌರವ ಇರುತ್ತದೆ. ಎಲ್ಲರಿಗೂ ತಮ್ಮ ಗೌರವ ಮುಖ್ಯವಾಗಿರುತ್ತದೆ.

Tags