ಸುದ್ದಿಗಳು

ಮೆಚ್ಚುಗೆಯ ಮಾತುಗಳಿಂದಲೇ ಅಪಹಾಸ್ಯ ಮಾಡಿದ ನಟ ಚಿರಂಜೀವಿ

ಹೈದ್ರಾಬಾದ್, ಜ.14: ‘ವಿನಯ ವಿಧೇಯ ರಾಮ’ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೆಘಾಸ್ಟಾರ್ ಚಿರಂಜೀವಿ, ಮಗ ರಾಮ್ ಚರಣ್ ಹಾಗೂ ಚಿತ್ರದ ನಿರ್ದೇಶಕ ಬೋಯಪತಿ ಶ್ರೀನು ಅವರನ್ನು ಹೊಗಳಿದ್ದೆ ಹೊಗಳಿದ್ದು.  ಅಲ್ಲಾಲ್ಲಾ ಹೊಗಳಿದ್ದು ಮಾತ್ರವಲ್ಲ ಆಕಾಶದಲ್ಲೇ ಹಾರಿಸಿದರು. ಅವರ ಹೊಗಳಿಕೆ, ಚಿತ್ರದ ಬಗ್ಗೆ ಕೊಂಡಿದ್ದು ನೋಡಿದ ಅದೆಷ್ಟೋ ಮಂದಿ ವ್ಹಾ ಚಿತ್ರ ಉತ್ತಮವಾಗಿ ಮೂಡಿಬಂದಿರಬೇಕು.

ಚಿತ್ರವನ್ನು ನೋಡಲೇಬೇಕು ಎಂದು ಕಾತರದಿಂದ ಕಾಯುತ್ತಾ ಕುಳಿತಿದ್ದರು. ರಾಮ್ ಚರಣ್, ಅತ್ಯುತ್ತಮವಾಗಿ ಡೈಲಾಗ್ ಡೆಲಿವರಿ ಮಾಡಿದ್ದಾರೆ, ಬೋಯಪತಿ ಅವರ ಪ್ರತಿಭೆ ಅಂದರೆ ಅದಕ್ಕೆ ಪದಗಳೇ ಇಲ್ಲ. ರಾಮ್ ಚರಣ್ ರ ಕೈಯಲ್ಲಿ ಅಂತಹ ನಟನೆಯನ್ನು ಹೊರತೆಗೆದಿದ್ದಾರೆ ಎಂದೆಲ್ಲಾ ಕೊಂಡಾಡಿದ್ದರು.ಹಾಗಾದರೆ ಅಂದು ಚಿರಂಜೀವಿ ಹೇಳಿದ ಮಾತಿನ ಅರ್ಥವೇನು..?

ವಿವಿಆರ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಚಿರಂಜೀವಿ ಅವರು ಚಿತ್ರದ ಬಗ್ಗೆ ಹೇಳಿದ ಮಾತು, ನಿರ್ದೇಶಕರ ಬಗ್ಗೆ ಹೊಗಳಿದ್ದು ನೋಡಿದ ಪ್ರೇಕ್ಷಕ, ಚಿತ್ರ ನೋಡಿದ ಬಳಿಕ ನಿರ್ದೇಶಕರಿಗೆ ಬಾಯಿಗೆ ಬಂದಂತೆ ತೆಗಳುತ್ತಿದ್ದಾರೆ. ಅರೆ ಚಿರಂಜೀವಿ ಅವರು ಅವತ್ತು ಅಷ್ಟೊಂದು ಹೊಗಳಿದ್ದು ಹಾಗಾದರೆ ಯಾಕೆ ಎಂಬ ಪ್ರಶ್ನೆಯೂ ಇದೀಗ ಎಲ್ಲರನ್ನೂ ಕಾಡುತ್ತಿದೆ. ಚಿರಂಜೀವಿ ಹೇಳಿದ ಹೊಗಳಿದ ರೀತಿಗಿಂತ ಚಿತ್ರ ಉಲ್ಟಾವಾಗಿದೆ.

ಚಿತ್ರದಲ್ಲಿನ ಗಿಮಿಕ್ ಗಳಿಂದಲೇ ನಿರ್ದೇಶಕರು ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಅಂದು ಚಿತ್ರ ನೋಡಿದ ಚಿರಂಜೀವಿ ಹೊಗಳಿಕೆಯಿಂದಲೇ ನಿರ್ದೇಶಕರನ್ನು ತೆಗಳಿದರೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಅವರ ವಿಡಂಭನೆಯ ಹಿಂದೆ ಅಪಹಾಸ್ಯ ಅಡಗಿತ್ತೆ. ಒಬ್ಬ ಮೆಘಾಸ್ಟಾರ್ ಚಿತ್ರದಲ್ಲಿನ ಕೆಲವೊಂದು ಸತ್ಯಕ್ಕೆ ದೂರವಾದ ವಿಚಾರವನ್ನು ಹೇಳಲು ಅಸಾಧ್ಯ. ಅದೇನೆ ಇರಲಿ, ‘ರಂಗಸ್ಥಳಂ’ ಚಿತ್ರದ ಒಂದೇ ಒಂದು ದೃಶ್ಯದಷ್ಟು ಈ ಚಿತ್ರದ ಯಾವ ದೃಶ್ಯವೂ ಪ್ರೇಕ್ಷಕನಿಗೆ ಇಷ್ಟವಾಗಿಲ್ಲ ಎನ್ನಲಾಗುತ್ತಿದೆ.#tollywood #megastarchiranjeevi #vinayavidheyaramaprereleaseevent #balkaninews

Tags