ಸುದ್ದಿಗಳು

ಮೇಘನಾ ಮದುವೆಗೆ ಸ್ಪೆಷಲ್ ಗಿಫ್ಟ್!

ಮೇಘನಾ ಹಾಗೂ ಚಿರು ಮದುವೆ ಸುದ್ದಿ ಇತ್ತೀಚೆಗೆ ಬಾರಿ ಸದ್ದನ್ನ ಮಾಡ್ತಿದೆ. ಒಂದು ವಾರಗಳ ಕಾಲ ನಡೆಯುವ ಈ ಮದುವೆ ಬಗ್ಗೆ ಸಾಕಷ್ಟು ಮಂದಿ ಕುತೂಹಲದಿಂದ ಕಾಯ್ತಾ ಇದ್ದಾರೆ. ಯಾಕಂದ್ರೆ ಎರಡು ಬಗೆಯ ರೀತಿಯಲ್ಲಿ ಮದುವೆಯಾಗ್ತಾರೆ ಅನ್ನೋದು ಬಾರಿ ಚರ್ಚೆಗೆ ಗ್ರಾಸವಾಗಿದೆ.

ಇದೀಗ ಮದುವೆಗೆ ಮೇಘನಾಗೆ ಸ್ಪೆಷಲ್ ಗಿಫ್ಟ್ ಒಂದು ಬರುತ್ತಾ ಇದೆ. ಮದುವೆ ಜೀವನದಲ್ಲಿ ಅತ್ಯಂತ ಸುಂದರವಾದ ಕ್ಷಣಗಳನ್ನ ಕಟ್ಟಿಕೊಡುವ ಸಂದರ್ಭ. ಮದುವೆ ಸಮಾರಂಭ ಅಂದಾಗ ಸಾಕಷ್ಟು ಉಡುಗೊರೆಗಳು ಸಿಗುತ್ತಲೇ ಇರುತ್ತವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮದುವೆ ಸಂಭ್ರಮ ಕಳೆಗಟ್ಟಿದೆ. ಆದ್ರೆ ಮೇಘನಾ-ಚಿರು ಮದುವೆಗೆ ಸ್ಪೆಷಲ್ ಗಿಫ್ಟ್ ಏನಪ್ಪಾ ಅಂದ್ರೆ ಮೇಘನಾ ರಾಜ್ ಮದುವೆಗೆ ಸಿನಿಮಾತಂಡದಿಂದ ವಿಶೇಷ ಉಡುಗೊರೆಯನ್ನು ನೀಡಲು ಚಿತ್ರದ ನಿರ್ದೇಶಕರು ತಯಾರು ಮಾಡಿದ್ದಾರೆ.

ಹೌದು ನಟಿ ಮೇಘನಾ ರಾಜ್ ಅಭಿನಯದ ಇರುವುದೆಲ್ಲವ ಬಿಟ್ಟು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಮೇಘನಾ ಮತ್ತು ಚಿರು ಮೇ ೨ ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂದೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಲಿದೆ. ಇರುವುದೆಲ್ಲವ ಬಿಟ್ಟು ಕಾಂತ ಕನ್ನಲಿ ನಿರ್ದೇಶನದ ಸಿನಿಮಾ ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ಅಭಿನಯಿಸಿದ್ದು ತಿಲಕ್, ಅಚ್ಚುತ್ ಕುಮಾರ್ ಹಾಗೂ ಶ್ರೀ ಮಹಾದೇವ್ ಕೂಡ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ಬಿಲ್ವಾ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ ದಾವಣಗೆರೆ ಚಿತ್ರವನ್ನ ನಿರ್ಮಾಣ ಮಾಡಿದ್ದು. ಇರುವುದೆಲ್ಲವ ಬಿಟ್ಟು ಸಿನಿಮಾದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದಾರೆ ನಿರ್ದೇಶಕರು. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು ಸಿನಿಮಾ ಟೈಟಲ್ ಹಾಗೂ ಸಬ್ ಟೈಟಲ್ ನಿಂದ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕೌತುಕ ಮೂಡಿಸಿದೆ.

ಸದ್ಯ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಇರುವುದೆಲ್ಲವ ವಿಟ್ಟು ಸಿನಿಮಾ ಟೀಂ ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿದೆ. ಮೇಘನಾ ಮದುವೆಗೆ ಟ್ರೇಲರ್ ಗಿಫ್ಟ್ ನೀಡಲು ಮುಂದಾಗಿದ್ದು ಸದ್ಯ ಅದೇ ಕೆಲಸದಲ್ಲಿ ನಿರತವಾಗಿದೆ.

ಒಟ್ನಲ್ಲಿ ಯಾವುದೇ ಗಿಫ್ಟ್ ಆದ್ರು ಅಷ್ಟೆ ತಮ್ಮ ಮದುವೆ ದಿನ ಸಿಗುತ್ತೆ ಅಂದ್ರೆ ಅದರ ವಿಶೇಷತೆನೆ ಬೇರೆ. ಅದರಲ್ಲೂ ತಾವು ನಟಿಸಿದ ಸಿನಿಮಾ ಅಂದ್ರೆ ಪ್ರೀತಿ ಜಾಸ್ತಿ ಇರುತ್ತೆ. ಇದಿಘ ಈ ಗಿಫ್ಟ್ಗೆ ಮೇಘನಾ ಫುಲ್ ಖುಷ್ ಆಗೋದ್ರಲ್ಲಿ ಎರಡು ಮಾತಿಲ್ಲ.

 

Tags