ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಗಾಯಕ ಎಲ್.ಎನ್ ಶಾಸ್ತ್ರಿ ಹಾಡಿದ ಕೊನೆಯ ಹಾಡು ರಿಲೀಸ್

ಚಂದನವನದ ಶ್ರೇಷ್ಟ ಗಾಯಕರಲ್ಲಿ ಒಬ್ಬರಾಗಿರುವ ಎಲ್ ಎನ್ ಶಾಸ್ತ್ರಿ ಮ್ಯೂಸಿಕ್ ಕಂಪೋಸ್ ಮಾಡಿ ಹಾಡಿರುವ ಕೊನೆಯ ಹಾಡು ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಹಾಡಿನ ರೆಕಾರ್ಡಿಂಗ್ ಮಾಡಿರುವ ಮೇಕಿಂಗ್ ವಿಡಿಯೋ ನೋಡಿದರೆ ನಿಜಕ್ಕೂ ಮೈ ಜುಮ್ ಅನಿಸುತ್ತದೆ.

ಅಂದ ಹಾಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಎಲ್ ಎನ್ ಶಾಸ್ತ್ರಿ 2017 ಆಗಸ್ಟ್ 30 ರಂದು ನಿಧನ ಹೊಂದಿದರು. ಅವರು ವಿಧಿವಶರಾಗುವ ಕೇವಲ ಒಂದು ತಿಂಗಳ ಮೊದಲು ‘ಮೇಲೊಬ್ಬ ಮಾಯಾವಿ’ ಚಿತ್ರದ ಒಂದು ಹಾಡನ್ನು ಹಾಡಿದ್ದರು. ಈಗ ಈ ಹಾಡು ಬಿಡುಗಡೆಯಾಗಿದೆ.

”ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ.. ನುಡಿಸಲು ಹೊರಟ ಲೋಕವೆಂಬ ಜೀವ ಜಾಲ..” ಎಂಬ ಸಾಲುಗಳ ಈ ಹಾಡನ್ನು ಚಂದ್ರಚೂಡ್ ಚಕ್ರವರ್ತಿ ಬರೆದಿದ್ದಾರೆ. ಇನ್ನು ಈ ಹಾಡಿನ ದೃಶ್ಯವನ್ನೊಮ್ಮೆ ನೋಡಿದರೆ ಎಂಥವರನ್ನೂ ಸಹ ಒಂದು ಕ್ಷಣ ಕಾಡದೇ ಬಿಡದು, ಸದ್ಯದಲ್ಲೇ ವಿಡಿಯೋ ಕೂಡ ನಿಮ್ಮ ಮುಂದೆ ಬರಲಿದೆ.

ಎಲ್ ಎನ್ ಶಾಸ್ತ್ರಿ ಎಂದೇ ಚಿರಪರಿಚಿತರಾಗಿರುವ ಇವರ ಸಂಪೂರ್ಣ ಹೆಸರು ಲಕ್ಷ್ಮಿ ನರಸಿಂಹ ಶಾಸ್ತ್ರಿ. ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಕ್ರಿಯಾಶೀಲರಾಗಿದ್ದ ಶಾಸ್ತ್ರಿ 1996ರ ‘ಅಜಗಜಾಂತರ’ ಚಿತ್ರದ ಮೂಲಕ ಹಾಡಲು ಆರಂಭಿಸಿದ ಅವರ ಕಂಠಸಿರಿಯಲ್ಲಿ 3000ಕ್ಕೂ ಹೆಚ್ಚು ಹಾಡುಗಳು ಹೊರ ಹೊಮ್ಮಿವೆ. ಇನ್ನು ಚಿತ್ರದಲ್ಲಿ ‘ಸಂಚಾರಿ’ ವಿಜಯ್, ಅನನ್ಯ ಶಾಸ್ತ್ರಿ, ಚಂದ್ರಚೂಡ್ ಚಕ್ರವರ್ತಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಅಪ್ಪು ಅಭಿಮಾನಿಯ ಆಕ್ರೋಶಕ್ಕೆ ಶರಣಾದ ‘ಯುವರತ್ನ’ ನಿರ್ದೇಶಕ

#melobbamayavi #melobbamayavimovie #LNshastri #LNshastriSong  #sandalwoodmovies  ‍#kannadasuddigalu

Tags