ಸುದ್ದಿಗಳು

‘ಮೇಲೊಬ್ಬ ಮಾಯಾವಿ’ ಚಿತ್ರದ ಆಡಿಯೋ ರಿಲೀಸ್ ಮಾಡಲಿರುವ ಆ ಮೂವರು ಮಾಯಾವಿಗಳು ಯಾರು…???

ಇದೇ ತಿಂಗಳ 19 ರಂದು ‘ಮೇಲೊಬ್ಬ ಮಾಯಾವಿ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ

ಬೆಂಗಳೂರು.ಜ.16:

ಬಿ. ನವೀನ್ ಕೃಷ್ಣ ನಿರ್ದೇಶನ ಮಾಡುತ್ತಿರುವ ‘ಮೇಲೊಬ್ಬ ಮಾಯಾವಿ’ ಸಿನಿಮಾ ಒಂದಲ್ಲಾ ಒಂದು ಕಾರಣಗಳಿಂದ ಸುದ್ದಿ ಮಾಡುತ್ತಲೇ ಇದೆ. ಈಗ ಈ ಚಿತ್ರದ ಧ್ವನಿಸುರುಳಿ ಇದೇ ತಿಂಗಳ 19 ರಂದು ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ ಈ ಧ್ವನಿಸುರುಳಿಯನ್ನು ಕನ್ನಡ ಚಿತ್ರರಂಗವನ್ನು ಯುಗ ಯುಗಗಳಿಂದ ಕಾಪಾಡುತ್ತಿರುವವರಲ್ಲಿ ಮೂವರು ಮಾಯಾವಿಗಳು ರಿಲೀಸ್ ಮಾಡುತ್ತಿದ್ದಾರೆ.

ಜ. 19 ರಂದು ಕಾರ್ಯಕ್ರಮ

‘ಮೇಲೊಬ್ಬ ಮಾಯಾವಿ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಚಿತ್ರತಂಡದವರು ಇದೇ ತಿಂಗಳ 19 ರಂದು ಸಂಜೆ 7 ಘಂಟೆಗೆ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏರ್ಪಡಿಸಿದ್ದಾರೆ. ಇದರೊಂದಿಗೆ ಚಿತ್ರದ ಮೋಷನ್ ಪೋಸ್ಟರ್ ಕೂಡಾ ರಿಲೀಸ್ ಆಗುತ್ತಿದ್ದು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ.

ಚಿತ್ರದ ಬಗ್ಗೆ

ಇದೊಂದು ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಅನನ್ಯಾ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತರ್ ,ಬೆನಕ ನಂಜಪ್ಪ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಮಂಗಳೂರಿನಲ್ಲಿ ನಡೆದ ಕೆಲವು ನೈಜ ಘಟನೆಗಳಿಂದ ಈ ಚಿತ್ರ ಸ್ಪೂರ್ತಿ ಪಡೆದಿದೆ ಎಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ನಾಯಕ ಯಕ್ಷಗಾನದ ಕುರಿತು ಒಲವನ್ನು ಹೊಂದಿರುತ್ತಾನೆ. ಆದರೆ ಹುಟ್ಟಿನಿಂದಲೇ ಅವನಿಗೆ ಬಂದ ನ್ಯೂನತೆಯಿಂದಾಗಿ ಅವನನ್ನು ಯಕ್ಷಗಾನ ಮೇಳಕ್ಕೆ ಸೇರಿಸಿಕೊಳ್ಳುವುದಿಲ್ಲ. ಆದರೆ ಮುಂದೇ ಅದೇ ಯಕ್ಷಗಾನದ ಮೂಲಕ ನಾಯಕ ಏನು ಮಾಡುತ್ತಾನೆ ಎನ್ನುವುದನ್ನು ಇಲ್ಲಿ ನೋಡಬಹುದು.

#melobbamayavi, #balkaninews #sancharivijay, #filmnews ,#kannadasuddigalu

Tags