ಸುದ್ದಿಗಳು

‘ಮಿಟೂ’ ಬಗ್ಗೆ ಕಾಮೆಂಟ್ ಮಾಡಿದ ಪಮೇಲಾ ಆಂಡರ್ ಸನ್

ಮಿ ಟೂ ಸ್ತ್ರೀ ಸಮಾನತಾವಾದಕ್ಕೆ ತುಸು ಹೆಚ್ಚು ಅನಿಸುತ್ತದೆ ಎಂದ ಅಮೆರಿಕನ್ ಕೆನಡಿಯನ್ ನಟಿ

ಅಮೆರಿಕಾದ ಕೆನಡಿಯನ್ ನಟಿ ಪಮೇಲಾ ಆಂಡರ್ಸನ್ ಅವರು ಇತ್ತೀಚೆಗೆ ನಡೆಯುತ್ತಿರುವ # ಮಿ ಟೂ ಆಂದೋಲನದ ಬಗ್ಗೆ ಮಾತನಾಡಿ, ಇಂದೊಂದು ಸ್ತ್ರೀ ಸಮಾನತಾವಾದಿಯಾಗಿದ್ದು, “ಸ್ವಲ್ಪ ಹೆಚ್ಚು” ಎಂದು ಹೇಳಿದ್ದಾರೆ.

ವಿಷಯದ ಗಂಭೀರತೆಯನ್ನು ಅಂಗೀಕರಿಸಿದ ಅವರು, ಮಾಜಿ ‘ಬೇವಾಚ್’ ಸ್ಟಾರ್ ಇದೊಂದು ಸ್ತ್ರೀ ವಾದದ ಮೂರನೇ ತರಂಗವೆಂದು ಬ್ರ್ಯಾಂಡ್ ಮಾಡಿದ್ದಾರೆ. ಅದನ್ನು “ಪುರುಷರನ್ನು ಪಾರ್ಶ್ವವಾಯು” ಎಂದು ಕರೆಯುವ ಚಳವಳಿ ಎಂದು ಜರಿದಿದ್ದಾರೆ.

Image result for r Pamela Anderson.j

ಮಿಟೂ’ ಆಂದೋಲನ

“ಸ್ತ್ರೀ ವಾದದ ಮೂಲಕವೇ ತುಂಬಾ ದೂರ ಹೋಗಬಹುದು. ನಾನು ಎಂದಿಗೂ ಸ್ತ್ರೀ ಸಮಾನತಾವಾದಿಯಾಗಿದ್ದೇನೆ. ಆದರೆ ಸ್ತ್ರೀ ವಾದದ ಈ ಮೂರನೇ ತರಂಗವು ಒಂದೂ ರೀತಿ ಬೇಸರವನ್ನುಂಟು ಮಾಡುತ್ತದೆ ಎಂಬುದು ನನ್ನ ಭಾವನೆ. ನಾನು ‘ಮಿಟೂ’ ಚಳವಳಿಯನ್ನು ಪುರುಷರನ್ನು ಪಾರ್ಶ್ವವಾಯು ಎಂದು ಕರೆಯುವುದಾಗಿದೆ ಎಂದಿದ್ದಾರೆ. ಈ ‘ಮಿಟೂ’ ಆಂದೋಲನ ನನಗೆ ತುರು ಹೆಚ್ಚು ಎಂದೆನಿಸುತ್ತದೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಹೀಗೆ ಹೇಳಿದ್ದಕ್ಕಾಗಿ ನನ್ನನ್ನು ಬಹುಶಃ ಕೊಲ್ಲಬಹುದು”. 60 ಮಿನಿಟ್ಸ್ ಆಸ್ಟ್ರೇಲಿಯಾಕ್ಕೆ ಆಂಡರ್ಸನ್ ನೀಡಿದ ಹೇಳಿಕೆಯನ್ನು ಈ! ಆನ್ ಲೈನ್ ಉಲ್ಲೇಖಿಸಿದೆ.

ಚಳವಳಿ ವಿರೋಧಿ

ಆಂಡರ್ಸನ್ ಅವರ ಈ ಹೇಳಿಕೆಯು ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ, ಅವರನ್ನು ‘ಮಿಟೂ’ ಚಳವಳಿ ವಿರೋಧಿ ಎಂದು ಬ್ರಾಂಡ್ ಮಾಡಲಾಗಿದೆ.

‘ಮಿಟೂ’ ಆಂದೋಲನ ಜಗತ್ತಿನಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದ್ದು, ಇದಕ್ಕಾಗಿ ಸಾಕಷ್ಟು ಜನರು ತಲೆ ತಂಡ ತೆರಬೇಕಾಯಿತು.

 

Tags