ಸುದ್ದಿಗಳು

ಬೇರೆಯಾದ ಮೈಕೆಲ್ ಫಿಶ್ಮನ್ ಮತ್ತು ಜೆನ್ನಿಫರ್ ಬ್ರಿನರ್

ಬೆಂಗಳೂರು, ಜ.03: ನಟ ಮೈಕೆಲ್ ಫಿಶ್ಮನ್ ಮತ್ತು ಅವರ ಪತ್ನಿ ಜೆನ್ನಿಫರ್ ಬ್ರಿನರ್ ಸುಮಾರು 20 ವರ್ಷಗಳಿಂದ ಜೊತೆಯಾಗಿದ್ದರು. ಆದರೆ ಗುರುವಾರ ಫಿಶ್ಮನ್‍ ಅವರು ಕಾನೂನಿನ ರೀತಿಯಲ್ಲಿ ಬೇರೆಯಾಗಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದ್ದಾರೆ.

20 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳುತ್ತಿರುವ ಮೈಕೆಲ್ ಫಿಶ್ಮನ್‍

ದೀರ್ಘಕಾಲೀನ ಸರಣಿ “ರೋಸೆನ್ನೆ” ಮತ್ತು ಅದರ ಸ್ಪಿನ್-ಆಫ್ “ದಿ ಕಾನರ್ಸ್” ನಲ್ಲಿ ಡಿಜೆ ಕಾನರ್ ಪಾತ್ರದಲ್ಲಿ ಫಿಶ್ಮನ್ ಕಾಣಿಸಿಕೊಳ್ಳುವ ಮೂಲಕ ಪ್ರಸಿದ್ಧರಾಗಿದ್ದಾರೆ.

ಟಿಎಂಜಡ್ ಪ್ರಕಾರ, 37 ವರ್ಷದ ನಟ, ಬ್ರಿನರ್ ಜೊತೆ ಬೇರ್ಪಡಿಸುವ ನಿರ್ಧಾರ ಸೌಹಾರ್ದವಾಗಿದೆ ಎಂದಿದ್ದಾರೆ. 1999ರಲ್ಲಿ ಮದುವೆಯಾದ ಇಬ್ಬರು, ಜೂನ್ 2017ರಿಂದಲೇ ಬೇರ್ಪಡುವ ಪ್ರಕ್ರಿಯೆಯಲ್ಲಿದ್ದಾರೆ. ಆದರೆ “ರೋಸೆನ್ನೆ” ಸರಣಿಯ ನಿರ್ಮಾಣದಲ್ಲಿ ನಟ ನಿರತರಾಗಿದ್ದರಿಂದ ವಿಳಂಬವಾಯಿತು.

Tags