ಸುದ್ದಿಗಳು

ಹಾರರ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸಪಟ್ಟ ಮಿಲನಾ..!!!

ಮಹೇಶ್ ನಿರ್ದೇಶನದ ‘ಓ’ ಸಿನಿಮಾ

ಬೆಂಗಳೂರು.ಮಾ.21: ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಹಾಗೂ ‘ಬೃಂದಾವನ’ ಚಿತ್ರಗಳ ಮೂಲಕ ಗುರುತಿಸಿಕೊಂಡ ನಟಿ ಮಿಲನಾ ನಾಗರಾಜ್. ಈ ಚಿತ್ರಗಳ ಬಳಿಕ ಅವರು ‘ಚಾರ್ಲಿ’, ‘ಜಾನಿ’ ಚಿತ್ರಗಳಲ್ಲಿ ನಟಿಸಿದ್ದು, ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಮಿಲನಾ ನಟಿಸುತ್ತಿರುವ ‘ಲವ್ ಮೊಕ್ವೆಲ್’, ಹಾಗೂ ‘ಓ’ ಚಿತ್ರಗಳು ವಿಭಿನ್ನ ಕಥಾಹಂದರವನ್ನು ಒಳಗೊಂಡಿವೆ. ಒಂದು ಸಿನಿಮಾದಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡ ಅನಾಥೆಯ ಪಾತ್ರವನ್ನು ಮಾಡುತ್ತಿದ್ದರೆ, ಇನ್ನೊಂದು ಹಾರರ್ ಜೋನರ್ ನ ಸಿನಿಮಾವಾಗಿದೆ.

Image result for milana nagaraj

ಮಹೇಶ್ ನಿರ್ದೇಶನದ ‘ಓ’ ಚಿತ್ರವು ಈಗಾಗಲೇ ತನ್ನ ವಿಭಿನ್ನ ಶೀರ್ಷಿಕೆಯ ಮೂಲಕವೇ ಎಲ್ಲರ ಗಮನ ಸೆಳೆದಿದೆ. ಇದೊಂದು ಇಬ್ಬರು ಸಹೋದರಿಯರ ಸುತ್ತ ಹೆಣೆದ ಕಥೆಯಾಗಿದ್ದು, ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಹಾಗೂ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿದ್ದು ಮೂಲಿಮನಿ ನಾಯಕರಾಗಿದ್ದಾರೆ.

ವಿಶೇಷವೆಂದರೆ, ಇದುವರೆಗೂ ಬರೀ ಗ್ಲಾಮರಸ್, ಕೌಟುಂಬಿಕ ಚಿತ್ರಗಳಷ್ಟೇ ಮಿಂಚಿದ್ದ ಮಿಲನಾ ಇದೇ ಮೊದಲ ಬಾರಿಗೆ ಹಾರರ್ ಕಥಾನಕವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

“ಇದು ನನ್ನ ಮೊದಲ ಹಾರರ್ ಚಿತ್ರವಾಗಿದ್ದು, ಚಿತ್ರದ ಐವತ್ತು ಪ್ರತಿಶತ ಶೂಟಿಂಗ್ ಮುಗಿದಿದೆ. ಇನ್ನು ಕೇವಲ 20 ದಿನಗಳ ಶೂಟಿಂಗ್ ಡೇಟ್ಸ್ ಮಾತ್ರ ಬಾಕಿ ಇದೆ. ನಾನು ಬಯಸುತ್ತಿದ್ದ ಬದಲಾವಣೆ ಈ ಚಿತ್ರದ ಮೂಲಕ ದೊರಕಿದೆ. ಇನ್ನು ಅಮೃತ ಅಯ್ಯಂಗಾರ್ ಇನ್ನೊಂದು ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದದ್ದು, ನಾವಿಬ್ಬರೂ ‘ಲವ್ ಮೊಕ್ವೇಲ್’ ನಲ್ಲಿ ಅಭಿನಯಿಸಿದ್ದೇವೆ’ ಎಂದು ಮಿಲನಾ ಹೇಳುತ್ತಾರೆ.

ಸುನಿಲ್ ಕುಮಾರ್ ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು..?

#milananagaraj, #talkabout, #horrormovie, #balkaninews #kannadasuddigalu, #filmnews, #brundavana

Tags