ಸುದ್ದಿಗಳು

ಯೂ ಟ್ಯೂಬ್ ನಲ್ಲಿ ಮಿಂಚಿನ ಬಳ್ಳಿ.. ಹಾಡಿಂದೇ ಹವಾ..

ಯೂ ಟ್ಯೂಬ್ ನಲ್ಲಿ ಜೋರಾಗಿದೆ ‘ಕಾಣದಂತೆ ಮಾಯವಾದನು’ ವೀಡಿಯೋ ಸಾಂಗ್.

ವಿಕಾಸ್ ಮತ್ತು ಸಿಂಧು ಲೋಕನಾಥ್ ಜತೆಯಾಗಿ ನಟಿಸಿರುವ ‘ಕಾಣದಂತೆ ಮಾಯವಾದನು’ ಸಿನೆಮಾ ಶುರುವಾದಾಗಿನಿಂದ ಸದ್ದು ಮಾಡಿ, ರಿಲೀಸ್ ನಂತ್ರವೂ ಸಹ ಅಷ್ಟೇ ಸುದ್ದಿಯಲ್ಲಿತ್ತು. ಸಿಂಧು ಲೋಕನಾಥ್ ರ ಅತ್ಮದ ಲವ್ವಿ-ಡವ್ವಿ  ಗೆ ಪ್ರೇಕ್ಷಕ ಫಿದಾ ಆಗಿದ್ದ.  ಹಿಂದೆ ಜಯಮ್ಮನ ಮಗ ಸಿನೆಮಾ ನಿರ್ದೇಶಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದು ಭೇಷ್ ಅನ್ನಿಸಿಕೊಂಡಿದ್ದೂ ಆಗಿತ್ತು.

ಈಗ ಮತ್ಯಾಕಪ್ಪಾ ಕಾಣದಂತೆ ಮಾಯವಾದವನ ಧ್ಯಾನ ಶುರುವಾಗಿದೆ ಅನ್ಕೊಂಡ್ರಾ..? ಎಸ್ ಈ ಚಿತ್ರದ ಸೂಪರ್ ವೀಡಿಯೋ ಸಾಂಗ್ ಒಂದು ಯೂ ಟ್ಯೂಬ್ ನಲ್ಲಿ ಫುಲ್ ಹವಾ ಕ್ರಿಯೇಟ್ ಮಾಡ್ತಿದೆ. ಎಸ್ ‘ಮಿಂಚಿನ ಬಳ್ಳಿ’..ಎಂಬ ಜಯಂತ್ ಕಾಯ್ಕಿಣಿಯವರ ಸಾಹಿತ್ಯದ ಗೀತೆ ಸದ್ದು ಮಾಡ್ತಿದೆ. ಹಾಡಿನಲ್ಲಿ ಆತ್ಮವಾಗಿರೋ ನಾಯಕನ ಪ್ರೇಮ ವಿರಹಕ್ಕೆ ಪ್ರೇಕ್ಷಕ ಫಿದಾ ಆಗ್ತಿದ್ದಾನೆ.

ಅಶ್ವಿನ್ ಶರ್ಮಾ, ಸಂಗೀತ ರವೀಂದ್ರನಾಥ್ ಧ್ವನಿಯಾಗಿರೋ ಇಂಪಾದ ಹಾಡಿಗೆ ವಿಜಯ್ ಗುಮ್ಮಿನೇನಿ ಸಂಗೀತ ನಿರ್ದೇಶನ ಮೆರುಗು ನೀಡಿದೆ. ರಾಜ್ ಪತ್ತಿಪಾಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರಕ್ಕೆ ಸೋಮುಸಿಂಗ್ ನಿರ್ಮಾಪಣೆಯ ಜವಾಬ್ದಾರಿ ಹೊತ್ತಿದ್ದರು. ಇನ್ನು ಈಗಾಗಲೇ ರಿಲೀಸ್ ಆಗಿರೋ ಕಾಣದಂತೆ ಮಾಯವಾದನು ಒಳ್ಳೆ ರೆಸ್ಪಾನ್ಸ್ ಸಹ ಪಡೆದುಕೊಂಡಿತ್ತು

#kanadanthemayavadanu #minchinaballi #jayanthkaikini

Tags