ಸುದ್ದಿಗಳು

‘ಮಿ.ನಟ್ವರ್ ಲಾಲ್’ ಸಿನಿಮಾಗೆ ವಿರೋಧ

ಮಿ.ನಟ್ವರ್ ಲಾಲ್ ಸಿನಿಮಾಗೆ ಇದೀಗ ಕವಿತಾ ಲಂಕೇಶ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು, ಜ.12: ‘ಮಿ.ನಟ್ವರ್ ಲಾಲ್ ಎಂಬ ವಿಭಿನ್ನ ಟೈಟಲ್ ಬಳಸಿ ಇದೀಗ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾ ಕಥೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಪಾತ್ರಗಳು ಕೂಡ ಇವೆ ಎಂಬ ವದಂತಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ಇದೀಗ ಈ ಸಿನಿಮಾಗೆ ಹಾಗೂ ಈ ದೃಶ್ಯಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಕವಿತಾ ಲಂಕೇಶ್.

ಚಿತ್ರದಲ್ಲಿದೆಯಾ ಸಾವಿನ ಸನ್ನಿವೇಶ

ಹೌದು, ಈ ಸಿನಿಮಾದಲ್ಲಿ ಗೌರಿ ಲಂಕೇಶ್ ಪಾತ್ರಗಳಿವೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಇದೀಗ ಕವಿತಾ ಲಂಕೇಶ್ ಎಚ್ಚೆತ್ತುಕೊಂಡಿದ್ದಾರೆ. ಅಷ್ಟೇ ಅಲ್ಲ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದಾರೆ. ಗೌರಿ ಲಂಕೇಶ್ ಸಾವಿನ ಪ್ರಕರಣ ಇನ್ನು ಕೋರ್ಟ್ ಹಂತದಲ್ಲಿದೆ. ಈ ಕೇಸ್ ಕಾನೂನು ಹಂತದಲ್ಲಿರುವಾಗಲೇ ಸಿನಿಮಾದಲ್ಲಿ ಸೀನ್‌ ಗಳನ್ನು ಬಳಸುವುದು ಸರಿಯಲ್ಲ ಎಂಬುದನ್ನು ಹೇಳಿದ್ದಾರೆ.

ವಾಣಿಜ್ಯ ಮಂಡಳಿಗೆ ದೂರು

ದೂರಿನಲ್ಲಿ ಉಲ್ಲೇಖಿಸಿದಂತೆ, ‘ಮಿ.ನಟ್ವರ್ ಲಾಲ್’ ಸಿನಿಮಾದಲ್ಲಿ ನನ್ನ ಅಕ್ಕನ ಪಾತ್ರದಲ್ಲಿ ಟಗರು ಸರೋಜ ಖ್ಯಾತಿಯ ತ್ರಿವೇಣಿ ಕಾಣಿಸಿಕೊಂಡಿದ್ದಾರೆ. ಆಕೆಯ ಸಾವಿನ ಸಂದೇಶವನ್ನು ಚಿತ್ರೀಕರಿಸಲಾಗಿದೆಯಂತೆ. ಇದು ಪತ್ರಿಕೆಗಳಲ್ಲಿ ಬಂದಿದೆ. ಹೀಗಾಗಿ ಈ ಸನ್ನಿವೇಶ ಬಳಸದಂತೆ ಹೇಳಬೇಕು ಎಂದು ದೂರು ನೀಡಿದ್ದಾರೆ. ಇನ್ನುಈ ವಿಚಾರವಾಗಿ ನಿರ್ದೇಶಕರು ಮಾತನಾಡಿದ್ದು, ಈ ಸನ್ನಿವೇಶಗಳು ಇಲ್ಲ ಅಂತಾ ಹೇಳಿರುವುದು ವರದಿಯಾಗಿದೆ.

#mrnatwarlalkannadamovie #tagarusaroja #kavithalankesh #gaurilankesh #sandalwood #trivenirao #balkaninews

Tags