ಸುದ್ದಿಗಳು

‘ಮಿಸ್ಸಿಂಗ್ ಬಾಯ್’ನನ್ನು ಮೆಚ್ಚಿಕೊಂಡ ಸೆನ್ಸಾರ್ ಮಂಡಳಿ

‘ಯು’ ಪ್ರಮಾಣ ಪತ್ರ ಪಡೆದುಕೊಂಡ ಸಿನಿಮಾ

ಬೆಂಗಳೂರು.ಫೆ.20

ರಘುರಾಮ್ ನಿರ್ದೇಶನ ‘ಮಿಸ್ಸಿಂಗ್ ಬಾಯ್’ ಚಿತ್ರವು ಸೆನ್ಸಾರ್ ಮುಗಿಸಿದ್ದು, ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ಸದ್ಯದಲ್ಲಿಯೇ ಚಿತ್ರವು ತೆರೆಗೆ ಬರಲಿದೆ.

ಚಿತ್ರದ ಬಗ್ಗೆ

ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ‘ಫಸ್ಟ್ ರಾಂಕ್ ರಾಜು’ ಚಿತ್ರದ ಗುರುನಂದನ್ ನಾಯಕನಟರಾಗಿ ನಟಿಸಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದು, ಕೊಲ್ಲ ಪ್ರವೀಣ, ಕೊಲ್ಲ ಮಹೇಶ್ ಮತ್ತು ಆರ್.ಕೆ ಹೇಮಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಸದ್ಯದಲ್ಲಿಯೇ ರಿಲೀಸ್

ಅಂದ ಹಾಗೆ ಈ ಚಿತ್ರದ ಬಿಡುಗಡೆಯ ಬಗ್ಗೆ ನಿರ್ದೇಶಕ ರಘುರಾಮ್ ನಾಳೆ ಸಂಜೆ ತಿಳಿಸಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಕಳೆದು ಹೋಗಿರುವ ಹುಡುಗನೊಬ್ಬನ ಕರುಣಾಜನಕ ಕಥೆಯನ್ನು ಬಿಡಿಸಿ ಹೇಳಲಿದ್ದಾರೆ ನಿರ್ದೇಶಕರು.

1990 ರಲ್ಲಿ ನಡೆದ ನೈಜ ಘಟನೆಯಾದ ಈ ಚಿತ್ರದಲ್ಲಿ, ಚಿಕ್ಕವಯಸ್ಸಿನಲ್ಲಿ ಕಾಣೆಯಾಗುವ ಹುಡುಗನೊಬ್ಬ ಸುಮಾರು 24 ವರ್ಷಗಳ ನಂತರ ಕಂಡು ಬರುತ್ತಾನೆ. ಇನ್ನೊಂದು ಕಡೆ ಸುಳಿವೇ ಇಲ್ಲದ ಒಂದು ಪ್ರಕರಣವನ್ನು ಪೊಲೀಸರು ಬೆನ್ನತ್ತಿದ ಕಥೆಯನ್ನು ತೋರಿಸಲಾಗಿದೆ.

ಗುರುನಂದನ್ ನಾಯಕರಾಗಿರುವ ಚಿತ್ರಕ್ಕೆ ಮಲಯಾಳಂನ ಹಲವು ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ, ಈ ಚಿತ್ರದ ಮೂಲಕ ಮೊದಲ ಬಾರಿಗೆ ಚಂದನವನಕ್ಕೆ ಪ್ರವೇಶ ಪಡೆದಿದ್ದಾರೆ. ಇನ್ನು ನೈಜ ಘಟನೆಯೊಂದರ ಆಧಾರಿತ ಈ ‘ಮಿಸ್ಸಿಂಗ್ ಬಾಯ್’ ಸಿನಿಮಾದ ಅಡಿ ಶೀರ್ಷಿಕೆ ‘ತಾಯಿ ಮತ್ತು ತಾಯಿನಾಡಿಗೆ’ ಎಂದಿದೆ.

ದಚ್ಚು ಹುಟ್ಟುಹಬ್ಬಕ್ಕೆ ಒಂದೆಡೆ ಸೇರಿದ್ದ ದವಸ, ಧಾನ್ಯ, ಇದೀಗ ಮಠಕ್ಕೆ ರವಾನೆ

#missingboy, #balkaninews #kannadasuddigalu, #gurunandan, #raghuram, #filmnews

Tags