ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಅಮ್ಮ-ಮಗನ ಭಾವನಾತ್ಮಕ ನಡುವೆ ಈ ‘ಮಿಸ್ಸಿಂಗ್ ಬಾಯ್’

ಮನ ಸೆಳೆಯುವ ಸಿನಿಮಾ

ಬೆಂಗಳೂರು.ಮಾ.23: ಗುರುನಂದನ್ ಹಾಗೂ ಅರ್ಚನಾ ನಟಿಸಿರುವ ‘ಮಿಸ್ಸಿಂಗ್ ಬಾಯ್’ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಅದಕ್ಕೀಗ ಉತ್ತರ ಸಿಕ್ಕಿದ್ದು, ಸಿನಿಮಾ ನೋಡುಗರಿಗೆ ಇಷ್ಟವಾಗಿದೆ.

ಅಂದ ಹಾಗೆ ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಅಭಿನಯದ ಮನ ಸೆಳೆಯುತ್ತದೆ. ಇದೊಂದು ತಾಯಿ-ಮಗನ ಭಾವನಾತ್ಮಕ ಕಥಾಹಂದರ ಒಳಗೊಂಡಿದ್ದು, ರಘು ರಾಮ್ ನಿರ್ದೇಶನ ಅಚ್ಚುಕಟ್ಟಾಗಿದೆ.

Image result for missing boy kannada movie

ನಡೆದ ಘಟನೆಗಳಿಗೆ ತಕ್ಕುದಾಗಿಯೇ ವಿದೇಶದಿಂದ ಕಥೆ ತೆರೆದುಕೊಳ್ಳುತ್ತದೆ. ನಂತರ ಕನಸಿನಂಥಾ ದೃಶ್ಯಗಳೊಂದಿಗೆ ಹೆತ್ತವರಿಂದ ತಪ್ಪಿಸಿಕೊಂಡು ರೈಲುಪಾಲಾಗುವ ಪುಟ್ಟ ಹುಡುಗನ ಕಂಗಾಲು ಸ್ಥಿತಿ, ಪೋಷಕರ ಸಂಕಟದೊಂದಿಗೇ ಬಿಚ್ಚಿಕೊಳ್ಳುವ ಕಥೆ ನಂತರ ಕರ್ನಾಟಕದ ಊರೂರು, ಕೇರಿ, ಗಲ್ಲಿಗಳ ನಡುವೆ ಕಲ್ಪಿಸಿಕೊಳ್ಳಲಾಗದಂಥಾ ತಿರುವುಗಳೊಂದಿಗೆ ಪಯಣ ಆರಂಭಿಸುತ್ತದೆ. ಈ ಯಾನದಲ್ಲಿ ಎಲ್ಲಿಯೂ ಸಹ ನೋಡುಗರಿಗೆ ಬೋರ್ ಆಗುವುದಿಲ್ಲ.

Image result for missing boy kannada movie

ಇನ್ನು ಇಷ್ಟು ದಿನಗಳ ಕಾಲ ನಗಿಸುತ್ತಿದ್ದ ಗುರುನಂದನ್ ಈ ಚಿತ್ರದ ಮೂಲಕ ಅಳಿಸುವುದರಲ್ಲೂ ಸೈ ಎನಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ರಂಗಾಯಣ ರಘು ಇಷ್ಟವಾಗುತ್ತಾರೆ. ಇನ್ನು ನೈಜ ಕತೆಗಳಿಗೆ ಸಿನಿಮಾ ಸ್ಪರ್ಷ ನೀಡುವುದು ಬಲು ಕಷ್ಟ. ಆದರೆ ಮೂಲ ಕತೆಯೊಳಗೆ ಪರಕಾಯ ಪ್ರವೇಶ ಮಾಡಿ, ಅದರ ಭಾವಗಳನ್ನು ಪರಿಪೂರ್ಣವಾಗಿ ನಿರ್ದೇಶಕ ರಘು ರಾಮ್ ತೋರಿಸಿ ಗೆದ್ದಿದ್ದಾರೆ ಎನ್ನಬಹುದು.

ಈ ಮೊದಲು ರಘುರಾಮ್ ನಿರ್ದೇಶನ ಮಾಡಿದ್ದ ‘ಚೆಲುವೆಯೇ ನಿನ್ನೇ ನೋಡಲು’ ಚಿತ್ರದಲ್ಲಿ ಜಗತ್ತಿನ ಏಳು ಅದ್ಭುತ ಪ್ಲೇಸ್ ಗಳನ್ನು ತೋರಿಸಿದ್ದರು. ಈ ಚಿತ್ರದಲ್ಲಿ ವಿದೇಶದಿಂದ ಬಂದವರಿಗೆ ಕರ್ನಾಟಕದ ಒಳಗೇ ಸಂಚಾರ ಮಾಡಿಸಿ, ಒಂದೊಂದು ಊರಿನ ಘಮವನ್ನೂ ನೋಡುಗರೆದೆಗೆ ತಲುಪಿಸಿದ್ದಾರೆ. ನೋಡುಗರಿಗೆ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ.

ದರ್ಶನ್ ಮನೆ ಮೇಲೆ ಕಲ್ಲು ತೂರಾಟ….!!?!!

#missingboy, #review, #balkaninews #gurunandan, #raghuram, #kannadasuddigalu

Tags