ಸುದ್ದಿಗಳು

ಇವನು ‘ಮಿಸ್ಟರ್ ನಟ್ವರ್ ಲಾಲ್’…!!!

ಚೀಟರ್ ಆಗಲು ತಯಾರಿ ನಡೆಸಿದ ತನುಷ್

ಬೆಂಗಳೂರು, ಸ.11: ‘ನಟ್ವರ್ ಲಾಲ್’ ಎಂದ ಕೂಡಲೇ , ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದ ಚಿತ್ರ ನೆನಪಾಗುತ್ತದೆ. 1979 ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಅಮಿತಾಭ್ ಬಚ್ಚನ್ಗೆ ರೇಖಾ ಜೋಡಿಯಾಗಿ ನಟಿಸಿದ್ದರು. ಇದೀಗ ಕನ್ನಡದ ಚಿತ್ರವೊಂದು ಇದೇ ಹೆಸರನ್ನು ಇಟ್ಟುಕೊಂಡು ಪ್ರೇಕ್ಷಕರ ಎದುರಿಗೆ ಬರಲಿದೆ.

ಮಿಸ್ಟರ್ ನಟ್ವರ್ ಲಾಲ್

ಚಂದನವನದಲ್ಲಿ ಈಗಾಗಲೇ ‘ಅಲೆ’,’ಮಡಮಕ್ಕಿ’,ಹಾಗೂ ‘ನಂಜುಂಡಿ ಕಲ್ಯಾಣ’ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ತನುಷ್ ಶಿವಣ್ಣ, ಈ ಬಾರಿ ‘ಮಿಸ್ಟರ್ ನಟ್ವರ್ ಲಾಲ್’ ಅವತಾರವನ್ನು ಎತ್ತಲಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಲವ ಎಂಬುವವರು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ರಾಮ ಟಾಕೀಸ್ ಬ್ಯಾನರ್ ನಲ್ಲಿ “ಮಿಸ್ಟರ್ ನಟ್ವರ್ಲಾಲ್’ ನಿರ್ಮಾಣವಾಗುತ್ತಿದೆ.

ಮಹಾನ್ ಮೋಸಗಾರ

ಇಲ್ಲಿ ನಟ್ವರ್ ಲಾಲ್ ಅಂದರೆ, ಥಟ್ಟನೆ ಈ ಹಿಂದೆ ಇದ್ದಂತಹ ನಟೋರಿಯಸ್ ನೆನಪಾಗುತ್ತೆ. ಅವನೊಬ್ಬ ದೊಡ್ಡ ಮೋಸಗಾರ. ಆಗಿನ ಕಾಲದಲ್ಲಿ ತಾಜ್ ಮಹಲ್ ಅನ್ನು ಮಾರಲು ಹೊರಟು ಸುದ್ದಿಯಾಗಿದ್ದವ. ಆದರೆ ಅವನಿಗೂ , ಅಮಿತಾಬ್ ಬಚ್ಚನ್ ಅವರ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡದವರು ಹೇಳುತ್ತಾರೆ.

ಒಳ್ಳೆಯ ಮನುಷ್ಯ

ಚಿತ್ರದಲ್ಲಿ ಕಥಾನಾಯಕ ಮಹಾನ್ ಮೋಸಗಾರನಾಗಿದ್ದರೂ, ಬಂದ ಹಣದಿಂದ ಒಳ್ಳೆಯ ಕೆಲಸವನ್ನು ಮಾಡುತ್ತಾನೆ. ಒಂದಷ್ಟು ಹಾಸ್ಯ ಸನ್ನಿವೇಶಗಳ ಮೂಲಕ ಸಾಗುವ ಚಿತ್ರದಲ್ಲಿ ಯಾತಕ್ಕಾಗಿ ನಾಯಕ ಮೋಸ ಮಾಡುತ್ತಾನೆ ಎಂಬುದನ್ನು ತೋರಿಸಲಾಗುತ್ತಂತೆ.

ಚಿತ್ರದ ಕಥೆ

ತಾಯಿ ಜೊತೆಗೆ ವಾಸ ಮಾಡುವ ನಾಯಕನ ಕೆಲಸದಿಂದ ಬೇಸತ್ತು ಆ ಊರ ಜನರು, ಅವನನ್ನು ಹಾಗೂ ಅವನ ತಾಯಿಯನ್ನು ಊರು ಬಿಟ್ಟು ಕಳಿಸುತ್ತಾರೆ. ಅಲ್ಲಿಂದ ಬೆಂಗಳೂರಿಗೆ ಬರುವ ನಾಯಕ ಅಲ್ಲಿಯೂ ಮೋಸ ಮಾಡುತ್ತಾನೆ. ಆನಂತರ ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಕಥೆಯಾಗಿದ್ದು. ತನುಷ್ ಶಿವಣ್ಣ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ಚಿತ್ರಕ್ಕೆ ನಿಕ್ಕಿ ಎಂಬುವವರು ಸಂಗೀತ ನೀಡುತ್ತಿದ್ದು, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡುತ್ತಿದ್ದಾರೆ. ಗಣೇಶ ಹಬ್ಬದ ಬಳಿಕ ಈ ಚಿತ್ರಕ್ಕೆ ಚಾಲನೆ ಸಿಗಲಿದೆ

Tags