ಸುದ್ದಿಗಳು

ಕಣ್ಣುಗಳನ್ನು ಕಿತ್ತು ತಿನ್ನುವ ಹಸಿವಿನೊಂದಿಗೆ ‘ಮಿಠಾಯಿ’ ನೋಟ!

ಅಮೇರಿಕನ್ ಬೇಸ್ಡ್ ಫ್ಲಿಕ್ಸೆಲೊಯಿಡ್ ಸಿನಿಮಾ ವಿತರಕ ಸಂಸ್ಥೆಯು ಸಾಗರೋತ್ತರದಲ್ಲಿರುವ ದೇಶಗಳ ಬೆಳ್ಳಿ ತೆರೆಯ ಮೇಲೆ ತೆಲುಗು ಮಣ್ಣಿನ ಕಥೆಯನ್ನು ಪ್ರದರ್ಶನ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಎಂದು ಬಾರೀ ಸುದ್ದಿಯಾಗಿದೆ.

ಬಹು ನಿರೀಕ್ಷಿತ ತೆಲುಗು ನೂತನ ಸಿನಿಮಾ ‘ಮಿಠಾಯಿ’ ಅನ್ನೋ ಶೀರ್ಷಿಕೆಯೊಂದಿಗೆ ‘ರೆಡ್ ಯಾಂಟ್ಸ್ ಸಿನಿಮಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ತೆರೆ ಕಾಣಲಿದೆ ಎಂದು ಸುದ್ದಿಯಾಗಿದೆ.

ಈ ಸಿನಿಮಾದ ಚಿತ್ರಕಥೆ ಮತ್ತು ನಿರ್ದೇಶನವನ್ನು ಪ್ರಶಾಂತ್ ಕುಮಾರ್ ಅವರು ನಿರ್ವಹಿಸಲಿದ್ದಾರೆ, ಡಾ.ಪ್ರಬಾತ್ ಕುಮಾರ್ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮೂಲತಃ ಸಾಮಾಜಿಕ ಹಿನ್ನೆಲೆ ಇರುವ ನೈಜ ಘಟನೆಗಳಿಗೆ ಆಧಾರಿವಾಗಿದೆ ಎಂದು ನಿರ್ದೇಶಕರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ಈ ಸಿನಿಮಾದ ತಾರಾಗಣದಲ್ಲಿ ಉದಯೋನ್ಮುಖ ಪ್ರತಿಭೆಗಳಾದ ಪ್ರಿಯದರ್ಶಿನಿ,ರಾಹುಲ್ ರಾಮಕೃಷ್ಣ,ಕಮಲ್ ಕಾಮರಾಜು,ರವಿವರ್ಮ, ಭೂಷಣ್ ಕಲ್ಯಾಣ್ ಸೇರಿದಂತೆ ಹಲವಾರು ನಟ ನಟಿಯರು ತೆರೆ ಹಂಚಿಕೊಳ್ಳಲಿದ್ದಾರೆ.

ಜೊತೆಗೆ ಈ ಸಿನಿಮಾದ ಫಸ್ಟ್ ಲುಕ್ ಅನ್ನು WWW.mithaithefilm.com ನಲ್ಲಿ ಬಿಡುಗಡೆ ಮಾಡಲಾಗಿದೆ.ಈ ಪೋಸ್ಟರ್ ನಲ್ಲಿ ಕಣ್ಣುಗಳನ್ನು ಕಿತ್ತು ತಿನ್ನುವ ನೋಟವನ್ನು ಕಾಣಬಹುದು, ವಿಶೇಷವಾಗಿ ಗ್ರೀನ್ ಗೋಟ್ ಅನ್ನು ಕಥಾ ವಸ್ತುವಾಗಿ ಚಿತ್ರಿಸಲಾಗಿದ್ದು ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

 

Tags