ಸುದ್ದಿಗಳು

ಈವರೆಗೂ ಮಿಥುನ್ ಚಕ್ರವರ್ತಿಯವರ ಈ ದಾಖಲೆಯನ್ನು ಯಾರೂ ಮುರಿಯಕ್ಕಾಗಲಿಲ್ಲ..!

ಬಾಲಿವುಡ್ ಜನಪ್ರಿಯ ನಟ ಮಿಥುನ್ ಚಕ್ರವರ್ತಿ

ಮುಂಬೈ, ನ.21: ಮಿಥುನ್ ಚಕ್ರವರ್ತಿ ಬಾಲಿವುಡ್ ನ ಪ್ರಸಿದ್ಧ ನಟ. ಜೊತೆಗೆ ಹಿರಿಯ ನಟರೂ ಹೌದು. ಕಳೆದ 42 ವರ್ಷಗಳ ಸಿನಿ ವೃತ್ತಿಜೀವನದಲ್ಲಿ ಇವರು ಬಾಲಿವುಡ್ ಗೆ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಈ ಮೂಲಕ ಮಿಥುನ್ ಚಕ್ರವರ್ತಿ ಭಾರತೀಯ ಸಿನಿಮಾದ ಅತ್ಯಂತ ಜನಪ್ರಿಯ ನಟನೆಂದು ಪರಿಗಣಿಸಲ್ಪಟ್ಟಿದ್ದಾರೆ.

‘ಮರಿಗಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ

ಮಿಥುನ್ ಚಕ್ರವರ್ತಿ 1976 ರಲ್ಲಿ ಬಿಡುಗಡೆಯಾದ “ಮರಿಗಯಾ” ಚಿತ್ರದ ಮೂಲಕ ತನ್ನ ನಟನಾ ವೃತ್ತಿಜೀವನವನ್ನು ಆರಂಭಿಸಿದರು. ಇದು ಆ ವರ್ಷದ ಅತ್ಯಂತ ಅದ್ಭುತ ಚಲನಚಿತ್ರಗಳಲ್ಲಿ ಒಂದಾಗಿತ್ತು. ಈ ಚೊಚ್ಚಲ ಚಿತ್ರದಲ್ಲಿನ ಮಿಥುನ್ ರ ಉತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡಾ ಸಿಕ್ಕಿತ್ತು. ಚೊಚ್ಚಲ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಏಕೈಕ ಬಾಲಿವುಡ್ ನಟ ಅಂದರೆ ಈ ಮಿಥುನ್ ಚಕ್ರವರ್ತಿ. ಈವರೆಗೂ ಹಿರಿಯ ನಟ ಮಿಥುನ್ ಚಕ್ರವರ್ತಿಯವರ ಈ ದಾಖಲೆಯನ್ನು  ಬಾಲಿವುಡ್ ನಲ್ಲಿ ಯಾವ ನಟರು ಮುರಿಯಲಿಲ್ಲ. ಇದೇ ಅಲ್ಲವೇ ಗ್ರೇಟ್..?

Tags

Related Articles