ಸುದ್ದಿಗಳು

2019ರ ಬಜೆಟ್ ನಲ್ಲಿ ಭಾರತೀಯ ಚಿತ್ರರಂಗಕ್ಕೆ ಸಿಕ್ಕ ಕೊಡುಗೆ ಏನು??

ದೆಹಲಿ,ಫೆ.2:

ಪ್ರಧಾನಿ ನರೇಂದ್ರ ಮೋದಿ ಸರಕಾರ ನೇತೃತ್ವದ  ಈ ವರ್ಷದ ಸಾಲಿನ ಮಧ್ಯಂತರ  ಬಜೆಟ್ ಮಂಡಿಸಿದೆ. ಈ ಬಾರಿ ಮೊದಲ ಸಲ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದ್ದಾರೆ.. ಈ ಬಾರಿಯ ಬಜೆಟ್ ಮಂಡನೆಗೆ ಮಧ್ಯಮವರ್ಗದವರು ಸಂತಸಪಟ್ಟಿದ್ದು, ಇನ್ನು ಭಾರತೀಯ ಚಿತ್ರರಂಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿತ್ತು..

ನಕಲಿ ಸಿಡಿಗೆ ಸಂಬಂಧಪಟ್ಟ ಸಿನಿಮಾಟೋಗ್ರಫಿ ಆ್ಯಕ್ಟ್

ಈ ಬಾರಿ  ಭಾರತೀಯ ಚಿತ್ರರಂಗಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಭಾರತದಲ್ಲಿ ಇದುವರೆಗೂ  ಚಿತ್ರೀಕರಣ ತೆಗೆಯಬೇಕೆಂದು ಹರಸಾಹಸ ಮಾಡುತ್ತಿದ್ದ ಕೆಲ ತೊಡಕನ್ನು ನಿವಾರಿಸಿದ್ದಾರೆ.

ಇನ್ನು ಮುಂದೆ ಚಿತ್ರೀಕರಣ ತೆಗೆಯಬೇಕೆಂದಿರುವ ಸ್ಥಳದಲ್ಲಿ ಸಂಬಂಧಪಟ್ಟ ಎಲ್ಲಾ  ಅಂಶ ಕೂಡ ಒಂದೇ ಕಡೆ ಅನುಮತಿ ಸಿಗಲಿದೆ.  ಅಷ್ಟೇ ನಕಲಿ ಸಿಡಿಗೆ ಸಂಬಂಧಪಟ್ಟ ಸಿನಿಮಾಟೋಗ್ರಫಿ ಆ್ಯಕ್ಟ್ ಅನ್ನು ಜಾರಿಗೆ ಕೂಡ ತಂದಿದ್ದಾರೆ..

Image result for modi budget for film industry 2019

ಸಿನಿಮಾ ಟಿಕೆಟ್ ಗೆ ಜಿಎಸ್ಟಿ ದರ ಕಡಿಮೆ

ಸಿನಿಮಾ ಟಿಕೆಟ್ ಗೆ ಜಿಎಸ್ಟಿ  ಕೂಡ ಹೆಚ್ಚಿತ್ತು ಈ ಭಾರಿ ಅದನ್ನು ಕೊಂಚ ಕಡಿಮೆ ಮಾಡಲಾಗಿದೆ ನೂರು ರೂಪಾಯಿವರೆಗಿನ ಟಿಕೆಟ್ ದರಕ್ಕೆ ಇದ್ದ ಶೇ. 18 ರಿಂದ ಶೇ.12ಕ್ಕೆ ಇಳಿಸಲಾಗಿದೆ. ಇನ್ನು ಚಿತ್ರರಂಗವನ್ನು  ಭಾರೀ  ಹೊಗಳಿದ್ದಾರೆ ಅಷ್ಟೇ ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ‘ಉರಿ’ ಚಿತ್ರವನ್ನು ಪ್ರಶಂಶಿಸಿದ್ದಾರೆ..

Image result for movie tickets

Tags