ಸುದ್ದಿಗಳು

ವಿಡಿಯೋ ಎಡಿಟಿಂಗ್ ತರಬೇತಿಗಳು ಶುರು

ಆಸಕ್ತರಿಗಾಗಿಯೇ ನಮ್ಮ ಬಾಲ್ಕನಿ ನ್ಯೂಸ್ ಸಂಸ್ಥೆಯು, ಈ ಸಂಕಲನದ ತರಬೇತಿಯನ್ನು ಆರಂಭಿಸಿದೆ

ಇದು ತಂತ್ರಜ್ಞಾನದ ಯುಗ ಮತ್ತು ತಾಂತ್ರಿಕವಾಗಿ ಮುಂದುವರೆಯುತ್ತಿರುವ ಕಾಲ. ಸಾಮಾಜಿಕ ಜಾಲತಾಣ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಫ಼ೇಸ್ಬುಕ್, ವಾಟ್ಸ್ಆಪ್, ಇನ್ಸ್ಟಾಗ್ರಾಮ್, ಎಲ್ಲಿ ನೋಡಿದರೂ ವಿಡಿಯೋಗಳು.. ಈ ವಿಡಿಯೋಗಳನ್ನು ಎಡಿಟ್ ಮಾಡುವುದೂ ಸಹ ಒಂದು ಕಲೆ. ಇನ್ನು ಕ್ರಿಯೇಟಿವ್ ಫಿಲ್ಡ್ ನಲ್ಲಿರುವವರಂತೂ ಇದರಿಂದ ಸಾಕಷ್ಟು ಹಣವನ್ನೂ ಸಹ ಗಳಿಸುತ್ತಿದ್ದಾರೆ. ತಂತ್ರಗಳನ್ನು ಅರ್ಥೈಸಿಕೊಂಡು ಅವುಗಳ ಮೌಲ್ಯವರ್ಧನೆ ಮಾಡುವ ಕ್ರಿಯಾಶೀಲ ವ್ಯಕ್ತಿತ್ವ ಇರುವವರಿಗೆ ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಹೇರಳ ಅವಕಾಶಗಳು ಸಿಗುತ್ತವೆ.

ಹೀಗಾಗಿ ಸಂಕಲನದ ತರಬೇತಿ ಪಡೆದವರಿಗೆ ಟಿವಿ ವಾಹಿನಿಗಳು, ಧಾರಾವಾಹಿಗಳು, ಜಾಹೀರಾತು ಕ್ಷೇತ್ರ, ಮದುವೆ, ಕಾರ್ಪೊರೇಟ್ ವಿಡಿಯೋಗಳು, ಡಾಕ್ಯುಮೆಂಟರಿಗಳು.. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಮತ್ತು ಅವಕಾಶಗಳಿವೆ. ಯಶಸ್ವಿ ಸಂಕಲನಕಾರ ಎನಿಸಿಕೊಳ್ಳಬೇಕೆಂದರೆ ಚಿತ್ರವನ್ನು ಅರ್ಥೈಸಿಕೊಂಡು, ಸಂದರ್ಭಕ್ಕೆ ತಕ್ಕಂತೆ ಎಡಿಟಿಂಗ್ ಮಾಡಿ, ಅದಕ್ಕೆ ಸರಿ ಕಂಡು ಬರುವಂತ ಸಂಗೀತ, ಧ್ವನಿ ನೀಡುವ ಸಾಮರ್ಥ್ಯ ಹಾಗೂ ತಂಡದವರೊಂದಿಗೆ ಕಷ್ಟಪಟ್ಟು ದುಡಿಯುವ ಗುಣವೊಂದಿದ್ದರೆ, ಈ ಕ್ಷೇತ್ರದಲ್ಲಿ ಹೆಸರು ಮತ್ತು ಹಣ ಗಳಿಸಬಹುದು.

ತರಬೇತಿಗಳು

ಹೀಗಾಗಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕು, ಕಲಾವಿದನಾಗಿ, ತಂತ್ರಜ್ಞನಾಗಿ ಬೆಳೆಯಬೇಕು ಎಂದುಕೊಂಡಾಗ ಹೇಗೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಸೂಕ್ತ ತರಬೇತಿ ಇಲ್ಲದೆ ಯಾವುದೇ ರಂಗದಲ್ಲಿಬೆಳೆಯಲು ಸಾಧ್ಯವಿಲ್ಲ. ಆಸಕ್ತರಿಗಾಗಿಯೇ ನಮ್ಮ ಬಾಲ್ಕನಿ ನ್ಯೂಸ್ ಸಂಸ್ಥೆಯು, ಈ ಸಂಕಲನದ ತರಬೇತಿಯನ್ನು ಆರಂಭಿಸಿದ್ದು, ಆಸಕ್ತ ಮತ್ತು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಕಲಿಯುವ ಆಸಕ್ತಿ ಹೊಂದಿರುವವರನ್ನು ಮಾತ್ರ ಪರಿಗಣಿಸಲಾಗುತ್ತಿದ್ದು, ಯಾವುದೇ ವಯಸ್ಸಿನ ಮಾನದಂಡವಿಲ್ಲ. ಈ ತರಬೇತಿಯು ಒಟ್ಟು ಎರಡು ತಿಂಗಳ ಅವಧಿಯದ್ದಾಗಿದೆ. ಎಲ್ಲ ತರಗತಿಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡಲಾಗುವುದು.

ಇದಕ್ಕಾಗಿ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ಅಭ್ಯರ್ಥಿಗಳ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಶೇಕಡಾವಾರು ಅಂಕ ಇತ್ಯಾದಿ ಮಾಹಿತಿಯುಳ್ಳ ಸ್ವ-ವಿವರ, ಯಾವುದಾದರೂ ತರಬೇತಿ ಪಡೆದ ವಿವರ ಹಾಗೂ ಇತರೇ ಮಾಹಿತಿಯನ್ನು ತಿಳಿಸಬೇಕಾಗುತ್ತದೆ.

ಸಂಕಲನದ ತರಗತಿಗಳನ್ನು ಚಲನಚಿತ್ರ ನಿರ್ದೇಶಕ ಹಾಗು ಸ್ವತಃ ಸಂಕಲನಕಾರರೂ ಆಗಿರುವ ಶ್ರೀ ಮೋಹನ್ ಕಾಮಾಕ್ಷಿಯವರು ತರಬೇತಿ ನೀಡಲಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಇವರ ನಿರ್ದೇಶನದ `ಆದಿ ಪುರಾಣ’ ಚಿತ್ರ ಅಪಾರ ಜನಮನ್ನಣೆಗೊಂಡಿದೆ. `ಮುಸ್ಸಂಜೆ ಮಾತು’ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಇವರು ಮುಂದೆ `ಇನಿಯ’, `ಪ್ರೀತಿ ಕಿತಾಬು’, `ನಿರುತ್ತರ’, `ಡೈರೆಕ್ಟರ್ಸ್ ಸ್ಪೆಷಲ್’, `ಬಾನಾಡಿ’ ಚಿತ್ರಗಳು ಸೇರಿದಂತೆ `ಮಠ’ ಗುರುಪ್ರಸಾದ್, ಗಿರೀಶ್ ಕಾಸರವಳ್ಳಿ, ಅಪೂರ್ವ ಕಾಸರವಳ್ಳಿ ಅವರುಗಳ ಸಿನಿಮಾಗಳು ಸೇರಿದಂತೆ ಅನೇಕ ಸಿನಿಮಾಗಳಿಗೆ ಎಡಿಟರ್ ಆಗಿದ್ದಾರೆ.

ವಿಳಾಸ

Balkani Inforainment Pvt.Ltd

No 604, 12 cross, Vinayak layout, 4 th stage,

Near Nammura Thindi hotel, Behind snap pitness

Nagarabhavi, Bangalore 560072

Phone No 8884444254, 9448707758 Email: biz@balkaninews.com

#videoeditingcource #balkaninews #kannadasuddigalu

Tags