ಸುದ್ದಿಗಳು

ಚಂದನವನದಲ್ಲಿ ಮತ್ತೆ ಕಾಣಿಸಿಕೊಂಡ ‘ಮೋಹಿನಿ’

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ‘ಮೋಹಿನಿ’ಯೂ ಪಾತಾಳ ಮೋಹಿನಿಯಾಗಿ, ಜಗನ್ಮೋಹಿನಿಯಾಗಿ, ಬರೀ ಮೋಹಿನಿಯಾಗಿ ಗಮನ ಸೆಳೆದಿದೆ. ಇದೀಗ ಮೋಹಿನಿಗೆ ‘ಐ ಲವ್ ಯೂ’ ಹೇಳಲು ಹೊಸಬರು ಬರುತ್ತಿದ್ದಾರೆ.

ಹೌದು, ಸ್ಯಾಂಡಲ್ ವುಡ್ ನಲ್ಲೀಗ ಮತ್ತೊಮ್ಮೆ ‘ಮೋಹಿನಿ’ ಕಾಣಿಸಿಕೊಳ್ಳಲಿದೆ. ಅದಕ್ಕೆ ಹೊಸಬರು ‘ಐ ಲವ್ ಯೂ’ ಹೇಳಲು ರೆಡಿಯಾಗಿದ್ದಾರೆ. ಏನದು ಮೋಹಿನಿ ಅಂತಿರಾ, ಇಲ್ಲಿದೆ ಉತ್ತರ..

ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ಉದಯ್ ಎಂದೇ ಖ್ಯಾತಿ ಪಡೆದಿರುವ ಖಳನಟ ರವಿಕಲ್ಯಾಣ್ ಕನ್ನಡದ ಹಲವು ಚಿತ್ರಗಳಲ್ಲಿ ಖಳ ನಟ ನಟಿಸಿದ್ದಾರೆ. ಮೂಲತ ನೃತ್ಯಗಾರನಾಗಿರುವ ಅವರು ನೃತ್ಯಶಾಲೆಯೊಂದನ್ನು ನಡೆಸುತ್ತಿದ್ದಾರೆ. ಇದರೊಂದಿಗೆ ಅವರು ‘ಮೋಹಿನಿ ಐ ಲವ್ ಯೂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹೌದು, ಇತ್ತಿಚೆಗಷ್ಟೇ ನಗರದ ಕಂಠೀರವ ಸ್ಟುಡಿಯೋದಲ್ಲಿ ‘ಮೋಹಿನಿ ಐ ಲವ್ ಯೂ’ ಚಿತ್ರಕ್ಕೆ ಮುಹೂರ್ತವಾಗಿದೆ. ಈ ಚಿತ್ರದಲ್ಲಿ ಬಹುತೇಕ ಹೊಸ ಮುಖಗಳೇ ಕಾಣಿಸಿಕೊಳ್ಳುತ್ತಿದ್ದು, ಹಿರಿಯ ನಟ ಶಂಕರ್ ಭಟ್ ನಾಯಕಿಯ ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಚಿತ್ರದ ಪೋಸ್ಟರ್ ಅನ್ನು ನೋಡಿದರೆ, ಇದೊಂದು ಥ್ರಿಲ್ಲರ್ ಹಾಗೂ ಹಾರರ್ ಕಥೆಯ ಸಿನಿಮಾ ಅನಿಸುತ್ತಿದೆ. ಇನ್ನು ಚಿತ್ರವನ್ನು ಸೃಷ್ಠಿಶ್ರೀ ಸನಾಶ್ರೀ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇಂದ್ರಜಿತ್ ನಾಯ್ಕ್ ಚಿತ್ರಕಥೆ ಬರೆದು ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಲಿದ್ದಾರೆ.

ರಂಗಾಯಣ ರಘು ಹಾಡಿರುವ ‘ಕಲರ್ ಕಲರ್ ಕನಸು’ ಹಾಡು ಕೇಳಿ

#mohiniiloveyou #movie #muhurtha #balkaninews #filmnews, #kannadasuddigalu

Tags