ವೈರಲ್ ನ್ಯೂಸ್ಸುದ್ದಿಗಳು

ನೀರಿನ ಮಹತ್ವ ಸಾರಿದ ಕೋತಿ: ವಿಡಿಯೋ ವೈರಲ್

ಎಲ್ಲರ ಬದುಕಿಗೆ ಬಹುಮುಖ್ಯವಾಗಿರುವ ನೀರನ್ನು ಉಳಿಸಿ ಎಂದು ಪ್ರತಿನಿತ್ಯ ನೂರಾರು ಜನ ಭಾಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಲೇ ಇರುತ್ತಾರೆ. ಆದರೆ ನೀರಿನ ಮಹತ್ವ ಅರಿತು ಅದನ್ನು ಮಿತವಾಗಿ ಬಳಸುವ ಮಂದಿ ಕಡಿಮೆ. ಹೀಗಿರುವಾಗ ಕೋತಿಯೊಂದು ನಲ್ಲಿಯಿಂದ ಹರಿದು ಬಂದು, ವೃಥಾ ಪೋಲಾಗುತ್ತಿದ್ದ ನೀರನ್ನು ತಡೆಯಲು ಅನೇಕ ರೀತಿಯಲ್ಲಿ ಪ್ರಯತ್ನ ಮಾಡಿದೆ.

ಅಂದ ಹಾಗೆ ಪ್ರಸ್ತುತ ಹಲವಾರು ಕಡೆಗಳಲ್ಲಿ ಜನರು ನೀರಿಗಾಗಿ ಬಡಿದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಸಹ ಕೆಲವರು ವೃತಾ ಸುಮ್ಮನೇ ಪೋಲು ಮಾಡುತ್ತಿದ್ದಾರೆ. ಹಾಗೆಯೇ ಮಾನವನ ಅತಿಯಾಸೆಗೆ ಪರಿಸರ ನಾಶವಾಗುತ್ತಿದೆ. ವಿಶೇಷವೆಂದರೆ ಮನುಷ್ಯನಿಗಿಂತ ಪ್ರಾಣಿಗಳೇ ನೀರಿನ ಮಹತ್ವವನ್ನು ಚೆನ್ನಾಗಿ ಅರಿತಿರುತ್ತದೆ. ಅದಕ್ಕೆ ಉದಾಹರಣೆ ಎನ್ನುವಂತಿದೆ ಈ ವಿಡಿಯೋ.

ಈ ವಿಡಿಯೋದಲ್ಲಿ ಸುಮ್ಮನೇ ಹರಿಯುತ್ತಿದ್ದ ನೀರನ್ನು ನಿಲ್ಲಿಸಲು ಈ ಕೋತಿಯೂ ಹರಸಾಹಸ ಪಡುತ್ತಿದೆ. ಹೀಗಾಗಿ ತುಂಟಾಟ ಮಾಡಿಕೊಂಡು ಜೀವನ ಸಾಗಿಸುವ ಕೋತಿಗಳು ಸಹ ನೀರಿನ ಬಳಕೆಯನ್ನು ಅರಿತಿರುವಂತಿವೆ. ಅಂದ ಹಾಗೆ ಈ ವಿಡಿಯೋವನ್ನು ನೋಡಿದ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ಸೂಪರ್ ಮೆಮೊರಿ ಕಿಡ್’ ದಾಖಲೆಗೆ ಪಾತ್ರನಾದ ಬಾಲ ಪ್ರತಿಭೆ

#Monkey #SaveWater, #Animals #ViralVideo

Tags