ಸುದ್ದಿಗಳು

ಉಡುಪಿಯಲ್ಲಿ ಮೂಕಜ್ಜಿಯ ಕನಸು

ಮೂಕಜ್ಜಿಯಾದ ಜಯಶ್ರೀ

ಬೆಂಗಳೂರು,ಅ.11: ಮೂಕಜ್ಜಿಯ ಕನಸು ಸಿನಿಮಾ ಇದೀಗ ಚಿತ್ರ ರೂಪ ಪಡೆಯುತ್ತಿದೆ. ಇದೀಗ ಈ ಸಿನಿಮಾದ ಮುಹೂರ್ತ ಉಡುಪಿಯಲ್ಲಿ ನಡೆದಿದೆ.

ಮುಹೂರ್ತ ಕಂಡ ಮೂಕಜ್ಜಿ ಕನಸು

ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಕಾವ್ಯಗಳು, ಕಾದಂಬರಿಗಳು ಸಿನಿಮಾಗಳಾಗಿವೆ. ಈಗಾಗಲೇ ಕಾವ್ಯ ರೂಪದಲ್ಲಿರುವ ಅನೇಕ ಸಾಹಿತ್ಯಗಳು ಚಿತ್ರ ರೂಪ ಪಡೆದು ಯಶಸ್ವಿಯಾಗಿವೆ. ಇದೀಗ ಶಿವರಾಮ್ ಕಾರಂತ್ ಅವರ ಕಾದಂಬರಿ ಮೂಕಜ್ಜಿಯ ಕನಸು ಸಿನಿಮಾ ಆಗಲು ಹೊರಟಿದೆ. ಇತ್ತೀಚಿಗೆ ಉಡುಪಿಯಲ್ಲಿ ಈ ಸಿನಿಮಾದ ಮುಹೂರ್ತ ನಡೆದಿದ್ದು, ಸಿನಿಮಾ ಸೆಟ್ಟೇರಿದೆ.

ಕಾರಂತರ ಕಾದಂಬರಿಗೆ ೫೦ ವರ್ಷಗಳು

ಪಿ.ಶೇಶಾದ್ರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾವೇ ಮೂಕಜ್ಜಿಯ ಕನಸು, ಶಿವರಾಮ್ ಕಾರಂತರು ರಚಿಸಿದ ಈ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಕೂಡ ಲಭಿಸಿದೆ. ಇಂಥಹ ಕಾದಂಬರಿಯನ್ನು ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ನಡೆದಿದ್ದು, ಈಗಾಗಲೇ ಉಡುಪಿಯಲ್ಲಿ ಈ ಕಾದಂಬರಿ ಆಧಾರಿತ ಸಿನಿಮಾ ಮುಹೂರ್ತ ಕಂಡಿದೆ. ಇನ್ನು ಈ ಕಾದಂಬರಿಯನ್ನು ಕಾರಂತರು ಬರೆದು ೫೦ ವರ್ಷಗಳು ಸಂದಿವೆ. ಇನ್ನು ಈ ಸಿನಿಮಾ ಮುಹೂರ್ತಕ್ಕೆ ಕೃತಿ ವಾರಸುದಾರ ಮಾಲಿನಿ ಮಲ್ಯ ಸಾಥ್ ನೀಡಿದರು.

ಮೂಕಜ್ಜಿಯಾದ ಜಯಶ್ರೀ

ಇನ್ನು ಈ ಸಿನಿಮಾದಲ್ಲಿ ಮೂಕಜ್ಜಿಯಾಗಿ ಜಯಶ್ರೀಯವರು ಬಣ್ಣ ಹಚ್ಚಿದ್ದಾರೆ. ಅನೇಕ ಸಿನಿಮಾಗಳಲ್ಲಿ ತಮ್ಮದೇ ಆದ ವಿಭಿನ್ನ ನಟನೆಯ ಮೂಲಕ ಸಾಕಷ್ಟು ಕೆಸರು ಮಾಡಿರುವ ಜಯಶ್ರೀ ಇದೀಗ ಮೂಕಜ್ಜಿಯಾಗಿ ಹೊರಹೊಮ್ಮಲಿದ್ದಾರೆ. ಇನ್ನು ಕರಾವಳಿ ಭಾಗದ ಜನ ಜೀವನ ಆಧಾರಿತ ಈ ಕೃತಿಯು ಅಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ಸಾರಿ ಹೇಳುತ್ತಿದೆ. ಹಾಗಾಗಿ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಉಡುಪಿಯಲ್ಲಿಯೇ ನಡೆಯಲಿದೆ. ಸುಮಾರು ೨೫ ದಿನಗಳ ಕಾಲ ಉಡುಪಿ ಕಲಾವಿದರನ್ನು ಬಳಸಿ ಈ ಸಿನಿಮಾ ಚಿತ್ರೀಕರಣ ನಡೆಯಲಿದೆ.

 

Tags