ಸುದ್ದಿಗಳು

ನಾಡಿದ್ದು ರಂಗಶಂಕರದಲ್ಲಿ ‘ಮೂಕಜ್ಜಿಯ ಕನಸುಗಳು’ ಡ್ರಾಮಾ ಪ್ರದರ್ಶನ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ.ಶಿವರಾಮ ಕಾರಂತರು ರಚಿಸಿರುವ ಕಾದಂಬರಿಯೇ ‘ಮೂಕಜ್ಜಿಯ ಕನಸುಗಳು’. ಇಲ್ಲಿ ಮೂಕಜ್ಜಿಯ ಪಾತ್ರವೇ ಪ್ರಧಾನವಾಗಿದ್ದು ಅವರಿಲ್ಲಿ ತಮ್ಮ ಜೀವನದ ಸಾರ ಸತ್ವವನ್ನು ವಿಮರ್ಶಿಸುತ್ತಾರೆ. ಗಹನವಾದ, ವೈಚಾರಿಕ ವ್ಯಕ್ತಿ-ವಿಷಯಗಳ ಸುತ್ತ ಈ ಕಥೆ ಸುತ್ತುತ್ತದೆ.

ವಿವಿಧ ಯುಗಗಳ ನಾಗರೀಕತೆಯ ಸ್ಥೂಲ ಪರಿಚಯ, ಸೃಷ್ಟಿ, ಸ್ಥಿತಿ, ಲಯಗಳ ಅರ್ಥ, ಅವತಾರ, ಪುನರ್ಜನ್ಮ, ಜೀವನ ನಿರ್ವಹಣೆ, ಸಂಬಂಧಗಳು, ಬೆಸುಗೆ, ಅಗಲಿಕೆ, ನೋವು ನಲಿವು, ನಿರಂತರ ಹುಡುಕಾಟದ ಫಲವೇ ಕನಸುಗಳು, ಅಜ್ಜಿಯ ಬಾಯಲ್ಲಿ ಆಡಿದ ಮಾತುಗಳು. ಈ ಎಲ್ಲಾ ಅಂಶಗಳನ್ನು ಈ ನಾಟಕ ಒಳಗೊಂಡಿದೆ.ವಿಶೇಷವೆಂದರೆ, ಈ ಕಾದಂಬರಿಯು 1968 ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಿತ್ತು ಮತ್ತು 1977 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇಲ್ಲಿ ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯುವ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ.

ವಿವರಗಳು

ನಾಟಕ          : ಮೂಕಜ್ಜಿಯ ಕನಸುಗಳು

ಕಲಾವಿದರು : ಮಂಗಳಾ ಎನ್, ಸಿದ್ದಾರ್ಥ ಭಟ್, ವಿದ್ಯಾ ಎಮ್ ಎಸ್, ಶ್ರೀನಿವಾಸ್ ಕೈವಾರ್, ಸುರೇಶ್ ಎ‍ನ್, ದುರ್ಗಾ ದಾಸ್, ಕೋಡಿ ರಾಜೇಶ್ ಸೇರಿದಂತೆ ಮುಂತಾದವರು

ರಚನೆ            : ಡಾ. ಕೆ ಶಿವರಾಮ್ ಕಾರಂತ್

ನಿರ್ದೇಶನ    : ಡಾ. ಬಿ ವಿ ರಾಜಾರಾಮ್

ಸ್ಥಳ              : ರಂಗಶಂಕರ, ಬೆಂಗಳೂರು

ಸಮಯ       : 16/06/2019 ಸಂಜೆ 07:30 ಕ್ಕೆ

ಪ್ರವೇಶ ದರ : ರೂ.150/-

(ಟಿಕೆಟ್ ಗಳನ್ನು ನೇರವಾಗಿ ಇಲ್ಲವೇ ಬುಕ್ ಮೈ ಶೋ ಆ್ಯಪ್ ಮೂಲಕವೂ ತೆಗೆದುಕೊಳ್ಳಬಹುದು)

ಅಂಚೆ ಮೂಲಕ ಮೊದಲ ಮತ ಹಾಕಿ ಸುದ್ದಿಯಾಗಿದ್ದ ಯೋಧ ರಾಜ್ ನಾಯಕ್ ರಿಂದ ಎಮ್ ಪಿ ಸುಮಲತಾರವರ ಭೇಟಿ

#mookajjiyakanasugalu, #drama, #show, #news, #balkaninews #fiilmnews, #kannadasuddigalu

Tags