ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಮೋಡಿ ಮಾಡುವ ‘ಮೂಕವಿಸ್ಮಿತ’

ಬೆಂಗಳೂರು.ಮೇ.18: ಸಾಮಾನ್ಯವಾಗಿ ಯಾವುದೇ ನಾಟಕಕ್ಕೆ ದೃಶ್ಯರೂಪವನ್ನು ಕೊಡುವಾಗ ಸ್ವಲ್ಪ ಆಚಿಚೆ ಎನಿಸಬಹುದು. ಆದರೆ, ‘ಮೂಕ ವಿಸ್ಮಿತ’ ಹಾಗೆ ಅನಿಸುವುದಿಲ್ಲ. ಟಿ.ಪಿ ಕೈಲಾಸಂ ರಚಿಸಿರುವ ‘ಟೊಳ್ಳುಗಟ್ಟಿ’ ನಾಟಕವನ್ನು ನಿರ್ದೇಶಕ ಗುರುದತ್ ಶ್ರೀಕಾಂತ್ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ.

“ಟೊಳ್ಳು-ಗಟ್ಟಿ’ ನಾಟಕ 60ರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಇದೇ ನಾಟಕ “ಮೂಕ ವಿಸ್ಮಿತ’ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ತೆರೆಗೆ ಬಂದಿದೆ. ಹಾಗಂತಾ ನಾಟಕವನ್ನೇ ಇಲ್ಲಿ ದೃಶ‍್ಯರೂಪ ಕೊಡಲಾಗಿಲ್ಲ. ಆ ನಾಟಕದ ಕಥಾಹಂದರವನ್ನು ಇಟ್ಟುಕೊಂಡು ಅದನ್ನು ಇಂದಿನ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವಂತೆ ತಮ್ಮದೇ ಪರಿಕಲ್ಪನೆಯಲ್ಲಿ ನಿರ್ದೇಶಕರು ನಿರೂಪಿಸಿದ್ದಾರೆ.

1950-60 ರ ದಶಕದಲ್ಲಿನ ಮಧ್ಯಮ ವರ್ಗದ ಅವಿಭಕ್ತ ಮಧ್ಯಮ ಕುಟುಂಬವೊಂದರಲ್ಲಿ ನಡೆಯುವ ಸಂಸಾರದ ಗೋಳಿನ ಕಥೆಯನ್ನು ಇಲ್ಲಿ ತೋರಿಸಲಾಗಿದೆ. ಕುಟುಂಬದ ಯಜಮಾನ ಹಿರಿಯಣ್ಣನಿಗೆ (ಸಂದೀಪ್ ಮಲಾನಿ) ಪ್ರಾಯಕ್ಕೆ ಬಂದ ಇಬ್ಬರು ಗಂಡು ಮಕ್ಕಳಿರುವಾಗ ಆತ 55ನೇ ವಯಸ್ಸಿನಲ್ಲಿ ಮಗುವಿನ ತಂದೆಯಾಗುವುದು ಸಿನೆಮಾದ ಕಥೆ. ಇದರಿಂದ ಸಮಾಜದಲ್ಲಿ ಹುಟ್ಟಿಕೊಳ್ಳುವ ಸಮಸ್ಯೆಗಳನ್ನು ಚಿತ್ರಕಥೆಯಲ್ಲಿ ಹೆಣೆಯಲಾಗಿದೆ.

ಇನ್ನು ಚಿತ್ರದಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿ ಸಂದೀಪ್ ಮಲಾನಿ ಸೇರಿದಂತೆ, ಗುರುದತ್, ಮಾವಳ್ಳಿ ಕಾರ್ತಿಕ್, ವಾಣಿ ಶ್ರೀ ಭಟ್, ಶುಭ ರಕ್ಷಾ ಸೇರಿದಂತೆ ಅನೇಕರ ಅನೇಕ ಗಮನ ಸೆಳೆಯುತ್ತದೆ. ವಿಶೇಷವೆಂದರೆ ಚಿತ್ರದಲ್ಲಿ ಬಹುತೇಕ ರಂಗಕಲಾವಿದರೇ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೆ ‘ಟೊಳ್ಳು ಗಟ್ಟಿ’ ನಾಟಕವನ್ನು ಕೈಲಾಸಂರವರು ಬರೆದಿದ್ದು 1922 ರಲ್ಲಿ. ಅದಕ್ಕೆ 50 ರ ದಶಕ ಮತ್ತು 2019 ರ ಕಾಲವನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ಮೂಡಿ ಬರುವ ಲಾಂಧ್ರ, ಚಿಮುಣಿ, ಕಂಬಳಿ.. ಹೀಗೆ ಕಥಾ ಪಾತ್ರಗಳ ವಸ್ತ್ರ ವಿನ್ಯಾಸ ಹಾಗೂ ಅಲ್ಲಿನ ಪರಿಸರ.. ಹೊಸ ರೀತಿಯ ಅನುಭವವನ್ನು ಕಟ್ಟಿಕೊಡುತ್ತವೆ.

ರೈತರೊಂದಿಗೆ ಮಹೇಶ್ ಬಾಬು ಸಂವಾದ

#mookavismiktha, #Review, #balkaninews #filmnews, #kannadasuddigalu, #sandeepmalani

Tags