ಸುದ್ದಿಗಳು

ನೋಡುಗರ ಗಮನ ಸೆಳೆದ ‘ಮೂಕವಿಸ್ಮಿತ’ ಟ್ರೈಲರ್

ಇದು ಟೊಳ್ಳು ನಿರೀಕ್ಷೆಯಿಲ್ಲದ ಗಟ್ಟಿ ಸಿನಿಮಾ

ಬೆಂಗಳೂರು.ಮಾ.23: ಯುವ ನಿರ್ದೇಶಕ ಗುರುದತ್ ಶ್ರೀಕಾಂತ್ ನಿರ್ದೇಶನದ ‘ಮೂಕವಿಸ್ಮಿತ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದ ಕಥೆಯನ್ನು ಸಾಹಿತಿ, ಕಥೆಗಾರ ಟಿ. ಪಿ ಕೈಲಾಸಂ ರಚಿಸಿರುವ ಮೊದಲ ನಾಟಕ ‘ಟೊಳ್ಳುಗಟ್ಟಿ’ ಕಥಾಹಂದರದಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.

ಹೌದು, ಕೈಲಾಸಂ ರಚನೆಯ ನಾಟಕದ ಕಥಾಹಂದರವನ್ನು ಒಳಗೊಂಡ ಈ ಚಿತ್ರದಲ್ಲಿ ಸಂದೀಪ್ ಮಲಾನಿ, ಗುರುದತ್, ಮಾವಳ್ಳಿ ಕಾರ್ತಿಕ್, ವಾಣಿ ಶ್ರೀ ಭಟ್, ಶುಭ ರಕ್ಷಾ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

ವಿಶೇಷವೆಂದರೆ, ಕೈಲಾಸಂ ‘ಟೊಳ್ಳು ಗಟ್ಟಿ’ ನಾಟಕ ಬರೆದಿದ್ದು 1922 ರಲ್ಲಿ. ಅದನ್ನು 1950ರ ದಶಕಕ್ಕೆ ಅಳವಡಿಸಿ, ಜೊತೆಗೆ 2019ರ ಕಾಲದ ಒಂದಷ್ಟು ವಿಷಯಗಳನ್ನೂ ಸೇರಿಸಿ ಸಿನಿಮಾ ಮಾಡಲಾಗಿದೆ.


ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನೋಡುಗರಿಗೆ ಇಷ್ಟವಾಗುತ್ತಿದ್ದು, ಚಿತ್ರವನ್ನು ಕಲಾತ್ಮಕ ಬಿಟ್ಟು ವ್ಯಾಪಾರಿ ಪ್ರಕಾರದಲ್ಲಿ ಸಿನಿಮಾ ಮಾಡಲಾಗಿದೆ. ಚಿತ್ರದ ಅವಧಿ 2 ಗಂಟೆ 10 ನಿಮಿಷ ಇದ್ದು, ‘ಇಂದಿನ ತಲೆಮಾರಿನ ಯುವ ಪ್ರೇಕ್ಷಕರು ಎಂಜಾಯ್ ಮಾಡಬಹುದಾದ ರೀತಿಯಲ್ಲಿ ಕಟ್ಟಿಕೊಟ್ಟಿದ್ದೇವೆ’ ಎಂಬುದು ನಿರ್ದೇಶಕರ ಮಾತು.

ಶೀಘ್ರದಲ್ಲೇ ಆಡಿಯೋ ಮತ್ತು ಟ್ರೇಲರ್ ಬಿಡುಗಡೆಯಾಗಲಿದ್ದು, ಏಪ್ರಿಲ್ ನಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರಕ್ಕೆ ಚಕ್ರವರ್ತಿ ಸೂಲಿಬೆಲೆ ಹಿನ್ನೆಲೆ ಧ್ವನಿ ನೀಡಿರುವುದು ವಿಶೇಷವಾಗಿದೆ.

ಕೊನೆಯ ತನಕ ಕೌತುಕ ಕಾಪಾಡಿಕೊಳ್ಳುವ ‘ಉದ್ಘರ್ಷ’

#mookavismitha, #filmnews, #trailor, #balkaninews #kannadasuddigalu, #sandeepmalani, #shubharaksha

Tags