ಸುದ್ದಿಗಳು

ಮಯೂರಿ- ಬಾಲಾಜಿ ಶರ್ಮಾ ನಟನೆಯ ‘ಮೌನಂ’ ತೆರೆಗೆ ಬರಲು ಸಿದ್ದ..!!

ತೆರೆಗೆ ಬರಲು ತಯಾರಾಗಿರುವ ಕನ್ನಡದ ಮತ್ತೊಂದು 'ಸಸ್ಪೆನ್ಸ್ ಥ್ರಿಲ್ಲರ್' ಚಿತ್ರ 'ಮೌನಂ'

ಸ್ಯಾಂಡಲ್‍ವುಡ್‍ನಲ್ಲಿ ಟೈಟಲ್‍ನ ಮೂಲಕವೇ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದ ‘ಮೌನಂ’ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಒಂದು ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷಕರೆದುರಿಗೆ ಬರುತ್ತಿರುವ ‘ಮೌನಂ’ ಚಿತ್ರದ ಟ್ರೈಲರ್ ಸಖತ್ ರೆಸ್ಪಾನ್ಸ್  ಪಡೆದುಕೊಂಡಿದೆ. ಚಿತ್ರದ ಕಥಾಹಂದರ ವಿಶಿಷ್ಟ, ವಿಭಿನ್ನವಾಗಿದ್ದು ಸಿನಿರಸಿಕರಿಗೆ ಹೊಸ ಅನುಭವ ನೀಡಲಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ.

ಮಯೂರಿ, ಅವಿನಾಶ್, ಬಾಲಾಜಿ ಶರ್ಮಾ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ಅವಿನಾಶ್ ಹಾಗೂ ಮಯೂರಿ ವಿಭಿನ್ನ ಶೇಡ್ನಲ್ಲಿ ಈ ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಸ್ಪೆನ್ಸ್, ಥ್ರಿಲ್ಲಿಂಗ್ ಸಬ್ಜೆಕ್ ಇರೋ ‘ಮೌನಂ’ ಚಿತ್ರಕ್ಕೆ ಹೊಸ ಪ್ರತಿಭೆ ರಾಜ್ ಪಂಡಿತ್ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯಲ್ಲೂ ತಮ್ಮ ಪ್ರತಿಭೆ ತೋರಿಸಿರುವ ರಾಜ್ ಪಂಡಿತ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ರೆಸ್ಪಾನ್ಸ್ನಿಂದ ಸಖತ್ ಖುಷಿಯಾಗಿದ್ದಾರೆ.

 ಶ್ರೀಹರಿ ಬಂಡವಾಳ ಹಾಕಿದ್ದು, ಆರವ್ ರಿಶಿಕ್ ಮ್ಯೂಸಿಕ್ ಚಿತ್ರಕ್ಕಿದೆ. ಬಹು ನಿರೀಕ್ಷೆ ಮೂಡಿಸಿರುವ ಈ ಚಿತ್ರದಲ್ಲಿ  ಕಾಮಿಡಿ ಕಿಲಾಡಿ ನಯನಾ, ರಿತೇಶ್, ಕೆಂಪೇಗೌಡ ಚಿತ್ರದ ತಾರಾಂಗಣದಲ್ಲಿ ಬಣ್ಣಹಚ್ಚಿದ್ದಾರೆ. ಫೆಬ್ರವರಿ 21ಕ್ಕೆ ‘ಮೌನಂ’ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ.

#mounam #mayuri #kannadafilms #kannadamovies

Tags