ಸುದ್ದಿಗಳು

ಮೌನಿ ಬಾಯಲ್ಲಿ ಸಾಯುವ ಮಾತು! ಅಷ್ಟಕ್ಕೂ ಅಮಿತಾಬ್ ಈ ನಟಿಗೇನು ಮಾಡಿದ್ರು?

'ನಾನೀಗ ಖುಷಿಯಾಗಿ ಸಾಯಬಲ್ಲೆ'

ಮುಂಬೈ,ನ.20: ‘ನಾಗಿನ್‌’ ಧಾರಾವಾಹಿ ಖ್ಯಾತಿಯ ನಟಿ ಮೌನಿರಾಯ್ ಕಿರುತೆರೆಯಿಂದ ಬೆಳ್ಳಿತೆರೆಯತ್ತ ಗಮನ ಹರಿಸಿದ್ದು ‘ಗೋಲ್ಡ್’ ಚಿತ್ರದ ಮೂಲಕ. ನಿಧಾನವಾಗಿ ಉತ್ತಮ ಅವಕಾಶಗಳನ್ನೇ ಬಾಚಿಕೊಳ್ಳುತ್ತಿರುವ  ಮೌನಿರಾಯ್ ಇದೀಗ ಯಶಸ್ಸಿನ ಹಾದಿಯಲ್ಲಿರುವಾಗಲೇ ಸಾವಿನ ಬಗ್ಗೆ ಮಾತನಾಡಿದ್ದಾರೆ. ‘ನಾನೀಗ ಖುಷಿಯಾಗಿ ಸಾಯಬಲ್ಲೆ’ ಎಂದು ಹೇಳಿಕೆ ನೀಡಿರುವ ಮೌನಿ ಮಾತು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರಂತೆ. ಅಷ್ಟಕ್ಕೂ ಚಿತ್ರರಂಗದಲ್ಲಿ ಅವಕಾಶಗಳ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಮೌನಿಗೇಕಪ್ಪ ಬಂತು ಸಾಯೋ ಆಲೋಚನೆ ಎಂಬ ಚರ್ಚೆ ಸಾಗಿದ್ದು, ಸಾವಿನ ಬಗ್ಗೆ ಮೌನಿ ಮಾತನಾಡಿದ್ದು ಯಾಕೆ ಗೊತ್ತಾ?

 ಅಂದಹಾಗೆ ಸಾವಿನ ಆಲೋಚನೆ ಬಂದಿದ್ದು ಬೇಸರದಿಂದ ಅಲ್ಲವಂತೆ

ನಟಿ ಮೌನಿ ರಾಯ್ ಅವರನ್ನು ಚಿತ್ರರಂಗ ಅಕ್ಕರೆಯಿಂದ ಬರಮಾಡಿಕೊಂಡಿದೆ. ಪ್ರೀತಿಯಿಂದ ನಡೆಸಿಕೊಂಡಿದೆ. ಅಂದುಕೊಂಡಂತೆ ಎಲ್ಲವೂ ಆಕೆಗೆ ಹೂವಿನ ಹಾಸಿಗೆಯೇ ಆಗಿದೆ. ಹೀಗಾಗಿ ಸಾವಿನ ಮಾತು ಬಂದಿರುವುದು ಬೇಸರದಿಂದ ಅಲ್ಲವಂತೆ. ಇಷ್ಟಕ್ಕೂ ಆಕೆಯ ಬಾಯಿಯಿಂದ ಈ ಮಾತನ್ನಾಡಿಸಿದ್ದು ‘ಬ್ರಹ್ಮಾಸ್ತ್ರ’. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ನಟಿಸಿದ್ದು ಆಕೆಯ ಜೀವನದ ಅತ್ಯಂತ ಅದ್ಬುತ ಕ್ಷಣವಂತೆ. ಬಿಗ್ ಬಿ ಜೊತೆಗೆ ತೆರೆ ಹಂಚಿಕೊಳ್ಳಬೇಕು ಎಂಬ ಅದೆಷ್ಟೋ ಮಹಾನ್ ನಟರ ಕನಸು ನನಸಾಗುವುದು ಕಷ್ಟ. ಆದರೆ ಚಿತ್ರರಂಗಕ್ಕೆ ಬಂದು ಕೆಲವೇ ವರ್ಷಗಳಲ್ಲಿ ನನಗೆ ಈ ಅದ್ಬುತ ಅವಕಾಶ ದೊರಕಿದೆ ಎಂದು ಸಿಕ್ಕಾಪಟ್ಟೆ ಸಂತಸ ವ್ಯಕ್ತಪಡಿಸಿರುವ ಮೌನಿ ರಾಯ್ ‘ನಾನಿನ್ನು ಸಂತೋಷದಿಂದ ಸಾಯಬಲ್ಲೆ’ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Related image

ಗೋಲ್ಡ್ ಮೂಲಕ ಬಾಲಿವುಡ್ ನಲ್ಲಿ ಗೋಲ್ಡನ್ ಅವಕಾಶ

ಅಂದಹಾಗೆ ಕಿರುತೆರೆಯ ‘ನಾಗಿನ್’ ಸಿರಿಯಲ್ ಮೂಲಕ ಮನೆಮಾತಾಗಿದ್ದ ಮೌನಿ, ತಮ್ಮ ರೂಪ ಹಾಗೂ ನಟನೆಯಿಂದ ಗಮನ ಸೆಳೆದವರು. ಹಾಟ್ ಹಾಟ್ ಲುಕ್ ನಲ್ಲ ಅಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದ ಮೌನಿಗೆ, ಬಾಲಿವುಡ್ ನಲ್ಲಿ ‘ಗೋಲ್ಡ್’ ಚಿತ್ರದ ಮೂಲಕ ಅವಕಾಶದ ಬಾಗಿಲು ತೆರೆಯಿತು. ಮೊದಲ ಚಿತ್ರದಲ್ಲೇ ಅಕ್ಷಯ್ ಕುಮಾರ್ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಮೌನಿಗೆ ಒಂದು ಖುಷಿಯಾದರೆ, ‘ಬ್ರಹ್ಮಾಸ್ತ್ರ’ ಚಿತ್ರದ ಮೂಲಕ ಬಿಗ್ ಬಿ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಈ ಸಂತಸವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡಿರುವ ಮೌನಿ, ಅವರೊಬ್ಬ ಅದ್ಭುತ ನಟ. ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೇ ನನಗೆ ದೊಡ್ಡ ಅದೃಷ್ಟ. ಚಿತ್ರೀಕರಣ ವೇಳೆ ನಾನು ಅವರ ಕಣ್ಣುಗಳನ್ನು ನೋಡುತ್ತ, ದೇವರು ನನಗೆ ಎಂಥ ಅವಕಾಶ ಕೊಟ್ಟಿದ್ದಾನಲ್ಲ ಎಂದು ಯೋಚಿಸುತ್ತಿದ್ದ ಬಾವಪರವಶಕ್ಕೊಳಗಾಗುತ್ತಿದ್ದೆ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು ನಟಿ.

 

Tags

Related Articles