ಸುದ್ದಿಗಳು

ಈ ವಾರದ ‘ವೀಕೆಂಡ್’ ಮಸ್ತಿಯಲ್ಲಿ ನೋಡಿ 4 ಚಿತ್ರಗಳು: ಈ ವಾರ ಬಿಡುಗಡೆ

ಒಂದಲ್ಲಾ ಒಂದು ಕಾರಣಗಳಿಂದ ಕುತೂಹಲ ಮೂಡಿಸಿರುವ ಸಿನಿಮಾಗಳು

ಬೆಂಗಳೂರು.ಮೇ.23: ಸ್ಯಾಂಡಲ್ ವುಡ್ ನಲ್ಲಿ ಪ್ರತಿವಾರ ಒಂದಲ್ಲಾ ಒಂದು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಅದರಂತೆ ಈ ವಾರ ಬರೊಬ್ಬರಿ 4 ಸಿನಿಮಾಗಳು ಬೆಳ್ಳಿತೆರೆಯನ್ನು ಅಲಂಕರಿಸಲು ಸಿದ್ದವಾಗಿವೆ.

ಹೌದು, ಈ ವಾರ ‘ಡಾಟರ್ ಆಫ್ ಪಾರ್ವತಮ್ಮ’, ‘ವೀಕೆಂಡ್’, ‘ದಿಗ್ಬಯಂ’ ಹಾಗೂ ‘ರೇಸ್’ ಚಿತ್ರಗಳು ಈ ವಾರ ಬಿಡುಗಡೆಗೊಳ್ಳುತ್ತಿರುವ ಸಿನಿಮಾಗಳು. ವಿಶೇಷವೆಂದರೆ, ಈ ಎಲ್ಲಾ ಸಿನಿಮಾಗಳು ಒಂದಲ್ಲಾ ಒಂದು ಕಾರಣಕ್ಕಾಗಿ ಕುತೂಹಲ ಮೂಡಿಸಿವೆ.

1 ಡಾಟರ್ ಆಫ್ ಪಾರ್ವತಮ್ಮ: ನಟಿ ಹರಿಪ್ರಿಯಾ ವೃತ್ತಿ ಬದುಕಿನ 25 ನೇ ಸಿನಿಮಾ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಚಿತ್ರವನ್ನು ಶಂಕರ್ ಜೆ ಎನ್ ನಿರ್ದೇಶನ ಮಾಡಿದ್ದು, ಸುಮಲತಾ ಅಂಬರೀಶ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಹಿಟ್ ಆಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.2 ವೀಕೆಂಡ್ : ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಡಿ ಮಂಜುನಾಥ್ ನಿರ್ಮಿಸಿರುವ ಚಿತ್ರವಿದು. ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ರೊಂದಿಗೆ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಟೆಕ್ಕಿಗಳು ಇಡೀ ವಾರದ ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ವೀಕೆಂಡ್ ನ ಮೋಜಿನ ಮೊರೆ ಹೋಗುತ್ತಾರೆ. ಈ ಚಿತ್ರವು ಸಹ ಅದೇ ಕಥೆಯನ್ನು ಒಳಗೊಂಡಿದೆ.

3 ರೇಸ್ : ಕನ್ನಡ ಬಿಗ್ ಬಾಸ್ ಸರಣಿ 5 ರನ್ನರ್ ಅಪ್ ಸ್ಪರ್ಧಿ ದಿವಾಕರ್ ನಟಿಸಿರುವ ಸಿನಿಮಾವಿದು. ತೆಲುಗು ಮೂಲಕ ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಾ ಶೆಣೈ, ಶೃತಿ, ಸಂತೋಷ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಸ್.ವಿ.ಆರ್ ಬ್ಯಾನರ್ ನಲ್ಲಿ ವೆಂಕಟರಾವ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

4 ದಿಗ್ಬಯಂ: ಇದೊಂದು ಥ್ರಿಲ್ಲರ್ ಸಸ್ಪೆನ್ಸ್ ಹಾರರ್ ಚಿತ್ರವಾಗಿದ್ದು ಅಮಿತ್ ನಟನೆಯೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ಯುವಜನತೆ ಹೇಗೆ ಹಾದಿ ತಪ್ಪುತ್ತಿದೆ ಮತ್ತು ಮುಂದೆ ಅದರ ಪರಿಣಾಮಗಳೇನಾಗುತ್ತವೆ ಎಂಬುದನ್ನು ಥ್ರಿಲ್ಲರ್ ಸಸ್ಪೆನ್ಸ್ ಹಾರರ್ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ಅಮಿತ್.

ಈ ಎಲ್ಲಾ ನಾಲ್ಕು ಚಿತ್ರಗಳಿಗೂ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

‘ಪೈಲ್ವಾನ್’ ಸಿನಿಮಾ: ಬಯಲಾಯ್ತು ಸುನೀಲ್ ಶೆಟ್ಟಿ ಪಾತ್ರ

#thisweek #Realsed #kannada #movies, #list #balkaninews

Tags