ಸುದ್ದಿಗಳು

‘ಮಿಸ್ಟರ್ ಅಂಡ್ ಮಿಸಸ್ ತಿಮ್ಮೇಗೌಡ’ ಸಿನಿಮಾ ವಿಶೇಷ ಏನು ಗೊತ್ತಾ..?

೫೦ ವರ್ಷದ ವಯಸ್ಸಿನ ಆಸುಪಾಸಿನಲ್ಲಿರುವವರ ಜೀವನ ಕತೆ..

 ಕಿಶೋರ್ ಹಾಗೂ ತಾರಾ ಸಿನಿಮಾದಲ್ಲಿ ಗಂಡ ಹೆಂಡತಿ ಪಾತ್ರ ಮಾಡುತ್ತಿದ್ದಾರೆ.

ಬೆಂಗಳೂರು,ಆ.30: ಕನ್ನಡ ಸಿನಿ ರಂಗದಲ್ಲಿ ಹೊಸಬರು ಹಾಗೂ ಹೊಸ ಪ್ರಯತ್ನಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಘಟನೆಯ ಅಥವಾ ನಿಜ ಜೀವನದ ಒಂದು ಎಳೆಯನ್ನ ಇಟ್ಟುಕೊಂಡು ಸಿನಿಮಾ ಮಾಡೋದು ಮೊದಲೇನಲ್ಲ. ಆದರೆ ಈ ಸಿನಿಮಾಗಳು ಕೆಲವೊಮ್ಮೆ ಯಶಸ್ವಿಯಾದರೆ ಮತ್ತೊಂದಿಷ್ಟು ಮಕಾಡೆ ಮಲಗಿರುವ ಉದಾಹರಣೆಗಳು ಕೂಡ ಇವೆ. ಇದೀಗ ಹೊಸದೊಂದು ಪ್ರಯತ್ನ ಮಾಡಲು ‘ಮಿಸ್ಟರ್ ಅಂಡ್ ಮಿಸಸ್ ತಿಮ್ಮೇಗೌಡ’ ಸಿನಿಮಾ ಬರುತ್ತಿದೆ.

ಮಿಸ್ಟರ್ ಅಂಡ್ ಮಿಸಸ್ ತಿಮ್ಮೇಗೌಡ’

ಹೌದು, ‘ಮಿಸ್ಟರ್ ಅಂಡ್ ಮಿಸಸ್ ತಿಮ್ಮೇಗೌಡ’ ಸಿನಿಮಾ ಕೂಡ ಅಂತಹ ಹೊಸದೊಂದು ಪ್ರಯತ್ನ ಮಾಡುತ್ತಿದೆ. ೫೦ ವರ್ಷದ ವಯಸ್ಸಿನ ಆಸುಪಾಸಿನಲ್ಲಿರುವವರು ಜೀವನ ಹೇಗೆ, ಅವರ ತಳಮಳಗಳೇನು, ಅವರಿಗೆ ಆಗುವಂತಹ ಎಲ್ಲಾ ರೀತಿಯ ವಿಚಾರಗಳನ್ನ ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆಯಂತೆ. ಇನ್ನೊಂದು ವಿಷೇಶ ಏನಪ್ಪಾ ಅಂದರೆ ಈ ಸಿನಿಮಾದಲ್ಲಿ ಎರಡು ಮುಖ್ಯ ಪಾತ್ರಗಳಿವೆ. ಕಿಶೋರ್ ಹಾಗೂ ತಾರಾ ಈ ಸಿನಿಮಾದಲ್ಲಿ ಗಂಡ ಹೆಂಡತಿ ಪಾತ್ರ ಮಾಡುತ್ತಿದ್ದಾರೆ. ಇವರ ಸುತ್ತ ಸುತ್ತುವುದೇ ಸಿನಿಮಾದ ಒಂದು ಸಾಲು ಕತೆ..

 ಪ್ರಶಾಂತ್ಗೆ ಇದು ಚೊಚ್ಚಲ ಸಿನಿಮಾ

‘ಇನ್ನು ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿರುವುದು ಪ್ರಶಂತ್. ಪ್ರಶಾಂತ್‌ಗೆ ಇದು ಚೊಚ್ಚಲ ಸಿನಿಮಾ. ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿರೋ ಅನುಭವವಿರುವ ಪ್ರಶಾಂತ್ ಸದ್ಯ ನಿರ್ದೇಶಕರಾಗಿ ಮೊದಲ ಸಿನಿಮಾ ಮಾಡುತ್ತಿದ್ದಾರೆ. ನಿರ್ಮಾಪಕ ಕೆ. ಸೂರಿ ದಿನನಿತ್ಯ ನಡೆಯುವ ವಿಚಾರಗಳನ್ನು ಇದೀಗ ತೆರೆ ಮೇಲೆ ತರಲು ರೆಡಿಯಾಗಿದ್ದಾರೆ ಪ್ರಶಾಂತ್.

 

Tags

Related Articles