ಸುದ್ದಿಗಳು

ವೈರಲ್ ಆದ ಮಿಸ್ಟರ್ ಚೀಟರ್ ರಾಮಾಚಾರಿ ಸಿನಿಮಾದ ಹಾಡು

ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲು ಒಂದೊಂದು ರೀತಿಯ ಪ್ರತಿಭೆಗಳಿರುವ ಹಲವಾರು ಜನರಿರುತ್ತಾರೆ. ಅವರ ಪ್ರತಿಭೆಗಳು ಹೊರಜಗತ್ತಿಗೆ ಗೊತ್ತಾಗಬೇಕಾದರೆ ಒಂದು ಉತ್ತಮ ವೇದಿಕೆ ಸಿಗಬೇಕು.ಅದು ಎಲ್ಲರಿಗೂ ಸಿಗುತ್ತೆ ಎಂದು ಹೇಳಲಾಗುವುದಿಲ್ಲ.ಅದೇ ರೀತಿ ಉತ್ತರ ಕರ್ನಾಟಕದಲ್ಲಿರುವ ಹಲವಾರು ಪ್ರತಿಭೆಗಳು ಸೇರಿ ಮಿಸ್ಟರ್ ಚೀಟರ್ ರಾಮಚಾರಿ ಅನ್ನೊ ಸಿನಿಮಾನ ನಿರ್ಮಾಣ ಮಾಡಿ ಇತ್ತೀಚೆಗೆ ಅದರಲ್ಲಿನ ಒಂದು ಹಾಡನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು ಈಗ ಅದು ಎಲ್ಲಾ ಕಡೆ ವೈರಲ್ ಆಗಿದೆ.

ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ ಇದರಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಉತ್ತರ ಕರ್ನಾಟಕದ ಸುತ್ತಾಮುತ್ತಾ ಇರುವ ಸ್ಥಳಿಯ ಪ್ರತಿಭೆಗಳೇ.ಹಾಗು ಈ ಸಿನಿಮಾಕ್ಕೆ ಬಂಡವಾಳ ಹಾಕಿ ಇಂತಹ ಹಲವಾರು ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವ ನಿರ್ಮಾಪಕರ ಹೆಸರು ಪ್ರವೀಣ ಕುಲಕರ್ಣಿ ದಂಪತಿಗಳು. ಇವರು ಮೂಲತಃ ಸಾಫ್ಟ್ ವೇರ್ ಇಂಜೀನೀಯರ್ಸ್ ಗಳು. ಇವರು ಕೂಡ ಉತ್ತರ ಕರ್ನಾಟಕ ಕಡೆಯವರಾಗಿದ್ದರಿಂದ ತಮ್ಮ ಊರಿನ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟು ಅವರುಗಳು ಕೂಡ ಏನಾದರೂ ಸಾಧನೆ ಮಾಡಲಿ ಅನ್ನುವ ಉದ್ದೇಶದಿಂದ ಈ ಸಿನಿಮಾಕ್ಕೆ ಬಂಡವಾಳ ಹಾಕಿರುವುದು ಅವರಿಗೆ ಸಿನಿಮಾ ಮೇಲೆ ಹಾಗು ತಮ್ಮ ಊರಿನ ಪ್ರತಿಭೆಗಳ ಮೇಲಿರುವ ಪ್ರೀತಿ,ಅಭಿಮಾನಗಳನ್ನು ತೋರಿಸುತ್ತದೆ. ಇಂತಹ ನಿರ್ಮಾಪಕರುಗಳು ಇನ್ನು ಹೆಚ್ಚು ಹೆಚ್ಚು ಚಿತ್ರರಂಗಕ್ಕೆ ಬರಬೇಕೆನ್ನುವುದೇ ನಮ್ಮೆಲ್ಲರ ಆಶಯ.

ಈ ಚಿತ್ರವನ್ನು ರಾಮಚಾರಿ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡಿದ್ದು ಇದರಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಕೂಡ ಹೊಸಬರೇ. ನಿರ್ದೇಶಕರು ಉಪೇಂದ್ರರವರ ಪಕ್ಕಾ ಅಭಿಮಾನಿಯಾಗಿದ್ದು ಅವರ ಚಿತ್ರಗಳೇ ತಾವು ಸಿನಿಮಾ ಮಾಡಲು ಪ್ರೇರಣೆ ಎಂದು ಹೇಳಿದ್ದಾರೆ.

ಇವರ ಸಿನಿಮಾದಲ್ಲೂ ಉಪೇಂದ್ರರವರ ಸಿನಿಮಾಗಳ ರೀತಿಯೇ ನಿರೂಪಣಾ ಶೈಲಿ ಇರುತ್ತೆ ಎಂದು ನಿರ್ದೇಶಕರು ಹೇಳುತ್ತಾರೆ.ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಚಿತ್ರತಂಡದವರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಇದೇ ರೀತಿ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಲಿ ,ಈ ತರದ ಹೊಸ ಪ್ರತಿಭೆಗಳು,ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಹೆಚ್ಚೆಚ್ಚು ಬರಲಿ ಎಂಬುದೇ ನಮ್ಮ ಆಶಯ.

Tags

Related Articles

Leave a Reply

Your email address will not be published. Required fields are marked *