ಸುದ್ದಿಗಳು

ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ತಪ್ಪಲ್ಲ, ಅದನ್ನು ಚುನಾವಣೆಗೆ ಬಳಸಿಕೊಂಡಿದ್ದು ತಪ್ಪು – ಮುಖ್ಯಮಂತ್ರಿ ಚಂದ್ರು

ಎಲ್ಲರಿಗೂ ತಿಳಿದಿರುವಂತೆ ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ಎನು ಮಾಡಿಲ್ಲ ಎನು ಮಾಡಿಲ್ಲ ಅಂತಾ ಬಿಜೆಪಿ ಹೇಳುತ್ತಿದೆ.

ದೇಶವನ್ನು ಹಿಂದು ರಾಷ್ಟ್ರ ಅಂತಾ ಕರೆಯಲು ಸಾದ್ಯವಿಲ್ಲ. ಭಾರತ ದೇಶದ ಎಲ್ಲಾ ವರ್ಗದ ಜನರಿಗೆ ಸೇರಿದ್ದು. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೆನೆ ಅಂತಾ ಬಿಜೆಪಿ ಅಧಿಕಾರ ಬಂದಿತ್ತು ಆದರೆ ಭ್ರಷ್ಟಾಚಾರ ನಿರ್ಮೂಲನೆ ಆಗಿಲ್ಲ

ಬಿಜೆಪಿ ಕಾಂಗ್ರೆಸ್ ಮುಕ್ತ ದೇಶ ಕಟ್ಟುತ್ತೆನೆ ಅಂತಾ ಹೇಳುತ್ತಾರೆ ನಾವು ಕೋಮವಾದ ಮುಕ್ತ ದೇಶ ಕಟ್ಟೋಣ. ದೇಶದಲ್ಲಿ ಅತಿ ಸುಳ್ಳು ಹೇಳುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ವ್ಯಕ್ತಿ ಬಗ್ಗೆ ಚಿಂತನೆ ಮಾಡುವುದರ ಬದಲು ಸಾಧನೆ ಬಗ್ಗೆ ಚಿಂತನೆ ಮಾಡಿ ಮತ ಚಲಾಯಿಸಿ. ಕಾಂಗ್ರೆಸ್ ಪಕ್ಷ ಎನು ಮಾಡದೆ ಅಂತಾ ಕೇಳುತ್ತಾರಲ್ಲ ಭಾರತವನ್ನು ಉಳಿಸದೆ ಇದ್ದಿದ್ದರೆ ಮೋದಿ ಪ್ರಧಾನಿ ಹೇಗೆ ಆಗುತ್ತಿದ್ದರು.

ಸರ್ಜಿಕಲ್ ಸ್ಟೈಕ್ ಮಾಡಿದ್ದು ತಪ್ಪಲ್ಲ ಆದರೆ ಅದನ್ನು ಚುನಾವಣೆಗೆ ಬಳಿಸಿಕೊಂಡಿದ್ದು ತಪ್ಪು. ಐಟಿ ರೇಡ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಮನೆ ಮೇಲೆ ಮಾತ್ರ ಮಾಡುತ್ತಿದ್ದಾರೆ ಇದು ತಪ್ಪು. 450 ಕೋಟಿಯಲ್ಲಿ ಕಾಂಗ್ರೆಸ್ ಪಕ್ಷ ಚಂದ್ರಯಾನ ಮಾಡಿದೆ ಆದರೆ ಎರಡೂ ಸಾವಿರ ಕೋಟಿಯಲ್ಲಿ ಪ್ರಧಾನಿ ಐವತ್ತು ದೇಶ ಸುತ್ತಿದ್ದಾರೆ

ಬಿಜೆಪಿ ಎಲ್ಲವನ್ನೂ ನಾವೇ ಐದು ವರ್ಷಗಳ ಕಾಲ ಮಾಡಿದ್ದೆವೆ ಅಂತಾ ಹೇಳಿಕೊಂಡ ಹೋಗುತ್ತಿದ್ದಾರೆ. ವಾಜಪೇಯಿ ಬಗ್ಗೆ ಅಪಾರ ಗೌರವ ಇದೆ ಆದರೆ ನೀವು ಅವರ ಸಾಧನೆಯನ್ನು ಮರೆತುಬಿಟ್ಟಿರಾ. ರಾಮ ಮಂದಿರ ಕಟ್ಟಲು ನಮ್ಮ ವಿರೋಧ ಇಲ್ಲ. ಆದರೆ ಚುನಾವಣೆ ಸಂಧರ್ಭದಲ್ಲಿ ಮಾತ್ರ ರಾಮ ಮಂದಿರ ನೆನಪಾಗುತ್ತದೆ ಬಿಜೆಪಿಗೆ.’ ಹೀಗೆ ಹಾವೇರಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಚಿತ್ರ ನಟ ಮುಖ್ಯಮಂತ್ರಿ ಚಂದ್ರು ಹೇಳಿಕೆ ನೀಡಿದ್ದಾರೆ.

ಸಿಎಂ ಕುಮಾರಣ್ಣ ಮತ್ತು ಮಗ ನಿಖಿಲ್ ಬಗ್ಗೆ ದರ್ಶನ್ ಅಭಿಮಾನಿಗಳ ಮಾತು

#mukhyamantrichandru, #political, #news, #balkanews

Tags