ಸುದ್ದಿಗಳು

ದಿ ವಿಲನ್’ ಗೆ ಮಲ್ಟಿಪ್ಲೆಕ್ಸ್ ತೊಂದರೆಯೇ? ಗರಂ ಆದ ಪ್ರೇಮ್!!

ಪ್ರೇಮ್ ಗೆ ಕಾಡಿದೆಯಾ ಮಲ್ಟಿಪ್ಲೆಕ್ಸ್ ಚಿಂತೆ?

ಬಹುನಿರೀಕ್ಷಿತ ಸಿನಿಮಾ  ‘ದಿ ವಿಲನ್’ ಸಿನಿಮಾ ಅಕ್ಟೋಬರ್ 18ಕ್ಕೆ  ಅಂದರೆ ನಾಳೆ ಸಾವಿರಾರು ಸ್ಕ್ರೀನ್ ಗಳಲ್ಲಿ  ತೆರೆಗಪ್ಪಳಿಸುತ್ತಿರುವ ‘ದಿ ವಿಲನ್ ‘ಸಿನಿಮಾನ ಸ್ವಾಗತಿಸೋಕೆ ಭರ್ಜರಿ ತಯಾರಿ ನಡೀತಿದೆ.. ಪ್ರೇಕ್ಷಕರನ್ನ ಥಿಯೇಟರ್ ಗೆ ಸ್ವಾಗತಿಸೋಕೆ ಶಿವಣ್ಣ, ಸುದೀಪ್ರ ಅದ್ದೂರಿ ಕಟೌಟ್ ಗಳು ನಿರ್ಮಾಣವಾಗಿದೆ…

Image result for multiplex the villain kannada

ಹೈಪ್ ಕ್ರಿಯೇಟ್ ಮಾಡಿದೆದಿ ವಿಲನ್

‘ದಿ ವಿಲನ್’ಸಿನಿಮಾ ಕನ್ನಡ ಚಿತ್ರೋದ್ಯಮದ ದಿಕ್ಕು ದೆಸೆ ಬದಲಾಯಿಸುವತ್ತ ಮುಂದಾಗಿದೆ. ಸಿನಿಮಾ ಟಿಕೆಟ್ ದರ ಏರಿಸಲು ನಿರ್ಮಾಪಕರು ನಿರ್ಧರಿಸಿದ್ದರು, ಬಿಗ್ ಬಜೆಟ್ ಚಿತ್ರವಾದ ‘ದಿ ವಿಲನ್’ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಿಸಿ, ಪ್ರೇಮ್ ನಿರ್ದೇಶನ ಮಾಡಿದ್ದಾರೆ.

Image result for the villain

ನೀವೂ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ನೋಡಬೇಕಾ?

ಈಗಾಗಲೇ ಅಭಿಮಾನಿಗಳು ಕಣ್ಣು ಬಿಟ್ಟು ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ.

‘ದಿ ವಿಲನ್’ ನನ್ನು ಥಿಯೇಟರ್ ಗಳ ಬಾಲ್ಕನಿಯಲ್ಲಿ ನೋಡಬೇಕಾದರೇ ಎಷ್ಟು ಪಾವತಿ ಮಾಡಬೇಕು ಗೊತ್ತಾ? ಕೇಳಿದ್ರೆ ಒಮ್ಮೆ ಧಂಗಾಗಿ ಬಿಡುತ್ತೆ.. ನೀವು ರೂ200 /- ಪಾವತಿಸಿದರೆ ನಿಮಗೆ ಬಾಲ್ಕನಿ ನಲ್ಲಿ ನೋಡಬಹುದು, ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ರೂ500/- ನೀಡಬೇಕಾಗುತ್ತದೆ.

Image result for multiplexಟಿಕೆಟ್ ದರ ದುಬಾರಿ

 

ಹಿಂದಿ, ತೆಲುಗು ತಮಿಳು ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಒಂದು ಸಾವಿರ ರೂಪಾಯಿ ತೆರಲೂ ಸಿದ್ದರಿರುತ್ತಾರೆ..! ಹಾಗಾದರೆ ದುಪ್ಪಟ ಹಣ ಕೊಟ್ಟು ಕನ್ನಡ ಸಿನಿಮಾ ನೋಡಲು ಮಾತ್ರ ಯಾಕೆ ಹಿಂಜರಿತಾರೆ ಎಂಬುದೇ ಪ್ರೇಮ್ ಅವರ ಮಾತು. ನಿರ್ಮಾಪಕರನ್ನು ಗಮನದಲ್ಲಿರಿಸಿಕೊಂಡು ಅತ್ಯಲ್ಪ ಪ್ರಮಾಣದಲ್ಲಿ ಸಿನಿಮಾ ಟಿಕೆಟ್ ದರ ಏರಿಸಿದ್ದೇವೆ, ನಮ್ಮ ಪ್ರೇಕ್ಷಕರು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಿರ್ದೇಶಕ ಪ್ರೇಮ್  ಈ ಹಿಂದೆ ಹೇಳಿದ್ದರು..

Image result for film tickets

ಮಲ್ಟಿ ಪ್ಲೆಕ್ಸ್ ವಿರುದ್ದ ಪ್ರೇಮ್ ಗರಂ

ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ನಿಗದಿಪಡಿಸಲಾಗಿರುವ ಟಿಕೆಟ್ ದರದ ಶೇ. 50 ರಷ್ಟು ಭಾಗವನ್ನು ನಿರ್ಮಾಪಕರಿಗೆ ನೀಡಬೇಕೆಂದು ದಿ ವಿಲನ್ ತಂಡ ಒತ್ತಾಯಿಸಿತ್ತು. ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರಶ್ನೆ ಎತ್ತಿದ್ದರು.

ಸಿನಿಮಾ ಪ್ರದರ್ಶನದ ವಿಚಾರದಲ್ಲಿ ಮಲ್ಟಿಪ್ಲೆಕ್ಸ್ ಗಳು ಕನ್ನಡಿಗರಿಗೊಂದು ಹಾಗೂ ಪರಭಾಷಿಕರಿಗೊಂದು ನೀತಿ ಅನುಸರಿಸುತ್ತಿರುವುದಕ್ಕೆ ಪ್ರೇಮ್ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಮಸ್ಯೆ ಬಗೆಹರಿಸುವಂತೆ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದರು..

Image result for prem director

ಮಲ್ಟಿ ಪ್ಲೆಕ್ಸ್ ವಿರುದ್ಧ ಪ್ರೇಮ್ ಟ್ವೀಟ್

“ಚಿತ್ರದ ಪ್ರದರ್ಶನದ ಪರ್ಸೆಂಟೇಜ್‌ ವಿಚಾರದಲ್ಲಿ, ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ  ಕಟ್ತಿರೋ ಮಲ್ಟಿಪ್ಲೆಕ್ಸ್‌ಗಳ ಮಹಾಮೋಸಕ್ಕೆ ನನ್ನ ಧಿಕ್ಕಾರ. ಈ ಕುರಿತು ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗ್ಲಿಲ್ಲ. ಉದ್ಯಮದ ಒಳಿತಿಗಾಗಿ ಮಂಡಳಿ ಇರುವುದೇ ಆದರೆ ದಯವಿಟ್ಟು, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ಎಂದು ಆಗ್ರಹಿಸಿದ್ದಾರೆ.

 

Tags