ಸುದ್ದಿಗಳು

ಮಮ್ಮಿ 2 ನಲ್ಲಿ ಮತ್ತೆ ಪ್ರಿಯಾಂಕ!?

ನಟಿ ಪ್ರಿಯಾಂಕ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾ ನೀಡ್ತಾ ಇದ್ದಾರೆ ,  ಸೆಕೆಂಡ್ ಹಾಫ್ ಸಿನಿಮಾ ಶೂಟಿಂಗ್ ಮುಗಿಸಿ ತೆರೆ ಸಿದ್ಧವಾಗಿದೆ. ಇನ್ನು ಮಮ್ಮಿ ನಿರ್ದೇಶನದ ಲೋಹಿತ್ ನಿರ್ದೇಶನದ ಹೌರಾ ಬ್ರಿಡ್ಜ್ ಚಿತ್ರವು ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬಿಜಿಯಾಗಿದೆ. ಈಗ ಮತ್ತೆ  ಪ್ರಿಯಾಂಕಾ ಇನ್ನೋದು ಸಿನಿಮಾದಲ್ಲಿ ಅಭಿನಯಿಸಲು ರೆಡಿಯಾಗಿದ್ದಾರೆ.

ನೀವೆಲ್ಲಾ ಮಮ್ಮಿ ಸಿನಿಮಾ ನೋಡಿದ್ದೀರ ಜತೆಗೆ ಫುಲ್ ಭಯ ಕೂಡ ಪಟ್ಟಿದ್ದೀರ . ಈಗ  ಪ್ರಿಯಾಂಕ ಮತ್ತೆ ಇನ್ನೊಮ್ಮೆ ನಮ್ಮೆನೆಲ್ಲ ಭಯಪಡಿಸಲು ಹಾರರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಮಮ್ಮಿ ಯಾವುದು ಅಂತೀರಾ ಆಗಲೆ ಬಂದಿದೆಯಲ್ಲ ಅಂತ ಯೋಚನೆ ಮಾಡ್ತಾ ಇದ್ದೀರ.  ಹೌದು ಪ್ರಿಯಾಂಕ ಮತ್ತೆ ಮಮ್ಮಿ 2 ನಲ್ಲಿ ಅಭಿನಯಿಸುತ್ತಿದ್ದಾರೆ. ನಮ್ಮನೆಲ್ಲಾ ಮತ್ತೊಮ್ಮೆ ಭಯಪಡಿಸಲು ಬರ್ತಾ ಇದ್ದಾರೆ ಎನ್ನಲಾಗುತ್ತಿದೆ.

ಈ ಸಿನಿಮಾಗೆ ಮತ್ತೆ ಲೋಹಿತ್ ಆ್ಯಕ್ಷನ್ ಹೇಳ್ತಾ ಇದ್ದಾರೆ.  ಮಮ್ಮಿ ಮತ್ತು ಹೌರಾಬ್ರಿಜ್ಡ್ ಬಳಿಕ ಮೂರನೇ ಬಾರಿಗೆ ಲೋಹಿತ್ ಮತ್ತೆ ಪ್ರಿಯಾಂಕಗೆ ನಿರ್ದೇಶನ ಮಾಡ್ತಾ ಇದ್ದಾರೆ. ಚಿತ್ರತಂಡ ಇನ್ನು ಮಮ್ಮಿ 2 ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮಮ್ಮಿ 2, ಮಮ್ಮಿ ಸಿನಿಮಾದ ಮುಂದುವರೆದ ಕಥೆಯ ಅಥವಾ ಬೇರೆಯ ಕಥೆಯೋ ಎಂದು ಇನ್ನು ತಿಳಿದಿಲ್ಲ .

ಸದ್ಯ ಪ್ರಿಯಾಂಕಾ-ಲೊಹೀತ್ ಹೌರಾ ಬ್ರಿಡ್ಜ್ ಸಿನಿಮಾ ಕೆಲಸದಲ್ಲಿ ಬಿಜಿಯಾಗಿದ್ದು, ಈ ಸಿನಿಮಾದ ಶೂಟಿಂಗ್ ಕೊಲ್ಕತ್ತದಲ್ಲಿ ಮಾಡಿರುವುದು ವಿಶೇಷ. ಇನ್ನೊಂದು ವಿಶೇಷ ಅಂದರೆ ಇದೇ ಸಿನಿಮಾ ಮೂಲಕ ಉಪೇಂದ್ರ-ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯಾ ಉಪೇಂದ್ರ ಸ್ಯಾಂಡಲ್ವುಡ್‌ ಗೆ ಬಾಲನಟಿಯಾಗಿ ಎಂಟ್ರಿ ನೀಡಿದ್ದಾರೆ .

ಹೌರಾ ಬ್ರಿಡ್ಜ್ ಸಿನಿಮಾ  ಸಸ್ಪೆನ್ಸ್ ಸಿನಿಮಾವಾಗಿದ್ದು, ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 

Tags