ಸುದ್ದಿಗಳು

‘ಮುಂದಿನ ಬದಲಾವಣೆ’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಮತ್ತೊಂದು ಹೊಸಬರ ಚಿತ್ರತಂಡ

ಬೆಂಗಳೂರು, ಸ.11: ಚಂದನವನದಲ್ಲೀಗ ಹೊಸಬರದೇ ಕಲರವ. ಅದರಲ್ಲೂ ವಿಭಿನ್ನ ಶೀರ್ಷಿಕೆಗಳನ್ನು ಹೊತ್ತು ಬರುತ್ತಿರುವ ಪ್ರತಿಭಾವಂತ ಯುವಕರು, ತಮ್ಮದೇ ಪ್ರಯೋಗಗಳ ಮೂಲಕ ಗಟ್ಟಿ ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಆಕರ್ಷಕ ಶೀರ್ಷಿಕೆವುಳ್ಳ ಚಿತ್ರಗಳೇ ಗಮನ ಸೆಳೆದಿವೆ.

ಮುಂದಿನ ಬದಲಾವಣೆ

ಸಾಮಾಜ್ಯವಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಪೋಸ್ಟರ್ ಗಳನ್ನು ‘ಮುಂದಿನ ಬದಲಾವಣೆ’ ಎಂದು ಅಂಟಿಸುವ ಮೂಲಕ ನೋಡುಗರಲ್ಲಿ ಕುತೂಹಲ ಮೂಡಿಸುತ್ತಾರೆ. ಆ ನಿಟ್ಟಿನಲ್ಲಿ ಇಲ್ಲೊಂದು ತಂಡ ತಮ್ಮ ಚಿತ್ರಕ್ಕೆ ‘ಮುಂದಿನ ಬದಲಾವಣೆ’ ಎಂದು ಹೆಸರನ್ನು ಇಟ್ಟುಕೊಂಡು ಕುತೂಹಲ ಮೂಡಿಸಿದ್ದಾರೆ.

ಧ್ವನಿ ಸುರುಳಿ ಬಿಡುಗಡೆ

ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮ ಇತ್ತಿಚೆಗಷ್ಟೇ ನಗರದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನೆರವೇರಿದೆ. ನಟರಾದ ಅನಿರುದ್ದ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸಬರ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರವೀಣ್ ಭೂಷಣ್ ಪಿ ಎಸ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಫಣಿಭೂಷಣ್ ನಿರ್ಮಿಸುತ್ತಿದ್ದಾರೆ.

ಹಾಸ್ಯ ಪ್ರಧಾನ ಚಿತ್ರ

ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರವು ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಸದ್ಯದಲ್ಲಿಯೇ ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ. ಚಿತ್ರದಲ್ಲಿ ಪ್ರವೀಣ್ ಭೂಷಣ್, ಸಂಗೀತಾ, ಸತೀಶ್, ಪಂಚಗೌರಿ, ಆರ್ಯನ, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಕೋಟಿಶ್ವರ್ ಛಾಯಾಗ್ರಹಣ ಚಿತ್ರಕ್ಕಿದೆ. ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ.

Tags