ಸುದ್ದಿಗಳು

ಸ್ಪೋಟಕದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ..!!!

ಬೆಂಗಳೂರು.ಮೇ.19: ಇವತ್ತು ಕಾಂಗ್ರೆಸ್ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರ ಮನೆ ಬಳಿತ ಸ್ಪೋಟವಾಗಿದೆ. ಇದರಲ್ಲಿ ಅವರ ಮನೆಯ ಕೆಲಸಗಾರ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

“ಕೆಮಿಕಲ್ ರಿಯಾಕ್ಷನ್ ಸ್ಪೋಟಕ್ಕೆ ಕಾರಣ. ಜೆ. ಪಿ ಪಾರ್ಕ್ ನಲ್ಲಿ ಪ್ರತಿಮೆಗಳ ನಿರ್ಮಾಣಕ್ಕೆ ತಂದಿದ್ದ ಕೆಮಿಕಲ್ ತರಲಾಗಿತ್ತು. ಇದು ಫೈಬರ್ ಪ್ರತಿಮೆ ಬೆಂಡ್ ಮಾಡಲು ಬಳಸುವ ಕೆಮಿಕಲ್. ಕೆಲಸ ಮುಗಿದ ಮೇಲೆ ಉಳಿದ ಕೆಮಿಕಲ್ ಕ್ಯಾನ್ ಬಿಸಾಡಲಾಗಿತ್ತು. ಆ ಕ್ಯಾನ್ ಅನ್ನು ವೆಂಕಟೇಶ್ ತೆಗೆದುಕೊಂಡು ಬಂದಿದ್ದ. ನಂತರ ಮನೆಯ ಬಳಿ ಬಂದು ಏನಿದೆ ಎಂದು ನೋಡಲು ಕ್ಯಾನ್ ಓಪನ್ ಮಾಡಿದ್ದ . ಎಕ್ಪೆರಿ ಮುಗಿದಿದ್ದ ಕೆಮಿಕಲ್ ಕ್ಯಾನ್ ಬ್ಲಾಸ್ಟ್ ಆಗಿದೆ” ಎಂದಿದ್ದಾರೆ.

Image result for munirathna bllast

“ವಿಷಯ ಯಾವುದೇ ಆಗಿರಲಿ, ಮೊದಲನೆದಾಗಿ ನಾವೆಲ್ಲರೂ ಪೊಲೀಸರ ತನಿಖೆ ಏನ್ ಹೇಳುತ್ತೆ ಅದನ್ನು ಪಾಲನೆ ಮಾಡ್ಬೇಕು. ಎಲ್ಲಾ ಕಡೆ ಇಂತಹ ಘಟನೆಗಳು ನಡೆಯುತ್ತವೆ . ನಮ್ಮನಗರದ ಪೊಲೀಸ್ ಕಮೀಷನರ್ ಅವರು ಪ್ರಮಾಣಿಕ ತನಿಖೆ ಮಾಡ್ತಾರೆ . ವೆಂಕಟೇಶ್ ತಂದೆ ನನ್ಬ ತಂದೆ ಬಾಲ್ಯ ಸ್ನೇಹಿತರು. ನಾವು ಕೂಡ ಜೊತೆಯಲ್ಲಿಯೇ ಬೆಳೆದಿರುವುದು. ಅವನಿಗೆ ಹೀಗಾಗಿರೋದು ಬಹಳ ನೋವಿದೆ. ಹಾಗಾಗಿ ಏನೂ ಹೆಚ್ಚಿಗೆ ಮಾತನಾಡಲ್ಲ. ಸಂಪೂರ್ಣ ತನಿಖೆ ಆಗೋವರೆಗು ಕಾಯೋಣ”

“ಇನ್ನು ರಾಜಕಾರಣಿ ಮನೆ ಬಳಿ ಆಗಿದೆ ಅನ್ನೋ ಊಹಾಪೋಹ ಬೇಡ. ಅವರು ನಾವು ಒಂದು ಕುಟುಂಬಕ್ಕಿಂತ ಹೆಚ್ಚು. ಊಹಾಪೋಹಾ ಕಾಲ್ಪನಿಕ ಏನೂ ಬೇಡ. ಘಟನೆಗಳು ನಡೆದ ಮಾತ್ರಕ್ಕೆ ಏನು ಹೇಗೆ ಅಂತ ಪ್ರಶ್ಬೆ ಮಾಡ್ಕೊಂಡು ಕೂರುವುದು ಬೇಡ. ವೆಂಕಟೇಶ್ ಧೋಬಿ ಸಮಾಜದವರು. ರಾತ್ರಿ ಬಂದಿದ್ದು ಲೇಟಾಯ್ತು ಸೌಂಡ್ ಬಂದ ಕೂಡಲೆ ನಾನೇ ಪೊಲೀಸರಿಗೆ ಹೇಳಿದ್ದೆ.’ ಎಂದು ಪ್ರತಿಕ್ರಿಯಿಸಿದ್ದಾರೆ.

Image result for munirathna bllast

ಇನ್ನು ಈ ಸ್ಪೋಟದ ತೀವ್ರತೆ ಹಾಗೂ ಶಬ್ಧಕ್ಕೆ ಸುತ್ತಮುತ್ತಲಿನ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನ ಗಾಬರಿಯಾಗಿದ್ದು, ತಕ್ಷಣ ಸ್ಥಳಕ್ಕೆ ವೈಯ್ಯಾಲಿ ಕಾವಲ್ ಪೋಲೀಸರ ದೌಡಾಯಿಸಿದ್ದಾರೆ. ಹಾಗೆಯೇ ಸ್ಪೋಟದ ಕುರುಹುಗಳಿಗಾಗಿ ಹಿರಿಯ ಅಧಿಕಾರಿಗಳು ಚಿಕ್ಕ ಚಿಕ್ಕ ವಸ್ತುಗಳನ್ನು ಮತ್ತು ಮನೆಯ ಸಿಸಿಟಿಸಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಶಾನ್ವಿ ಫೋಟೋಸ್!

#munirathna, #bom, #spota, #statement, #balkaninews

Tags