ಸುದ್ದಿಗಳು

ಚಂದನವನಕ್ಕೆ ಮತ್ತೆ ಬಂದ ಮುವೈತ್ ಖಾನ್

ತಮ್ಮ ಮಾದಕ ನೃತ್ಯಗಳಿಂದಲೇ ಜನಪ್ರಿಯವಾಗಿರುವ ನಟಿ

ಬೆಂಗಳೂರು, ಸ.12: ಹಲವಾರು ವರ್ಷಗಳ ನಂತರ ಚಂದನವನಕ್ಕೆ ಮರಳಿರುವ ನಟಿ ಮುವೈತ್ ಖಾನ್. ಇವರು ನೃತ್ಯಗಾರ್ತಿಯೂ ಆಗಿದ್ದು ಕನ್ನಡದಲ್ಲಿ ‘ರಾಜಧಾನಿ’,’ಒರಟ-ಐ ಲವ್ ಯೂ’ ಸೇರಿದಂತೆ ಹಲವಾರು ಚಿತ್ರಗಳ ವಿಶೇಷ ಹಾಡಿನಲ್ಲಿ ನರ್ತಿಸಿದ್ದಾರೆ,

ಮಾದಕ ನಟಿ

ತಮ್ಮ ಮಾದಕ ನೃತ್ಯಗಳಿಂದಲೇ ಪ್ರಸಿದ್ಢರಾಗಿರುವ ಮುಮೈತ್ ಖಾನ್, ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬದಲ್ಲಿ ಜನಿಸಿದರು.ಇವರು ಈಗಾಗಲೇ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯಾಗಿದ್ದಾರೆ.ಸಂಜಯ್ ದತ್ ಅಭಿನಯದ `ಮುನ್ನಾಭಾಯಿ ಎಂ.ಬಿ.ಬಿ.ಎಸ್’ ಚಿತ್ರದಲ್ಲಿನ ವಿಶೇಷ ನೃತ್ಯದಿಂದ ಬೆಳಕಿಗೆ ಬಂದ ಇವರು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಇವರು ತೆಲುಗು ಬಿಗ್ ಬಾಸ್ ನ ಮೊದಲ ಸೀಜನ್ ಸ್ಪರ್ಧಿಯಾಗಿದ್ದರು.

ದಂಡುಪಾಳ್ಯಂ 4

ಕೆ. ಟಿ ನಾಯಕ್ ನಿರ್ದೇಶನದ ‘ದಂಡುಪಾಳ್ಯ -4’ ಚಿತ್ರದ ವಿಶೇಷ ಹಾಡಿನಲ್ಲಿ ಮುವೈತ್ ಖಾನ್ ನರ್ತಿಸುತ್ತಿದ್ದಾರೆ. ಈಗಾಗಲೇ ದಂಡುಪಾಳ್ಯ ಸರಣಿಯ ಸಿನಿಮಾಗಳು ತೆರೆಕಂಡಿವೆ. ಇದು ನಾಲ್ಕನೇ ಸರಣಿ ಎನ್ನುವುದು ಮತ್ತೊಂದು ವಿಶೇಷವಾಗಿದ್ದು, ಸುಮನ್ ರಂಗನಾಥ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವು ನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದೆ.

ಮುಂದುವರೆದ ಭಾಗವಲ್ಲ

“ಈಗಾಗಲೇ ದಂಡುಪಾಳ್ಯ ಹೆಸರಿನ ಸರಣಿಗಳು ಮೂರು ಭಾಗಗಳಲ್ಲಿ ಬಂದಿವೆ. ಹಾಗಂತಾ ಈ ಚಿತ್ರವು ಅದರ ಮುಂದುವರೆದ ಭಾಗವಲ್ಲ. ಆದರೆ, ಹಂತಕರು ನಡೆಸಿದ ಸರಣಿ ಕೊಲೆಗಳಲ್ಲಿ ಒಂದು ಭಾಗವನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ” ಎಂದು ಚಿತ್ರತಂಡದವರು ಹೇಳುತ್ತಾರೆ.

Tags