ಸುದ್ದಿಗಳು

ಗಾಯಕಿ ಆದ ನಾಯಕಿ ನಟಿ ಸೋನಲ್..

‘ಸುಗಿತೆ’ ಎನ್ನುವ ಮಧುರವಾದ ಹಾಡು..

ಮಂಗಳೂರು,ಸೆ.08: ತುಳು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಸೋನಲ್ ಮೊಂತೆರೋ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಸಾಲು ಸಾಲು ಚಿತ್ರಗಳಲ್ಲಿ ಆಫರ್ ಗಿಟ್ಟಿಸಿಕೊ‍ಳ್ಳುತ್ತಿದ್ದಾರೆ. ಈ ಮಧ್ಯೆ ಅವರು ಹಿಂದಿಯಲ್ಲಿ ಸಿದ್ಧವಾಗುತ್ತಿರುವ ‘ಸಾಜನ್ ಚಲೇ ಸಸುರಾಲ್ 2’ ಚಿತ್ರದಲ್ಲಿ ನಟಿಸುತ್ತಿದ್ದು, ಅದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ ‘ಪಂಚತಂತ್ರ’ ಚಿತ್ರದಲ್ಲಿ ಸೋನಲ್ ನಟಿಸುತ್ತಿದ್ದಾರೆ.  ಇಷ್ಟೇ ಅಲ್ಲದೆ ಅವರು ಈಗ ತುಳು ಚಿತ್ರಕ್ಕೆ ಹಾಡಿದ್ದಾರೆ ಹೌದು!! ಸೋನಲ್ ನಟನೆ ಮಾತ್ರವಲ್ಲದೆ ಈಗ ಗಾಯಕಿ ಕೂಡ ಹೌದು. ತುಳು ಚಿತ್ರವಾದ ಮೈ ನೇಮ್ ಈಸ್ ಅಣ್ಣಪ್ಪ ಚಿತ್ರಕ್ಕೆ ಸುಶ್ರಾವ್ಯವಾದ ಕಂಠದಿಂದ ಹಾಡಿದ್ದಲ್ಲದೆ ಈ ಹಾಡು ಎಲ್ಲರಿಗೂ ಬಹಳ ಇಷ್ಟವಾಗಿದೆ.. ‘ಸುಗಿತೆ’ ಎನ್ನುವ ಮಧುರವಾದ ಹಾಡು ಒಮ್ಮೆ ನೀವು ಕೇಳಲೇಬೇಕು..

WhatsApp Audio 2018-09-08 at 1.14.16 PM

Image result for sonal monteiro

 ಮೈ ನೇಮ್ ಈಸ್ ಅಣ್ಣಪ್ಪ

ಹೌದು. ತುಳು ಭಾಷೆಯಲ್ಲಿ ಹೊಸದಾಗಿ ‘ಮೈ ನೇಮ್ ಈಸ್ ಅಣ್ಣಪ್ಪ’ ಎಂಬ ಹೊಸ ಸಿನೆಮಾ ಬರುತ್ತಿದೆ. ಕಾಮಿಡಿ ಪಾತ್ರಗಳಲ್ಲಿ ನಟಿಸುತ್ತಿದ್ದ ಮಂಜು ರೈ ಮುಳೂರು ಮೊದಲ ಬಾರಿಗೆ ಈ ಸಿನೆಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಶುಭಾ ಎಂಬುವವರು ಈ ಸಿನೆಮಾದ ಹೀರೋಯಿನ್. ಇವರು ಕೆನಡಾದಲ್ಲಿ ನೆಲೆಸಿರುವ ಭಾರತೀಯ ನಿವಾಸಿ. ಹಾಗೆಯೇ ಸ್ಯಾಂಡಲ್ ವುಡ್ ನ ಹಿರಿಯ ಕಾಮಿಡಿ ನಟ ರಂಗಾಯಣ ರಘು ಈ ಸಿನೆಮಾದಲ್ಲಿ ನಟಿಸಿರುವುದು ವಿಶೇಷ.

ಬಹು ದೊಡ್ಡ ತಾರಾಗಣ

ಈ ಚಿತ್ರವನ್ನ ಮಯೂರ್ ಆರ್.ಶೆಟ್ಟಿ ನಿರ್ದೇಶಿಸಿದ್ದಾರೆ. ಇವರು ಈ ಹಿಂದೆ ‘ಪಿಲಿಬೈಲ್ ಯಮುನಕ್ಕ’ ಎಂಬ ಹಿಟ್ ಸಿನೆಮಾ ನೀಡಿದವರು.‌ ಈ ಚಿತ್ರದಲ್ಲಿ ಮಯೂರ್ ಜೊತೆಗೆ ಕೆಲಸ ಮಾಡಿದ್ದ ಕಿಶೋರ್ ಶೆಟ್ಟಿ ಈ ಹೊಸ ಸಿನೆಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಯೂರ್ ಶೆಟ್ಟಿ ಹಾಡು ಕೂಡಾ ಬರೆದಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ.‌ಹಾಗೆಯೇ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ ಹಾಗೂ ದಿನೇಶ್ ಅಮ್ಮಣ್ಣಾಯ ಈ ಸಿನೆಮಾಕ್ಕೆ ಹಾಡನ್ನ ಹಾಡಿದ್ದಾರೆ.

ಈ ಹೊಸ ಸಿನೆಮಾಗೆ ವಿಕ್ರಮ್ ರೈ ಎಂಬುವವರು ಛಾಯಾಗ್ರಹಣ ಮಾಡಿದ್ದಾರೆ. ‘ಮೈ ನೇಮ್ ಈಸ್ ಅಣ್ಣಪ್ಪ’ ಚಿತ್ರವನ್ನು ಶ್ರೀದುರ್ಗಾ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನೆಮಾದ ಚಿತ್ರೀಕರಣ ಮುಗಿದಿದ್ದು ಮಂಗಳೂರು ಹೊರವಲಯದಲ್ಲಿ ಶೂಟಿಂಗ್ ಮಾಡಲಾಗಿತ್ತು. ಶೀಘ್ರವೇ ಈ ಸಿನೆಮಾ ರಿಲೀಸ್ ಆಗಲು ತಯಾರಾಗಿದೆ.

 

Tags