ಸುದ್ದಿಗಳು

ನನ್ನ ಮದುವೆ ನಡೆದರೆ ಅದು ತಿರುಪತಿಯಲ್ಲೇ ಎಂದ ಜಾಹ್ನವಿ

‘ಧಡಕ್’ ನಟಿ ಮತ್ತು ದಿವಂಗತ ಶ್ರೀದೇವಿಯವರ ಪುತ್ರಿ ಜಾಹ್ನವಿ ಕಪೂರ್ ಪವಿತ್ರ ಪಟ್ಟಣವಾದ ತಿರುಪತಿಯ ಬಗ್ಗೆ ಭಾವುಕರಾದಂತೆ ಕಾಣುತ್ತಿದೆ.

ಯಾಕೆಂದರೆ ಜಾಹ್ನವಿ ಮಸ್ಸಿನಲ್ಲಿ ಮದುವೆ ವಿಚಾರ ಬಂದಾಗಲೆಲ್ಲಾ ಈ ವಿಶ್ವಪ್ರಸಿದ್ಧ ಪಟ್ಟಣದಲ್ಲಿ ಮದುವೆಯಾಗಲು ಮನಸ್ಸು ಹಾತೊರೆಯುತ್ತದೆಯಂತೆ.

“ನನ್ನ ಮದುವೆಯಾದರೆ ಅದು ಸಾಂಪ್ರದಾಯಿಕವಾಗಿ ತಿರುಪತಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಾನು ಕಾಂಜೀವರಂ ಸೀರೆಯನ್ನು ಧರಿಸಲು ಇಷ್ಟಪಡುತ್ತೇನೆ”ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ ಜಾಹ್ನವಿ.

ಏತನ್ಮಧ್ಯೆ, ಅವರು ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದು, ತಂದೆ ಬೋನಿ ಕಪೂರ್ ಇತ್ತೀಚೆಗೆ ಹೇಳಿದಂತೆ ಜಾಹ್ನವಿ ಸದ್ಯದಲ್ಲೇ ತೆಲುಗು ಅಥವಾ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗುತ್ತಿದ್ದಾರೆ.

2020ರ ಆರಂಭದಲ್ಲಿ ಸೆಟ್ಟೇರಲಿರುವ ಪುರಿ ಜಗನ್ನಾಥ್ ಅವರ ‘ಫೈಟರ್’ ಎಂಬ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಜಾಹ್ನವಿ ನಟಿಸಲಿದ್ದಾರೆ ಎಂಬ ವದಂತಿಗಳು ಈಗಾಗಲೇ ಹಬ್ಬಿರುವುದನ್ನು ನಾವಿಲ್ಲಿ ಗಮನಿಸಬಹುದು.

ಈ 7 ಫೋಟೋಗಳಲ್ಲಿ ಅನುಪಮಾ ಗೌಡ ಲುಕ್ ಸೂಪರೋ ಸೂಪರ್

#balkaninews #janhvikapoor #wedding #tirupati

Tags