ಸುದ್ದಿಗಳು

ಅ.14ರಂದು ಮೈಸೂರು ದಸರಾ ಏರ್ ಶೋ…

ವಿಜೃಂಭಣೆಯ ಮೈಸೂರು ದಸರಾಗೆ

ಮೈಸೂರು, ಅ.13: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 14ರಂದು ದಸರಾ ಏರ್ ಶೋ ಆಯೋಜಿಸಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಬನ್ನಿಮಂಟಪದಲ್ಲಿ ಏರ್ ಶೋ ನಡೆಯಲಿದೆ. ಏರ್ ಶೋಗೆ ವಿಮಾನಯಾನ ಸಂಸ್ಥೆ ಒಪ್ಪಿಗೆ ನೀಡಿದ್ದು, ಭಾನುವಾರ 11 ಗಂಟೆಗೆ ಬನ್ನಿಮಂಟಪದಲ್ಲಿ ಲೋಹದ ಹಕ್ಕಿಗಳು ಹಾರಾಡಲಿವೆ.

ಏರ್ ಶೋನಲ್ಲಿ ಏರ್ ಫೋರ್ಸ್‍ನ ಎರಡು ಯುದ್ಧ ವಿಮಾನಗಳು ಭಾಗಿಯಾಗಲಿದ್ದು, 1130 ಅಡಿ ಎತ್ತರದಿಂದ ಸ್ಕೈ ಡೈವಿಂಗ್, 1120ಅಡಿ ಎತ್ತರದಿಂದ ಹಗ್ಗದ ಮೂಲಕ ವಿಮಾನ ಇಳಿಯುವ ಪ್ರದರ್ಶನ ನಡೆಸಲಾಗುತ್ತದೆ. ಏರ್ ಶೋ ಹಿನ್ನೆಲೆ ನಾಳೆ 11 ಗಂಟೆಗೆ ಬನ್ನಿಮಂಟಪದಲ್ಲಿ ಏರ್ ಶೋ ರಿಹರ್ಸೆಲ್ ನಡೆಯಲಿದ್ದು, ಏರ್ ಶೋ ಪೂರ್ವ ತಾಲೀಮಿಗೆ ಸೇನೆಯ ಹೆಲಿಕಾಫ್ಟರ್ ಸ್ಥಳ ಪರಿಶೀಲನೆ ನಡೆಸಿತು.ವೈಶಿಷ್ಟ್ಯದಿಂದ ಕೂಡಿದ ದಸರಾ ಏರ್ ಶೋ

ದಸರಾ ಮಹೋತ್ಸವದ ಅಂಗವಾಗಿ ಗುರುವಾರದಂದು ನಗರದ ಬನ್ನಿಮಂಟದಲ್ಲಿ ಪಂಜಿನ ಕವಾಯತು, ಮೈದಾನದಲ್ಲಿ ವಾಯು ಪಡೆಯಿಂದ ವಿವಿಧ ರೀತಿಯ ವೈಮಾನಿಕ ಪ್ರದರ್ಶನ ನಡೆಸಲಾಯಿತು. ಈ ಸಂದರ್ಭದಲ್ಲಿ ಆಕಾಶದಲ್ಲಿ ವಿವಿಧ ರೀತಿಯ ವಿನ್ಯಾಸ, ವೈವಿಧ್ಯಮಯ ಪ್ರದರ್ಶನ ನಡೆಸಿದ ಲೋಹದ ಹಕ್ಕಿಗಳ ಹಾರಾಟ ಜನತೆಯ ಮನರಂಜಿಸಿದವು.ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಿತ್ತಾರ ಮೂಡಿಸುತ್ತ ಸಾವಿರಾರು ಅಡಿ ಎತ್ತರದಿಂದ ಹಾರಿ ಬಂದು ಬಾನಲ್ಲಿ ತಮ್ಮ ಕೈಚಳಕ ತೋರಿದವು. ಪ್ರದರ್ಶನದಲ್ಲಿ ವಾಯುಸೇನೆಯ ವಿಮಾನ, ಹೆಲಿಕಾಪ್ಟರ್ ಗಳು ಅತ್ಯುತ್ತಮ ಪ್ರದರ್ಶನ ತೋರಿ ನೆರೆದಿದ್ದ ಜನರನ್ನು ರಂಜಿಸಿದವು.

ಪ್ರದರ್ಶನದಲ್ಲಿ ಚೇತಕ್ ಹೆಲಿಕ್ಯಾಪ್ಟರ್, ಎಂಐ-8 ಹೆಲಿಕ್ಯಾಪ್ಟರ್ ಮೈದಾನದಲ್ಲಿ ಬಂದು ಪುಷ್ಪದ ಮಳೆಗೆರೆಯುತ್ತಿದ್ದಂತೆ ನೆರೆದಿದ್ದ ಜನತೆ ಚಪ್ಪಾಳೆ ತಟ್ಟಿ ಹರ್ಷೋದ್ಘಾರಗೈದರು. ಬಳಿಕ ಅಣಕು ಯುದ್ಧ ಪ್ರದರ್ಶನ ನಡೆಯಿತು. ಮೈದಾನದಲ್ಲಿ ಬಂದು ನಿಂತ ಎಂಐ-8 ಹೆಲಿಕಾಪ್ಟರ್ ನಿಂದ ಯೋಧರು ಹಗ್ಗದಿಂದ ಇಳಿದು ಮೈದಾನದಲ್ಲಿ ತೆವಳುತ್ತಾ ಅಣಕು ಯುದ್ಧ ಪ್ರದರ್ಶನ ನೀಡಿ ಮತ್ತೆ ಹೆಲಿಕಾಪ್ಟರ್‍ನಿಂದ ಇಳಿ ಬಿಟ್ಟ ಹಗ್ಗ ಹಿಡಿದು ಹಾಗೆಯೇ ಬಾನಂಗಳದಲ್ಲಿ ಪ್ರೇಕ್ಷಕರು ನೋಡ ನೋಡುತ್ತಿದ್ದಂತೆಯೇ ಮರೆಯಾದರು.

Tags