ಸುದ್ದಿಗಳು

ಅಕ್ಟೋಬರ್ 14 ರಂದು ದಸರಾ ಸಾಂಸ್ಕೃತಿಕ ಮೆರವಣಿಗೆ

ಅಂಬಾರಿಯನ್ನು ಹೊರತುಪಡಿಸಿ 2,000ಕ್ಕೂ ಅಧಿಕ ಮಂದಿ ಈ ಮೆರವಣಿಗೆಯಲ್ಲಿ..

ಮೈಸೂರು, ಅ.13: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಂದು ಜಂಬೂಸವಾರಿ ಮಾದರಿಯಲ್ಲೇ ಸಾಂಸ್ಕೃತಿಕ ಮೆರವಣಿಗೆಯನ್ನು ಸಹ ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರತುಪಡಿಸಿ ದಸರಾ ಆನೆಗಳು, 40 ಜಾನಪದ ಕಲಾ ತಂಡಗಳು, ಯುವಸಂಭ್ರಮದಲ್ಲಿ ಭಾಗಿಯಾಗಿದ್ದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕೆಎಸ್ ಆರ್ ಪಿ, ಸಿಎಆರ್, ಅಶ್ವಾರೋಹಿ ಪೊಲೀಸ್ ಪಡೆಗಳು ಸೇರಿದಂತೆ 2,000ಕ್ಕೂ ಅಧಿಕ ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಬಿಗಿ ಪೊಲೀಸ್ ಬಂದೊಬಸ್ತ್ ನಿಂದ ಮೈಸೂರು ದಸರಾ

ಅಹಿತಕರ ಘಟನೆ ನಡೆಯದಂತೆ ನಗರಾದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಟ್ಟು 5,284 ಪೊಲೀಸ್ ಸಿಬ್ಬಂದಿ, 1,600 ಹೋಮ್ ಗಾರ್ಡ್ ಗಳು, 46 ಭದ್ರತಾ ತಪಾಸಣಾ ಪಡೆ, 57 ಪೊಲೀಸ್ ತುಕಡಿ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೇ ಅಂಬಾರಿ ಹೋಗುವ ಸ್ಥಳದಲ್ಲಿ ಹಾಗೂ ಸ್ಮೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ, ಸಿಸಿಟಿಟಿ ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿಯನ್ನು ಅಳವಡಿಸಲಾಗಿದೆ. ಅಲ್ಲದೇ ಜಂಬೂ ಸವಾರಿ ಮೆರವಣಿಗೆ ರಸ್ತೆಯಲ್ಲಿ 76 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ.ಪ್ರವಾಸಿಗರ ಅನುಕೂಲಕ್ಕೆ ನಗರಾದ್ಯಾಂತ 40 ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರಿಗೆ ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಗೊಂದಲಗಳು ಆಗಬಾರದೆಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಟ್ರಾಫಿಕ್ ಮತ್ತು ಪಾರ್ಕಿಂಗ್ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

Tags