ಸುದ್ದಿಗಳು

ಮೈಸೂರಿನಲ್ಲಿ ‘ನಟಸಾರ್ವಭೌಮ’!!

ಮೈಸೂರು,ಫೆ.10:

ನಟ ಪುನೀತ್ ಅಭಿಮಾನಿಗಳ ಜೊತೆ ಮೈಸೂರಿನಲ್ಲಿ ಸಿನಿಮಾ ನೋಡಿದ್ದಾರೆ.

ನಟಸಾರ್ವಭೌಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಪುನೀತ್ ರಾಜ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದ್ದಾರೆ. ಒಂದೊಂದು ದೃಶ್ಯಗಳು ಕೂಡ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿರೋದಂತು ಸತ್ಯ. ಅಪ್ಉ ನಟನೆ, ಡಾನ್ಸ್ ಗೆ ಮನಸೋಲದೇ ಇರೋವ್ರಿಲ್ಲ. ಇದೀಗ ಸಿನಿಮಾ ಯಶಸ್ವಿ ಪ್ರದರ್ಶನ ಬೆನ್ನಲ್ಲೇ ಸಿನಿಮಾ ತಂಡ ರಾಜ್ಯ ಪ್ರವಾಸ ಮಾಡುತ್ತಿದೆ.

 ಮೈಸೂರಿನಲ್ಲಿ ಸಿನಿಮಾ ನೋಡಿದ ಅಪ್ಪು

ಹೌದು, ಇತ್ತೀಚೆಗಷ್ಟೇ ಸಿನಿಮಾ ತಂಡ ರಾಜ್ಯ ಪ್ರವಾಸ ಮಾಡುತ್ತೇವೆಂದು ಹೇಳಿಕೊಂಡಿತ್ತು. ಇದೀಗ ಈ ಬೆನ್ನಲ್ಲೇ ಮೊದಲ ಹೆಜ್ಜೆ ಎನ್ನುವಂತೆ ಮೈಸೂರಿಗೆ ಪುನೀತ್ ಹಾಗೂ ಅವರ ತಂಡ ಭೇಟಿ ನೀಡಿತ್ತು. ಅಬ್ಬಾ ಪುನೀತ್ ಥಿಯೇಟರ್ ಬಳಿ ಬರ್ತಾ ಇದ್ದ ಹಾಗೇ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಅಭಿಮಾನಿಗಳ ಜೊತೆ ಫೋಟೋಗೆ ಫೋಸ್

ಇನ್ನು ‘ಸಂಗಂ’ ಚಿತ್ರಮಂದಿರದಲ್ಲಿ ಅಭಿಮಾನಿಗಳೊಟ್ಟಿಗೆ ಈ ನಟ ಕುಳಿತು ಸಿನಿಮಾ ನೋಡಿದ್ರು. ಇನ್ನು ಅಪ್ಪು ಥಿಯೇಟರ್ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಕ್ರೇಜ್ ಗೆ ಮುಗಿ ಬಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಯ್ತು. ಇನ್ನು ಅಪ್ಪು ಸಮಾಧಾನದಿಂದ ಅಭಿಮಾನಿಗಳೊಟ್ಟಿಗೆ ಫೋಟೋ, ಸೆಲ್ಫಿಗೆ ಫೋಸ್ ಕೊಟ್ಟರು. ಅತ್ತ ಥಿಯೇಟರ್ ಗಳಲ್ಲಿ ನಟಸಾರ್ವಭೌಮ ಹವಾ ಎದ್ದಿದ್ದರೆ, ಇತ್ತ ರಾಜ್ಯ ಪ್ರವಾಸದಲ್ಲೂ ಹವಾ ಜೋರಾಗಿದೆ.

 

View this post on Instagram

 

ವರ್ಷದ ಮೊದಲ ಫ್ಯಾಮಿಲಿ ಎಂಟರ್ಟೈನರ್ ಬ್ಲಾಕ್ ಬಸ್ಟರ್ “ನಟಸಾರ್ವಭೌಮ” ಥಿಯೇಟರ್ ವಿಸಿಟ್ ಗೆಂದು ಬಂದ ಪವರ್ ಸ್ಟಾರ್ ಪುನೀತ್ ಅವರನ್ನು ನೋಡಲು ಜನ ಸಾಗರದಂತೆ ಹರಿದು ಬಂತು ಅಭಿಮಾನಿ ಬಳಗ 😍😍 Follow ➡️➡️ @prkfc007 ⬅️⬅️ Follow ➡️➡️ @prkfc007 ⬅️⬅️ #PRKFC007 @puneethrajkumar.official @anupamaparameswaran96 @rachita_instaofficial @pavanwadeyar @rocklineent . . . . #appu #puneethrajkumar #zeekannada #natasaarvabhowma #anupamaparameshwaran #kannadaactress #karnataka #kannada #kannadamovies #sandalwoodactress #photography #kgf #villain #thevillain #shivamogga #shivanna #davanagere #mysore #mangalore #mandya #radhikapandit #radhika #mollywood #kolar #kodagu #kollywood #kannadiga #kannadaactress #bangalore #travelkarnataka

A post shared by Puneeth Rajkumar FC 007 (@prkfc007) on

‘ಆರ್ ಆರ್ ಆರ್’ ಚಿತ್ರದಲ್ಲಿ ಈ ಬಾಲಿವುಡ್ ಸ್ಟಾರ್ ಗಳು!!?!!

#balknainews #natasarbbhowma #puneethrajkumar

Tags