ಸುದ್ದಿಗಳು

ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಆಯ್ದ ಚಿತ್ರಗಳ ಪ್ರದರ್ಶನ

ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಆಯ್ದ ಚಿತ್ರಗಳ ಪ್ರದರ್ಶನ ಅ.12ರಿಂದ 17ರವರೆಗೆ ನಡೆಯುವ ಚಿತ್ರೋತ್ಸವ

ಮೈಸೂರು ದಸರಾ ಮಹೋತ್ಸವ-2018 ರ ಅಂಗವಾಗಿ ಮೈಸೂರಿನ ಐನಾಕ್ಸ್ ಮಾಲ್ ನಲ್ಲಿ ಅ.12ರಿಂದ 17ರವರೆಗೆ ಹಮ್ಮಿಕೊಳ್ಳಲಾಗಿರುವ ದಸರಾ ಚಲನಚಿತ್ರೋತ್ಸವದಲ್ಲಿ ಆಯ್ದ ಕೆಲವು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

24 ಚಿತ್ರಗಳು

ಈ ಚಿತ್ರೋತ್ಸವದಲ್ಲಿ ಇಂದಿನ ಸ್ಟಾರ್ ನಟರ ಸಿನಿಮಾಗಳು ಹಾಗೂ ಹಳೆಯ ಸೂಪರ್ ಹಿಟ್ ಚಿತ್ರಗಳು ಸೇರಿದಂತೆ ಒಟ್ಟು 24 ಚಿತ್ರಗಳು ಈ ದಸರಾ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿವೆ. ಅಕ್ಟೋಬರ್ 10 ರಂದು ಬೆಳಿಗ್ಗೆ 10.30 ಕ್ಕೆ ದಸರಾ ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.

ಅತಿಥಿಗಳು

ಅಂದು ಈ ಸಮಾರಂಭದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್ ಎ ಚಿನ್ನೇಗೌಡ, ನಟ ನಿಖಿಲ್ ಕುಮಾರ್, ಹರ್ಷಿಕಾ ಪೂಣಚ್ಚ, ವಿಜಯ ರಾಘವೇಂದ್ರ, ಪಾರೂಲ್ ಯಾದವ್, ರಿಷಬ್ ಶೆಟ್ಟಿ, ಸತ್ಯ ಪ್ರಕಾಶ್ ಸೇರಿದಂತೆ ಚಿತ್ರರಂಗದ ಅನೇಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಿನಿಮಾಗಳ ಲಿಸ್ಟ್

12/10/2018 ರಿಂದ 17/10/2018 ರ ವರೆಗೆ ಈ ಕೆಳಗಿನ ಚಿತ್ರಗಳು ಪ್ರತಿದಿನ ನಾಲ್ಕು ಪ್ರದರ್ಶನದಂತೆ, ಅಂದರೆ ಬೆಳಿಗ್ಗೆ 10, ಮದ್ಯಾಹ್ನ 1, ಸಂಜೆ 4 , ರಾತ್ರಿ 7 ಕ್ಕೆ ಸಮಯ ನಿಗಧಿಯಾಗಿದೆ.

ಮೊದಲ ದಿನ  : ಅಂಜನಿಪುತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು, ಕಾನೂರಾಯಣ, ಗುಳ್ಟು

ಎರಡನೆಯ ದಿನ : ಹೆಬ್ಬೆಟ್ ರಾಮಕ್ಕ, ದಯವಿಟ್ಟು ಗಮನಿಸಿ, ಟಗರು, ನಾಗರಹಾವು,

ಮೂರನೇಯ ದಿನ : ಚಮಕ್, ಒಂದಲ್ಲಾ ಎರಡಲ್ಲಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು ರಾಜು ಕನ್ನಡ ಮೀಡಿಯಂ

ನಾಲ್ಕನೆಯ ದಿನ: ರಾಂಬೋ 2, ಹಸಿರು ರಿಬ್ಬನ್, ಮಫ್ತಿ, ಲೈಫ್ ಜೊತೆ ಒಂದು ಸೆಲ್ಫಿ,

ಐದನೇಯ ದಿನ : ತಾರಕ್, ತಳಂಗ್ ನೀರ್, ರಿಸರ್ವೇಶನ್, ಮುಗುಳುನಗೆ

ಆರನೇಯ ದಿನ : ಸಾವಿತ್ರಬಾಯಿ ಫುಲೆ, ಭರ್ಜರಿ, ಕನಕ, ಗಂಧದ ಗುಡಿ

ಇವೆಲ್ಲಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

Tags