ಸುದ್ದಿಗಳು

ಮೈಸೂರು ದಸರಾಗೆ ಮೈಸೂರ್ ಪಾಕ್

ಬಾಯಲ್ಲಿ ನೀರೂರಿಸುತ್ತೆ ಮೈಸೂರು ಪಾಕ್!!

ಸಿಹಿಸಿಹಿ ‘ಮೈಸೂರು ಪಾಕ್’ ಸವಿಯಲು ಯಾರಿಗಿಷ್ಟವಿಲ್ಲ. ಮೈಸೂರು ಪಾಕ – ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ.ಮೈಸೂರು ಪಾಕ್ ಕರ್ನಾಟಕದ ಒಂದು ಸಮೃದ್ಧ ಸಿಹಿ ಭಕ್ಷ್ಯ ಆಗಿದೆ. ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಮೈಸೂರಿನಲ್ಲಿ 1935ರಲ್ಲಿ ಹುಟ್ಟಿಕೊಂಡ ಈ ಸಿಹಿ ತಿಂಡಿ, ಕೇವಲ 50 ವರ್ಷಗಳಲ್ಲಿ ಭಾರತಾದ್ಯಂತ ಪ್ರಸಿದ್ಧಿಯಾಯಿತು. ಆ ದಿನಗಳಲ್ಲಿ ಮೈಸೂರು ಸಂಸ್ಥಾನವನ್ನು ಮೈಸೂರು  ನಾಲ್ವಡಿ ಕೃಷ್ಣ ರಾಜ ವಡೆಯರ್ ಆಳುತ್ತಿದ್ದರು. ಅರಮನೆಯ ಬಾಣಸಿಗ ‘ಕಾಕಶೂರ ಮಾದಪ್ಪ’, ಒಂದು ದಿನ ಮಹಾರಾಜರಿಗೆ ಆ ತನಕ ತಯಾರಿಸಿದ ಭಕ್ಷ್ಯಗಳಿಗಿಂತ ವಿಭಿನ್ನವಾದದ್ದನ್ನು ಮಾಡಿ ಬಡಿಸುವ ಮನಸಾಯಿತು. ಒಂದೊಳ್ಳೆ ಮುಹೂರ್ತದಲ್ಲಿ ಬಾಣಲೆಗೆ ಈತನ ಕೈಯಿಂದ ಬಿದ್ದ ಸಕ್ಕರೆ-ತುಪ್ಪ-ಕಡಲೆಹಿಟ್ಟು ಒಂದು ಮಾದರಿ ಹದ ಪಡೆದು ಪಾಕವೊಂದು ರೂಪ ತಾಳಿತು. ಮಾದಪ್ಪನಿಗೆ ಹರವಾದ ತಾಟಿನಲ್ಲಿ ಚಿನ್ನದ ಬಣ್ಣದ-ನಸುಗೆಂಪಿನ ಸಿಹಿ ತಿಂಡಿ ಹರಡಿಕೊಂಡು ಘಮಘಮಿಸುತಿತ್ತು. ರಾಜರ ಅಡಿಗೆಯ ಮನಸ್ಸು-ಬುದ್ಧಿ ಕುಣಿದಾಡ ತೊಡಗಿದವು. ಈ ಹೊಸ ಪಾಕಕ್ಕೆ ಏನ ಹೆಸರಿಡಲಿ? ಭೇಷ್ ಎಂದು ಸವಿದು ಮಾದಪ್ಪನ ಪಾಕ ನೈಪುಣ್ಯತೆಗೆ ತಲೆದೂಗಿದ ಮಹರಾಜರಿಗೆ ಆಸ್ಥಾನ ವಿದ್ವಾಂಸರು ಸೂಚಿಸಿದರು. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ತಯಾರಾದ ಈ ಹೊಸ ತಿಂಡಿಗೆ ಮೈಸೂರು ಪಾಕ ಎಂದು ನಾಮಕರಣ ಮಾಡಿ ರೂಢಿಯಲ್ಲಿ ಇದೇ ತಿಂಡಿ ‘ಮೈಸೂರು ಪಾಕ್’ ಆಯ್ತು…

ಮೈಸೂರು ಪಾಕ್ ಗೆ ಹೇರಳ ಪ್ರಮಾಣದಲ್ಲಿ ತುಪ್ಪವನ್ನು ಬಳಸಿ ಮತ್ತು , ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಿ ಮಾಡಲಾಗುತ್ತದೆ. ಸರಳವಾಗಿ ಮೈಸೂರು ಪಾಕ್ ತಯಾರಿಸಬಹುದು. ಶ್ರಮವೂ ಕಡಿಮೆ. ಸಮಯವೂ ಕಡಿಮೆ ಬೇಕಾಗುವುದು ಹಾಗಾದರೆ ತಡ ಯಾಕೆ? ಮೈಸೂರು ಪಾಕ್ ಮಾಡುವುದು ಹೇಗೆ ಅಂಥ ತಿಳಿದುಕೊಳ್ಳಿ.

Image result for mysore pak

ಬೇಕಾಗುವ ಸಾಮಗ್ರಿಗಳು

ಎರಡು ಬಟ್ಟಲು ಕಡಲೇಹಿಟ್ಟು

ಕಾಲು ಕಿಲೋ ತುಪ್ಪ

ನೀರು(ಕಾಲು ಲೋಟ)

ಸಕ್ಕರೆ ಕಾಲು ಕಿಲೋ

Image result for mysore pak

 ಮಾಡುವ ವಿಧಾನ

ಮೊದಲು ಕಡಲೆ ಹಿಟ್ಟನು ಸ್ವಲ್ಪತುಪ್ಪದಲ್ಲಿ ಘಮಘಮ ವಾಸನೆ ಬರುವವರೆಗೂ ಹುರಿಯಿರಿ

ಸಕ್ಕರೆಗೆ ನೀರು ಹಾಕಿ ಗಟ್ಟಿ ಎಳೆಪಾಕ ಬರುವಂತೆ ಕುದಿಸಿ

ಪಾಕ ಚೆನ್ನಾಗಿ ಎಳೆ ಬಂದಮೇಲೆ ಒಲೆಯಮೇಲಿದ್ದಾಗಲೇ ಅದಕ್ಕೆ ಹಿಟ್ಟನ್ನು ಸುರಿಯಿರಿ ಉಳಿದತುಪ್ಪವನ್ನು ಒಂದೇಸಮನೆ ಹಾಕುತ್ತಾ ತಿರುವುತ್ತಿರಿ

ಮಿಶ್ರಣ ಪಾತ್ರೆಯ ತಳ ಬಿಡುವ ಹೊತ್ತಿಹೆ ತುಪ್ಪ ಸವರಿದ ತಟ್ಟೆಗೆ ಸುರಿಯಿರಿ

ಐದು ನಿಮಿಷದ ಬಳಿಕ ಚಾಕುವಿನಿಂದ ಬೇಗಾದ ಆಕಾರಕ್ಕೆ ಕತ್ತರಿಸಿ

ನಂತರ ಒಂದು ಕಾಗದದ ಮೇಲೆ ಬೋರಲು ಹಾಕಿ

ಮೈಸೂರ್ ಪಾಕ ತಾನಾಗೇ ಬಿಡಿಬಿಡಿಯಾಗಿ ಇದ್ದು ತಿನ್ನಲು ಚೆನ್ನ..

Related image

Tags