ಪುರುಷಬಾಲ್ಕನಿಯಿಂದಮಹಿಳೆಲುಕ್ಸ್ಸುದ್ದಿಗಳು

ಸರಿಗಮಪ ಸೀಸನ್-13 ಮೂಲಕ ಮನೆ ಮಾತಾಗಿರುವ ಮೈತ್ರಿ ಅಯ್ಯರ್ ರವರ ಜನ್ಮ ದಿನ ಆಚರಣೆ

ಬೆಂಗಳೂರು.ಏ.05: ಸರಿಗಮಪ ಸೀಸನ್-13 ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಕರ್ನಾಟಕದ ಮನೆಮಾತಾಗಿರುವ ಗಾಯಕಿ ಮೈತ್ರಿ ಅಯ್ಯರ್ ಅವರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು.

ಇತ್ತೀಚೆಗಷ್ಟೇ ಮೈತ್ರಿ ಅವರ ಜನ್ಮದಿನ. ಉಳಿದವರಂತೆ ವೈಭವೋಪೇತವಾಗಿ ಹುಟ್ಟುಹಬ್ಬವನ್ನು ಆಚರಿಸುವ ಬದಲು ಅವರು ವಿಜಯನಗರದ ನಚಿಕೇತ ಮನೋವಿಕಾಸ ಕೇಂದ್ರದಲ್ಲಿ ಸರಳವಾಗಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಆ ಪುಟಾಣಿಗಳಿಗೆ ತಾವೇ ಆಹಾರ ನೀಡಿ, ಅರ್ಥಪೂರ್ಣವಾಗಿ ತಮ್ಮ ಬರ್ತಡೆ  ಆಚರಿಸಿಕೊಂಡರು. ಅವರಿಗೆ ನಮ್ಮ ಕಡೆಯಿಂದಲೂ ಜನ್ಮದಿನದ ಶುಭಾಶಯಗಳು.

 

 

Tags