ಸುದ್ದಿಗಳು

‘ನಾಕುಮುಖ’ ಚಿತ್ರದ ತಾಯಿಯ ಸೆಂಟಿಮೆಂಟ್ ಹಾಡನ್ನು ಬಿಡುಗಡೆಗೊಳಿಸಲಿರುವ ತಾಯಿ

ಚಿತ್ರತಂಡದ ತಾಯಂದಿರು ಬಿಡುಗಡೆಗೊಳಿಸಲಿರುವ ಸಾಂಗ್

ಬೆಂಗಳೂರು.ಮೇ.15: ಇತ್ತೀಚೆಗಷ್ಟೇ ತನ್ನ ವಿಭಿನ್ನ ಮೋಷನ್ ಪೋಸ್ಟರ್ ಟೀಸರ್ ಮೂಲಕ ರಕ್ತ ಬೀಜಾಸುರ ಕಥೆಯನ್ನು ‘ನಾಕುಮುಖ’ ಚಿತ್ರವು ತಿಳಿಸಿತ್ತು. ಇದೀಗ ಈ ಚಿತ್ರದಿಂದ ಅಮ್ಮನ ಸೆಂಟಿಮೆಂಟ್ ಅನ್ನು ಒಳಗೊಂಡ ಹಾಡೊಂದು ರಿಲೀಸ್ ಆಗುತ್ತಿದೆ. ವಿಶೇಷವೆಂದರೆ, ಈ ಹಾಡನ್ನು ಚಿತ್ರತಂಡದ ಎಲ್ಲಾ ಅಮ್ಮಂದಿರು ಬಿಡುಗಡೆ ಮಾಡುತ್ತಿದ್ದಾರೆ.


ಹೌದು, ತಾಯಿಯ ಈ ಸೆಂಟಿಮೆಂಟ್ ಒಳಗೊಂಡ, ವಿಜಯ ಪ್ರಕಾಶ್ ಹಾಡಿರುವ “ಅಳುವುದಾದರೆ ಅತ್ತುಬಿಡು” ಹಾಡನ್ನು ಚಿತ್ರ ತಂಡದ ತಾಯಂದಿರು ಒಟ್ಟಿಗೆ ಸೇರಿ ನಾಳೆ ಬೆಳಿಗ್ಗೆ ಆನಂದ ಆಡಿಯೋದಲ್ಲಿ ಬಿಡುಗಡೆ ಮಾಡಲ್ಲಿದ್ದಾರೆ.

ನಾಕುಮುಖ.. ಹೆಸರಿಗೆ ತಕ್ಕಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಪ್ರತಿ ಹಂತದಲ್ಲೂ ನಿಗೂಢವಾಗಿ ಸಾಗುವ ಕತೆ ನೋಡುಗರ ಎದೆ ಬಡಿತವನ್ನು ಹೆಚ್ಚಿಸುವುದರ ಜೊತೆಗೆ, ಮನರಂಜನೆಯನ್ನು ನೀಡುತ್ತದೆ ಎನ್ನುತ್ತಾರೆ ಕತೆ, ಚಿತ್ರಕತೆ, ಹಾಡು ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ ನಿರ್ದೇಶಕ ಕುಶನ್ ಗೌಡ.


ಇನ್ನು ಚಿತ್ರದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಬಲ ರಾಜ್ವಾಡಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ, ಅಶ್ವಿನ್ ಶರೀಪ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರಕ್ಕೆ ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ.

ಕೇಳುಗರಿಗೆ ಗುಂಗು ಹಿಡಿಸಿದ ‘ರುಸ್ತುಂ’ ಚಿತ್ರದ ಸಾಂಗ್

 

#naakumookha, #mother, #song, #balkaninews #kannadasuddigalu

Tags