ಸುದ್ದಿಗಳು

ಮತ್ತೆ ಒಂದಾಗುತ್ತಿದ್ದಾರೆ ರಿಷಭ್- ಕಿಶೋರ್..

"ನಾಥೂರಾಮ್' ಎಂಬ ಸಿನಿಮಾದಲ್ಲಿ ಕಿಶೋರ್

ಬೆಂಗಳೂರು,ಸೆ.11: ಕಿಶೋರ್ ಈಗ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಛಾಪನ್ನು ಮೂಡಿಸಲು ತಯಾರಾಗಿದ್ದಾರೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನು ಬಳಂಜ ಅವರು “ನಾಥೂರಾಮ್‌’ ಎಂಬ ಸಿನಿಮಾ ನಿರ್ದೇಶಿಸಲು ಮುಂದಾಗಿರುವುದು ಗೊತ್ತೇ ಇರುವ ವಿಷಯ. ರಿಷಭ್‌ ಶೆಟ್ಟಿ ಈ ಚಿತ್ರದ ನಾಯಕ. ಈ ಚಿತ್ರಕ್ಕೆ ಈಗ ಕಿಶೋರ್ ಸೇರ್ಪಡೆಯಾಗಿದ್ದಾರೆ. ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Related image

ಉಳಿದವರು ಕಂಡಂತೆನಂತರ ಒಂದಾದ ಜೋಡಿ

ಕೆಲವೇ  ತಿಂಗಳ ಹಿಂದೆಯಷ್ಟೇ ರಿಷಬ್​​​ ಶೆಟ್ಟಿ ಅಭಿನಯದಲ್ಲಿ ಇಂಥದ್ದೊಂದು ಚಿತ್ರ ಶುರುವಾಗಲಿದೆ ಎಂದು ಹೇಳಲಾಗಿತ್ತು. ಆ ನಂತರ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಈಗ ಈ ಚಿತ್ರದಲ್ಲಿ ಕಿಶೋರ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕಥೆ ಹಾಗೂ ಪಾತ್ರ ಕೇಳಿ ಖುಷಿಯಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಈ ಹಿಂದೆ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಕಿಶೋರ್ ಮತ್ತು ರಿಷಭ್ ನಟಿಸಿದ್ದರು. ಈಗ ‘ನಾಥೂರಾಮ್’ ಮೂಲಕ ಮತ್ತೆ ಒಂದೇ ಚಿತ್ರದಲ್ಲಿ ಇಬ್ಬರೂ ನಟಿಸಿದಂತಾಗುತ್ತದೆ.

Tags