ಸುದ್ದಿಗಳು

ನಾವೇ ಭಾಗ್ಯವಂತರು ಧ್ವನಿ ಸುರುಳಿ ಬಿಡುಗಡೆ

ಈಗಿನ ಕಾಲದ ಯುವಜನತೆ ಕುರಿತು ಸಿನಿಮಾ

ಬೆಂಗಳೂರು,ಅ.11: ಸ್ಯಾಂಡಲ್‌ವುಡ್‌ ನಲ್ಲಿ ಇತ್ತೀಚಿನ ದಿನಗಳಲ್ಲಿ ವಿಭಿನ್ನವಾದ ಶೀರ್ಷಿಕೆ, ವಿಭಿನ್ನವಾದ ಪರಿಕಲ್ಪನೆ ಹಾಗೂ ಅದೇ ಸಾಲಿನಲ್ಲಿ ಹೊಸಬರ ತಂಡ ಚಿತ್ರಕ್ಕೆ ‘ನಾವೇ ಭಾಗ್ಯವಂತರು’ ಅನ್ನೋ ಶೀರ್ಷಿಕೆ ಇಟ್ಟಿದ್ದಾರೆ.. ಸದ್ಯ ಚಿತ್ರದ ಆಡಿಯೋವನ್ನುಬಿಡುಗಡೆ  ಮಾಡಿದೆ ಚಿತ್ರತಂಡ.

ನಾವೇ ಭಾಗ್ಯವಂತರುಚಿತ್ರದ ಆಡಿಯೋ ರಿಲೀಸ್

‘ನಾವೇ ಭಾಗ್ಯವಂತರು’, ಸದ್ಯ ಆಡಿಯೋ ಬಿಡುಗಡೆ ಮಾಡಿರೋ ಚಿತ್ರತಂಡ.. ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ನಾವೇ ಭಾಗ್ಯವಂತರು’ ಸಿನಿಮಾ ಒಂದು ವಿಭಿನ್ನವಾದ ಕಥೆಯನ್ನ ಹೊಂದಿರೋ ಸಿನಿಮಾ.. ಈಗಿನ ಕಾಲದ ಯುವಜನತೆ ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ.. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ‘ನಾವೇ ಭಾಗ್ಯವಂತರು’ ಎಂಬ ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕ ಎಂ.ಹರಿಕೃಷ್ಣ..

ಬೆಂಕೋಶ್ರೀ ಹಾಗೂ ಚಿನ್ನೇಗೌಡ್ರಿಂದ ಆಡಿಯೋ ಲಾಂಚ್

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡರು, ಚಲನಚಿತ್ರ ನಿರ್ಮಾಪಕರಾದ ಡಾ.ಬೆಂಕೋ ಶ್ರೀನಿವಾಸ್ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯರಂತಹ ದಿಗ್ಗಜರೆಲ್ಲಾ ಸೇರಿ ‘ನಾವೇ ಭಾಗ್ಯವಂತರು’ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದ್ದಾರೆ.. ಈ ಚಿತ್ರದ ೩ಜನ ನಾಯಕರು ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ|| ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್‌ನಾಗ್ ರವರ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ.. ಅಲ್ಲದೆ ಅವರ ಆದರ್ಶಗಳನ್ನು ತಪ್ಪದೇ ಪಾಲಿಸುವ ಈ ಹುಡುಗರಲ್ಲಿರುವ ಕೆಟ್ಟ ಅಭ್ಯಾಸ ಎಂದರೆ ಮದ್ಯಪಾನ ಎನ್ನುವುದನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ಹೇಳಲಾಗಿದೆ.. ಹರಿಕೃಷ್ಣ ಮೂಲತಃ ಒಬ್ಬ ಛಾಯಾಗ್ರಾಹಕರು. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ..

ಶ್ರವಂತ್, ಲೊಕೇಶ್, ದಿವ್ಯ, ಚಂದನ, ಶಿಲ್ಪರವಿ ಚಿತ್ರದಲ್ಲಿದ್ದಾರೆ

ಸೂರಜ್ ಶ್ರಾವಂತ್, ಲೋಕೇಶ್, ದಿವ್ಯ, ಚಂದನಗೌಡ ಹಾಗೂ ಶಿಲ್ಪ ರವಿ ಈ ಚಿತ್ರದ ನಾಯಕ – ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿದೇವಮ್ಮ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ನಾರಾಯಣಸ್ವಾಮಿ, ರಾಮಕೃಷ್ಣ, ಅಂಜನಪ್ಪ, ಸುಚೇಂದ್ರ ಪ್ರಸಾದ್, ಬೇಬಿ ಕಾರುಣ್ಯ, ಮಿಮಿಕ್ರಿ ರಾಜು ಹೀಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ..

ಎಂ.ಪ್ರಕಾಶ್ ಹಾಗೂ ಹೆಚ್.ಎಸ್.ಅಶ್ವಥ್ ನಿರ್ಮಾಣವಿದೆ

ಎಂ.ಪಿ.ಬಸವಣ್ಣ ಈ ಚಿತ್ರಕ್ಕೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ.. ಇನ್ನು ಈ ಚಿತ್ರಕ್ಕೆ ಎಂ.ಪ್ರಕಾಶ್ ಹಾಗೂ ಹೆಚ್.ಎಸ್. ಅಶ್ವಥ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.. ರಾಜವಿಸ್ಕಿಯಿಂದಾಗುವ ಅನಾಹುತವನ್ನು ಹೇಳುವ ಚಿತ್ರ ಇದಾಗಿದ್ದು, ೩ ಜನ ನಾಯಕರಾದರೂ ಒಂದೊಂದು ಕಥೆ ಇರುತ್ತಂತೆ.. ಈ ೩ ಜನರ ಕಥೆಯಲ್ಲಿ ಮದ್ಯಪಾನದ ದುಷ್ಪರಿಣಾಮ ಹಾಗೂ ತಾಯಿ ಸೆಂಟಿಮೆಂಟ್ ಕಾಮನ್ನಾಗಿದೆ. ಕನ್ನಡ ಚಿತ್ರರಂಗದ ಮೂವರು ದಿಗ್ಗಜರ ಅಭಿಮಾನಿಗಳಾಗಿದ್ದ ಇವರು ಹೇಗೆ ತಮ್ಮ ತಪ್ಪನ್ನು ತಿದ್ದಿಕೊಂಡು ಬದಲಾದವರು ಭಾಗ್ಯವಂತರು ಎನ್ನುವುದೇ ಈ ಚಿತ್ರ ಕಥೆಯಾಗಿದೆ..

ಸದ್ಯದಲ್ಲಿಯೇ ತೆರೆಗೆ ಬರಲು ರೆಡಿಯಾಗಿರೋ ಚಿತ್ರ

ಒಟ್ಟಿನಲ್ಲಿ ಚಿತ್ರದ ಆಡಿಯೋವನ್ನು ರಿಲೀಸ್ ಮಾಡಿರೋ ‘ನಾವೇ ಭಾಗ್ಯವಂತರು’ ಸಿನಿಮಾ, ಸದ್ಯದಲ್ಲಿಯೇ ಚಿತ್ರವನ್ನು ತೆರೆಗೆ ತರೋ ಪ್ಲಾನ್ ಮಾಡ್ತಿದೆ.. ಇನ್ನು ಈ ಚಿತ್ರದಲ್ಲಿ ಏನೆಲ್ಲಾ ವಿಶೇಷತೆಗಳು ಇರುತ್ತವೆ ಅಂತಾ ಕಾದು ನೋಡಬೇಕು..

 

 

Tags