ಸುದ್ದಿಗಳು

‘ಇಸ್ಮಾರ್ಟ್ ಶಂಕರ್ ‘ ಬಿಡುಗಡೆಗೂ ಮುನ್ನವೇ ಸುದ್ದಿಯಲ್ಲಿರುವ ನಭಾ ನಟೇಶ್!

ಕನ್ನಡದ ನಟಿ ನಭಾ ನಟೇಶ್ ತೆಲುಗಿನಲ್ಲಿ ಸದ್ದಿಲ್ಲದೇ ಸುದ್ದಿ ಮಾಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವಜ್ರಕಾಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಬೆಡಗಿಗೆ ತೆಲುಗಿನಲ್ಲಿ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದಿವೆ.

ಇದೀಗ ನಭಾ ನಟೇಶ್ ಮುಂಬರುವ ಚಿತ್ರ ‘ಇಸ್ಮಾರ್ಟ್ ಶಂಕರ್ ‘ ಬಿಡುಗಡೆಗೆ ಮುನ್ನವೇ ಸುದ್ದಿಯಲ್ಲಿದೆ. ಈ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶಿಸುತ್ತಿದ್ದು, ನಾಯಕನಾಗಿ ಟಾಲಿವುಡ್ ಸ್ಟಾರ್ ರಾಮ್ ಪೊಥಿನೇನಿ ಅಭಿನಯಿಸುತ್ತಿದ್ದಾರೆ.

Image result for nabha natesh ismart shankar

ಅಂದಹಾಗೆ ನಭಾ ನಟೇಶ್ ಈ ಚಿತ್ರದಲ್ಲಿ ಸ್ಟ್ರಾಂಗ್ ಪಾತ್ರ ನಿರ್ವಹಿಸುತ್ತಿದ್ದು, ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಟ್ರೇಲರ್ ನಲ್ಲಿ ಬರುವ ನಭಾ ಡೈಲಾಗ್ ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು, ತೆಲುಗು ವೀಕ್ಷಕರ ಗಮನಸೆಳೆದಿದೆಯಂತೆ.

ಅಷ್ಟೇ ಅಲ್ಲ, ನಭಾ ಇತ್ತೀಚೆಗೆ ಬೊನಾಲು ಇವೆಂಟ್ ವೇಳೆ ಮಾತನಾಡಿರುವುದು ಯೂಟ್ಯೂಬ್ ನಲ್ಲಿ ನಂ 2 ಟ್ರೆಂಡಿಂಗ್ ನಲ್ಲಿದೆ. ಈಗಾಗಲೇ ‘ಇಸ್ಮಾರ್ಟ್ ಶಂಕರ್’ ನಾನಾ ಕಾರಣಗಳಿಗೆ ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸುತ್ತಿದ್ದು, ನಭಾ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಚಿತ್ರ ಬಿಡುಗಡೆಯಾದ ಮೇಲೆ ನೋಡಬೇಕು. ಜುಲೈ 18 ರಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಫೇಸ್ ಬುಕ್ , ಟ್ವಿಟರ್ ಗೆ ಲಗ್ಗೆ ಇಟ್ಟ ಶಿವಣ್ಣ!!

#balkaninews #nabhanatesh # ismartshankar # telugu

Tags